ಸಡಗರ ಸಂಭ್ರಮದಿಂದ ನಾಗರ ಪಂಚಮಿ ಹಬ್ಬವನ್ನು ಯಾದಗಿರಿಯಲ್ಲಿ ಆಚರಣೆ ಮಾಡಲಾಯಿತು. ವಿಶೇಷವಾಗಿ ಶಾಲೆ ಮಕ್ಕಳು ಸಂಭ್ರಮದಿಂದ ಹಬ್ಬ ಆಚರಣೆ ಮಾಡಿದರು.ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕಲ್ಲದೇವನಹಳ್ಳಿ ಗ್ರಾಮದ ಶ್ರೀ ಖಾಸ್ಗಾತೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಗರ ಪಂಚಮಿ ಹಬ್ಬ ಆಚರಣೆ ಮಾಡಿದರು.ಹಬ್ಬದ ಅಂಗವಾಗಿ, ಉತ್ತರ ಕರ್ನಾಟಕದ ಮೂಲ ಸಂಸ್ಕಾರವಾದ ಕೊಬ್ಬರಿ ಆಟವನ್ನು ಮಕ್ಕಳು ಆಡಿ ಖುಷಿ ಪಟ್ಟರು.ಕೊಬ್ಬರಿ ಆಟವಾಡುವದರಿಂದ ಮಕ್ಕಳ ಏಕಾಗ್ರತೆ ಹೆಚ್ಚಿಸುವ ಶಕ್ತಿ ಅಡಗಿದೆ,ಮೂಲ ಸಂಪ್ರದಾಯದ ಹಬ್ಬದ ಸಂಸ್ಕಾರ ಉಳಿಸುವ ಜೊತೆ ಮಕ್ಕಳ ಕಲಿಕೆಗೆ ಕೊಬ್ಬರಿ ಆಟ ಅನುಕೂಲವಾಗಲಿದೆ.ವಿದ್ಯಾರ್ಥಿಗಳು ಸಾಮೂಹಿಕವಾಗಿ ಕೊಬ್ಬರಿ ಆಟವಾಡಿ ಖುಷಿಪಟ್ಟರು.
Home Uncategorized ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕಲ್ಲದೇವನಹಳ್ಳಿ ಗ್ರಾಮದ ಶ್ರೀ ಖಾಸ್ಗಾತೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಗರ ಪಂಚಮಿ ಹಬ್ಬ ಆಚರಣೆ ಮಾಡಿದರು