ವಡಗೇರಾ ತಾಲೂಕು ಯಾದಗಿರಿ ಮತಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಗ್ರಾಮಗಳಲ್ಲಿ ಸ್ವಾತಂತ್ರ್ಯ ಬಂದು ಇಲ್ಲಿಯವರೆಗೂ ಯಾವುದೇ ಅಭಿವೃದ್ಧಿ ಇಲ್ಲ. ಕುಡಿಯುವ ನೀರು, ಸೂಕ್ತ ಚರಂಡಿ ವ್ಯವಸ್ಥೆ, ರಸ್ತೆ ಇಲ್ಲದೇ ಸಾಂಕ್ರಮಿಕ ರೋಗಗಳ ಭೀತಿಯಲ್ಲಿ ಮಕ್ಕಳು ಕಲಿಕೆ ನಡೆದಿದೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ ಮುನ್ನಾಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಅವಲೋಕಿಸಿ ಮಾತನಾಡಿದ ಅವರು, ತಕ್ಷಣ ಅಧಿಕಾರಿಗಳು ಗಾಮಗಳಿಗೆ ಭೇಟಿ ನೀಡುವಂತೆ ಆಗ್ರಹಿಸಿದ್ದಾರೆ.





