. ಹಳ್ಳಿ ಜನರಿಗೆ ಹೈದ್ರೋಗ ಸೇವೆ ತ್ವರಿತವಾಗಿ ಸಿಗಲು ಹಾರ್ಟ್ಲೈನ್ ಸೇವೆ ಜಾರಿ ಮಾಡಲಾಗುತ್ತಿದೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಡಾ.ಅಜಯ್ ಸಿಂಗ್ ಅವರು ಹೇಳಿದ್ದಾರೆ
ಕಲಬುರಗಿ ನಗರದಲ್ಲಿನ ಎಸ್. ಎಮ್ ಪಂಡಿತ್ ರಂಗಮಂದಿರದ ಮುಂಭಾಗದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಜಯದೇವ ಹೈದ್ರೋಗ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರಕ್ಕೆ ಭೇಟಿ ಕೊಟ್ಟ ಅವರು ನಿರ್ಮಾಣ ಹಂತದ ಆಸ್ಪತ್ರೆಯನ್ನು ಪರಿಶೀಲಿಸಿ ಮಾತನಾಡಿ ಜಯದೇವ ಹೈದ್ರೋಗ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದ ಈ ಒಂದು ಯೋಜನೆಯು ಕೆಕೆಆರ್’ಡಿಬಿ ಅನುದಾನದಲ್ಲಿನ ಒಂದು ದೊಡ್ಡ ಮಹತ್ವಾಕಾಂಕ್ಷೆ ಯೋಜನೆಯಾಗಿದ್ದೂ, ಇದರ ಸಂಪೂರ್ಣ ಹಣ ಬಿಡುಗಡೆಯಾಗಿದ್ದೂ ನಮ್ಮ ಮಂಡಳಿಯ ವತಿಯಿಂದ, ಈಗಾಗಲೇ 182 ಕೋಟಿ 65 ಲಕ್ಷ ಹಾಗೂ ನಲವತ್ತು ಕೋಟಿ, ಎಲ್ಲವೂ ಸೇರಿ 272 ಕೋಟಿ 65 ಲಕ್ಷ ಹಣ ಬಿಡುಗಡೆಯಾಗಿದೆ. ಇನ್ನೂ 371ಜೆ ಕಾಯ್ದೆ ಜಾರಿಗೆ ಬಂದು ದಶಮಾನೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಕಾಯ್ದೆಯ ಸವಿನೆನಪಿಗೆ ಆಸ್ಪತ್ರೆಯ ಹಾಸಿಗೆ ಸಾಮರ್ಥ್ಯವನ್ನು 371ಕ್ಕೆ ಹೆಚ್ಚಿಸಲಾಗಿದೆ. ಪ್ರಸ್ತುತ ಜಿಮ್ಸ್ ನಲ್ಲಿರುವ 130 ಹಾಸಿಗೆಯಿಂದ 371 ಸಾಮರ್ಥ್ಯಕ್ಕೆ ಹೆಚ್ಚಳವಾಗುವುದರಿಂದ ಅದರ ಸಾಮರ್ಥ್ಯಕ್ಕೆ ಅನುಗುಣವಾಗಿ ಸಿಬ್ಬಂದಿ ಭರ್ತಿ ಸಹ ವೈದ್ಯಕೀಯ ಶಿಕ್ಷಣ ಇಲಾಖೆ ಮಾಡಿಕೊಳ್ಳಲಿದೆ. ಈಗಾಗಲೇ ಕಲಬುರಗಿಯಲ್ಲಿನ ಜಯದೇವ ಆಸ್ಪತ್ರೆಯಲ್ಲಿ 130 ಬೆಡ್’ಗಳ ಆಸ್ಪತ್ರೆಯಿದ್ದೂ ಅದು ಅನುಕೂಲವಾಗುತ್ತಿದೆ. ಇನ್ನೂ ಇಡೀ ಕರ್ನಾಟಕದಲ್ಲಿಯೇ ನಾಲ್ಕು ಕಡೆ ಮಾತ್ರ ಜಯದೇವ ಆಸ್ಪತ್ರೆಯಿದ್ದೂ ಬೆಂಗಳೂರು, ಮೈಸೂರು, ಹುಬ್ಬಳ್ಳಿಯಲ್ಲಿ ಬಿಟ್ಟರೆ ಇಂದು ನಮ್ಮ ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿಯಲ್ಲಿ ನಿರ್ಮಾಣವಾಗುತ್ತಿದೆ. ಇನ್ನೂ ಇಲ್ಲಿನ ಜನರು ಬೆಂಗಳೂರು ಸೇರಿದಂತೆ ವಿವಿಧ ಕಡೆಗೆ ಹೃದಯ ರೋಗಕ್ಕೆ ಸಂಬಂಧಿಸಿದಂತೆ ಚಿಕಿತ್ಸೆಗೆಂದು ಹೋಗುವ ಅವಶ್ಯಕತೆ ಇಲ್ಲ. ಈಗಾಗಲೇ ಆಸ್ಪತ್ರೆಯು ಉದ್ಘಾಟನೆಯ ಹಂತದಲ್ಲಿದ್ದೂ ಮುಂಬರುವ ದಿನಗಳಲ್ಲಿ ವೈದ್ಯಕೀಯ ಶಿಕ್ಷಣ ಸಚಿವರು, ಮುಖ್ಯಮಂತ್ರಿಗಳು ಎಲ್ಲರೂ ಸೇರಿ ಇದರ ಬಗ್ಗೆ ಚರ್ಚೆ ಮಾಡಿ ಸೆಪ್ಟೆಂಬರ್ ತಿಂಗಳಲ್ಲಿ ಆಸ್ಪತ್ರೆಯ ಉದ್ಘಾಟನೆಯ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ. ಇನ್ನೂ ನಮ್ಮ ಹಳ್ಳಿಯ ಜನರಿಗೆ ಉಪಯೋಗವಾಗುವ ಹಿನ್ನೆಲೆಯಿಂದ ಕೆಕೆಆರ್’ಡಿಬಿ ಹಾರ್ಟ್ ಲೈನ್ ಎಂಬ ಯೋಜನೆಯಲ್ಲಿ 50 ಆ್ಯಂಬುಲೆನ್ಸ್’ಗಳ ಯೋಜನೆಯನ್ನು ಮಾಡುವ ಪ್ರಯತ್ನ ಮಾಡುತ್ತಿದ್ದೂ, ಇನ್ನೂ ರಾಯಚೂರಿನಲ್ಲಿ ಹ್ಯೂಮನ್ ಜಿನೋಮ್ ಸೆಂಟರ್ ಸ್ಥಾಪನೆಗೆ ಕಳೆದ ತಿಂಗಳೇ ಅಡಿಗಲ್ಲು ಹಾಕಬೇಕಾಗಿತ್ತು. ಅನಿವಾರ್ಯ ಕಾರಣದಿಂದ ಮುಂದೂಡಿದ್ದು, ಶೀಘ್ರವೆ ಅಡಿಗಲ್ಲು ಹಾಕಲಾಗುವುದು. ಅದರಂತೆ ಕಲಬುರಗಿ ನಗರದ ಖರ್ಗೆ ವೃತ್ತದಲ್ಲಿ ರಸ್ತೆ ಮೇಲ್ಸೇತುವೆ ನಿರ್ಮಾಣ ನೆನೆಗುದ್ದಿಗೆ ಬಿದ್ದಿದ್ದು ತಮ್ಮ ಗಮನಕ್ಕೆ ಬಂದಿದ್ದು, ಮುಂದಿನ ದಿನದಲ್ಲಿ ಇದನ್ನು ಸೂಕ್ತವಾಗಿ ಪರಿಶೀಲಿಸಲಾಗುವುದು ಎಂದು ಸುದ್ದಿಗಾರರ ಪ್ರಶ್ನೆಗೆ ಡಾ.ಅಜಯ್ ಸಿಂಗ್ ಉತ್ತರಿಸಿದರು ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಶಾಸಕ ಜಗದೇವ ಗುತ್ತೇದಾರ, ಕೆ.ಕೆ.ಆರ್.ಡಿ.ಬಿ. ಮಂಡಳಿ ಕಾರ್ಯದರ್ಶಿ ಎಂ.ಸುಂದರೇಶ ಬಾಬು, ಮುಖಂಡ ನೀಲಕಂಠರಾವ ಮೂಲಗೆ ಸೇರಿದಂತೆ ಇತರರು ಇದ್ದರು