ಬಾಂಗ್ಲಾದೇಶದಲ್ಲಿ ಅಲ್ಲಿನ ಜನರು ಸರ್ಕಾರದೊಂದಿಗೆ ಮೀಸಲಾತಿಗಾಗಿ ಹೋರಾಟ ನಡೆಸಿದ್ದು, ಅದು ಅವರ ಹೋರಾಟ. ಆದರೆ ಹಿಂದೂಗಳನ್ನೇ ಗುರಿಯಾಗಿಸಿಕೊಂಡು ಹಿಂಸಾಚಾರ, ಅತ್ಯಾಚಾರ ಮಾಡಿರುವುದು ಖಂಡನೀಯ. ಕಾರಣ ಪ್ರಧಾನಿ ಮೋದಿ ಅವರಿಗೆ ಮಹಾಲಿಂಗಪೂರ ಬಿಜೆಪಿ ಮುಖಂಡ ರವಿ ಜವಳಗಿ ಅವರು ತಮ್ಮ ರಕ್ತದಲ್ಲಿ ಪತ್ರ ಬರೆದಿದ್ದು, ಬಾಂಗ್ಲಾದ ಹಿಂದೂಗಳನ್ನು ರಕ್ಷಿಸಿ, ಅವಶ್ಯ ಬಿದ್ದರೇ, ಭಾರತಕ್ಕೆ ಕರೆ ತನ್ನಿ ಎಂದು ಮನವಿ ಮಾಡಿದ್ದಾರೆ.