ಕೆಂಪೇಗೌಡರ ಇತಿಹಾಸ ಮತ್ತು ಅವರ ಕುಟುಂಬದ ಇತಿಹಾಸವು ಬಹಳ ದೊಡ್ಡದಾಗಿದ್ದು ಓರ್ವ ಸಾಮಂತ ರಾಜನಾಗಿದ್ದರು ಸಹ ಅವರು ರಾಜ್ಯವನ್ನು ವಿಸ್ತರಿಸಿದ ರೀತಿ ಪ್ರಶಂಸನೀಯವಾಗಿದೆ ಎಂದು ಪ್ರೊ. ಮುದ್ದಲಿಂಗಪ್ಪ ತಿಳಿಸಿದರು.
ಪಾವಗಡ ತಾಲೂಕಿನ ಮುಗದಾಳಬೆಟ್ಟ ಗ್ರಾಮದಲ್ಲಿ ಆಯೋಜಿಸಿದ್ದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದರು. ಮಾಗಡಿಯಿಂದ ಪ್ರಾರಂಭವಾದ ಕೆಂಪೇಗೌಡರ ಸಾಮ್ರಾಜ್ಯ ಅದ್ಭುತವಾಗಿ ಬೆಳೆಯಿತು ಎಂದು ಹಲವು ವಿಚಾರಗಳನ್ನು ತಿಳಿಸಿದರು.