ಧಾರಾಕಾರ ಸುರಿಯುತ್ತಿರುವ ಭಾರಿ ಮಳೆಯಿಂದ ರಸ್ತೆಗಳು ತಗ್ಗು ಗುಂಡಿ ಬಿದ್ದು ಚಾಲಕರು ದಿನ ನಿತ್ಯ ಮಧ್ಯೆ ಯಾದಗಿರಿ ಟೂ ಶಹಾಪೂರ ಮಾರ್ಗವಾಗಿ ಹೊರಡುವ ಹೆದ್ದಾರಿಯ ಭೀಮಾ ಸೇತುವೆಯಲ್ಲಿ ಸಾಕಷ್ಟು ಬಿದ್ದ ತಗ್ಗು ಗುಂಡಿಗಳು ವಾಹನ ಸವಾರರ ಅಪಾಯಕ್ಕೆ ಆಹ್ವಾನಿಸುತ್ತಿವೆ ಎಂದು ಪ್ರಾದೇಶಿಕ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಮತ್ತು ಸಾಮಾಜಿಕ ಹೋರಾಟಗಾರ ಉಮೇಶ್ ಕೆ ಮುದ್ನಾಳ ಅವರು ಸ್ಥಳಕ್ಕೆ ಭೇಟಿ ಆಕ್ರೋಶ ವ್ಯಕ್ತಪಡಿಸಿದರು.
ಯಾದಗಿರಿ ಶಹಾಪುರ ರಸ್ತೆಯ ಮಾರ್ಗ ಜಿಲ್ಲೆಗೆ ಸಂಪರ್ಕಿಸುವ ಪ್ರಮುಖ ಹೆದ್ದಾರಿಯಾದ ಹೈದರಾಬಾದ್ ಮತ್ತು ಗುಲ್ಬರ್ಗಾ ಈ ರಾಜ್ಯದ ಪ್ರಮುಖ ನಗರಗಳಿಗೆ ಹೋಗಬೇಕಾದರೆ ಯಾದಗಿರಿ ನಗರ ರೈಲ್ವೆ ಬ್ರಜ್ ಬರುತ್ತಿದ್ದಂತೆ ಭೀಮಾಸೇತುವೆಯ ಅಪಾಯ ರಸ್ತೆ
ನಿಮಗೆ ಸ್ವಾಗತ ಕೋರುತದ್ದೇ.ಸಮತಟ್ಟಾಗಿ ಇರಬೇಕಾದ ರಸ್ತೆ ತಂಗು ಗುಂಡಿಗಳನ್ನು ತಪ್ಪಿಸಲು ಹೋಗಿ ಅಪಘಾತಗಳು ಸಂಭವಿಸುತಿವ್ವೆ ಭಾಗದಲ್ಲಿ ಹೆಚ್ಚು ಕಮ್ಮಿಯಂತೆ ಚಾಲಕರು ಮೈ ಮರೆತು ವಾಹನ ಚಾಲಹಿಸಿದರೆ ಅಪಾಯ ಸಂಭವಿಸುವುದು
ಸಾಕಷ್ಟು ಪ್ರಮಾಣದಲ್ಲಿ ತಗ್ಗುಂಡಿಗಳು ಬಿದ್ದು ಈ ತಗ್ಗುಂಡುಗಳಿಂದ ವಾಹನ ಸವಾರರಿಗೆ ಸಂಚಾರಕ್ಕೆ ತೊಂದರೆಯಾಗುತ್ತದೆ. ಗಿರಿ ಜಿಲ್ಲೆಯ ಎಂದೇ ಖ್ಯಾತಿಯಾಗಿರುವ ಯಾದಗಿರಿ ಜಿಲ್ಲೆ ಈಗಿನ ಪರಿಸ್ಥಿತಿ ನೋಡಿದರೆ ಜಿಲ್ಲೆಯ ಎಲ್ಲ ಕಡೆಯೂ ಗುಂಡಿಗಳು ಬಿದ್ದು ಜಿಲ್ಲೆ ಗುಂಡಿಗಳ ನಗರವಾಗಿ ಮಾರ್ಪಟ್ಟಿದೆ ಕೂಡಲೇ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ತಗ್ಗು ಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ವಾಹನ ಸಾವರಿಗೆ ಅನುವು ಮಾಡಬೇಕು ಎಂದು ಹೇಳಿದರು.
ಹೈದ್ರಾಬಾದ ಸಿಂದಗಿ ರಾಜ್ಯ ಪ್ರಮುಖ ಹೆದ್ದಾರಿಯಾಗಿರುವ ಈ ರಸ್ತೆಯ ಮೇಲೆ ನಿತ್ಯವೂ ಸಾವಿರಾರು ವಾಹನಗಳು ಸಂಚರಿಸುತ್ತವೆ. ಆದರೆ, ಸುರಕ್ಷತೆಯ ಸಂಚಾರಕ್ಕಾಗಿ ಸುಂದರ ರಸ್ತೆ ಮಾಡುವ ನಿಟ್ಟಿನಲ್ಲಿ ಸಂಬಂಧಿಸಿದವರು ಮಾತ್ರ ಈ ಕಡೆ ಗಮನ ಹರಿಸದೇ ಇರುವುದು ಮಾತ್ರ ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಯಾದಗಿರಿ ನಗರದಿಂದ ಮೂರು ಕಿಲೋ ಮೀಟರ್ ವರೆಗೆ ಸಂಚರಿಸುವುದು ಪ್ರಾಣವೇ ಕೈಯಲ್ಲಿ ಇಟ್ಟುಕೊಂಡು ಹೋಗುವ ಪ್ರಸಂಗ ಜಿಲ್ಲೆಯ ಜನರಿಗೆ ಸದ್ಯಕ್ಕೆ ಬಂದಿದೆ
ಇಷ್ಟೆಲ್ಲಾ ಗುಂಡಿಗಳು ಬಿದ್ದರೂ ಸರಿಪಡಿಸಲು ಮುಂದಾಗದೆ ಬೇಜವಾಬ್ದಾರಿಯನ್ನು ತೋರುವುದು ಎಷ್ಟುರ ಮಟ್ಟಿಗೆ ಸರಿ ಇದು ಇದಕ್ಕೆಲ್ಲ ಅಧಿಕಾರಿಗಳ ಬೇಜವಾಬ್ದಾರಿನ್ನೋ ಅಥವಾ ಜನಪ್ರತಿನಿಧಿಗಳ ಬೇಜವಾಬ್ದಾರಿನ್ನೋ ನಮಗೆ ಗೊತ್ತಾಗುತ್ತಿಲ್ಲ ಎಂದು ಕಿಡಿಕಾರಿದ್ದರು.
ಇದೆ ರಸ್ತೆ ಸೇತುವೆ ಮೇಲೆ ಜನಪ್ರತಿನಿದಿನಗಳು ಅಧಿಕಾರಿಗಳು ಸಂಚಾರ ಮಾಡಿದ್ರು ಕೂಡ ಕಣ್ಣು ಹೆತ್ತಿ ನೋಡದಿರೋದು ದುರದೃಷ್ಟಕರ ಸಂಗತಿ
ಯಾದಗಿರಿ ಶಹಾಪೂರ ಮಾರ್ಗದಲ್ಲಿ ಪ್ರಯಾಣಿಕರ ಸುಗಮ ಸಂಚಾರಕ್ಕಾಗಿ ಈಗಲಾದರೂ ಆವಾಯಕ್ಕಿಂತ ಮುಂಚೆಯೇ ಎಚ್ಚರವಹಿಸಬೇಕಿದೆ. ಕೆಟ್ಟು ಹೋಗಿರುವ ರಸ್ತೆ ಸರಿ ಮಾಡುವ ಮನಸ್ಸು ಅಧಿಕಾರಿಗಳು ಮಾಡಲಿ ಎನ್ನುವುದು ಮುದ್ನಾಳ ಅವರು ಒತ್ತಾಯಿಸಿದರು.
ಈ ರಸ್ತೆಯ ತಗ್ಗು ಗುಂಡಿಗಳನ್ನು ಕೂಡಲೇ ಮುಚ್ಚದೆ ಹೋದರೆ ವಾಹನ ಸವಾರರ ಜೊತೆಗೂಡಿ ಜಿಲ್ಲಾಡಳಿತ ಕಛೇರಿಯ ಮುಂದೆ ಸರಕಾರಕ್ಕೆ ಕಪ್ಪು ಬಾವುಟ ಹಿಡಿದುಕೊಂಡು ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ