ಯಾದಗಿರಿ ಮತಕ್ಷೇತ್ರದ ವ್ಯಾಪ್ತಿಗೆ ಬರುವ ಮುದ್ನಾಳ ಉಮ್ಲನಾಯಕ ತಂಡಕ್ಕೆ ಸ್ವಾತಂತ್ರ್ಯ ಸಿಕ್ಕು78 ವರ್ಷ ಗಳಿಸಿದರು ಇಲ್ಲಿಯವರೆಗೂ ಇನ್ನು ಅಭಿವೃದ್ಧಿ ಕಾಣದೇ ಗಬ್ಬೆದ್ದು ನಾರುತ್ತಿದೆ. ಕಲುಷಿತ ನೀರಿನಲ್ಲಿ ವಿಷ ಜಂತವಳಿಂದ ಸಾರ್ವಜನಿಕರು ಶಾಲಾ ಮಕ್ಕಳು ತಿರಿಗಾಡಲು ಭಯದ ವಾತಾವರಣ ನಿರ್ಮಾಣವಾಗಿದೆ.
ಸೂಕ್ತವಾದ ಚರಂಡಿ ಸಿಸಿ ರಸ್ತೆ ಇಲ್ಲದ ಕಾರಣ ತೆಗ್ಗುಗುಂಡಿಗಳಲ್ಲಿ ನಿಂತು ಗಬ್ಬೆದ್ದು ನಾರುತ್ತಿದೆ ಇದರಿಂದಾಗಿ ತಾಂಡದ ನಿವಾಸಿಗಳು ಮೂಗು ಮುಚ್ಚಿಕೊಂಡು ತಿರುಗಾಡುವ ಪರಿಸ್ಥಿತಿ ಇದೆ
ಇದನ್ನು ಸರಿಪಡಿಸಲು ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ. ಮುದ್ನಾಳ
ಅವರು ವಿನೂತನವಾಗಿ ಜಿಟಿ ಜಿಟಿ ಮಳೆಯಲ್ಲಿ ಕೈಯಲ್ಲಿ ಛತ್ರಿ ಹಿಡಿದು ಪ್ರತಿಭಟನೆ ಮಾಡಿದರು.
ಸಂಬಂಧಿಸಿದವರಿಗೆ ಗಮನಕ್ಕೆ ತಂದರು ಸಹ ಯಾವುದೇ ಕ್ರಮ ಕೈಗೊಳ್ಳದೇ ತಾಂಡದಲ್ಲಿ ಗಲಿಜು ಗೊಜ್ಜಲಿನಲ್ಲಿಯೇ ತಿರುಗಾಡುವ ವ್ಯವಸ್ಥೆ ಸೃಷ್ಟಿಯಾಗಿದ್ದರೂ ಕ್ಯಾರೆ ಎನ್ನದೇ ಇದ್ದುದರಿಂದ ತಮ್ಮ ಗಮನಕ್ಕೆ ತಂದ ಕೂಡಲೇ ಇಂದು ಬೆಳಗ್ಗೆ ಭೇಟಿ ನೀಡಿದ
ಉಮೇಶ್ ಮುದ್ನಾಳ ಅವರು ದಿಢೀರನೇ ಪ್ರತಿಭಟನೆ ಮಾಡುವುದು ಅನಿವಾರ್ಯವಾಯಿತ್ತು.
ಇದರಿಂದ ತಾಂಡಾದಲ್ಲಿ ಡೆಂಗು ಸಾಂಕ್ರಾಮಿಕ ರೋಗ ಹರಡುತ್ತಿದ್ದು ಸೊಳ್ಳೆಗಳ ಹಾವಳಿಗೆ ಜನ ಜಾನುವಾರುಗಳು ತತ್ತರಿಸಿವೆ ಎಂದು ಹೇಳಿದರು.
ವಿದ್ಯುತ್ ಸಮಸ್ಯೆ ಮತ್ತು ಕುಡಿಯುವ ನೀರಿನ ಸಮಸ್ಯೆ ಚರಂಡಿಯ ಸ್ಲಾಬ್ ಹೊಡೆದು ಎತ್ತುಬಂಡಿ, ವಾಹನಗಳು, ದ್ವಿಚಕ್ರ ವಾಹನಗಳು ಸಂಚರಿಸುವಾಗಿ ಹೊಲಸಿನಲ್ಲಿ ಬಿದ್ದು ಸಂಕಷ್ಟ ಎದುರಿಸುವುದು ನಿತ್ಯದ ಸಂಗತಿಯಾಗಿದೆ. ಶುದ್ಧ ಕುಡಿವ ನೀರು ತರಬೇಕೆಂದರೂ ಹೊಲಸಿನಲ್ಲಿಯೇ ಸಾಗಬೇಕಿದೆ.
ಲಕ್ಷ ಲಕ್ಷ ರೂ. ಗಳು ತಾಂಡಗಳ ಅಭಿವೃದ್ಧಿಗೆ ಬಂದ ಹಣ ಯಾರ ಮನೆಯ ತಿಜೋರಿ ಸೇರಿದೆ ಎಂಬುದು ಅರ್ಥವಾಗದ ಪರಿಸ್ಥಿತಿ ತಾಂಡದಲ್ಲಿ ಇದೆ ಎಂದು ಅವರು ಇದೇ ಸಂದರ್ಭದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಇಪ್ಪತ್ತು ನಾಲ್ಕು ಗಂಟೆಗಳಲ್ಲಿ ಸಂಭಂದಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸದೆ ಇದ್ದರೆ ಗ್ರಾಮ ಪಂಚಾಯತಿ ಕಾರ್ಯಾಲಯಕ್ಕೆ ಜಾಲಿ ಮುಳ್ಳು ಬಡೆದು ಪ್ರತಿಭಟನೆ ನಡೆಸಲಾಗುವುದು ಎಂದು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ