ಸೇಡಂನಲ್ಲಿ ನೂತನವಾಗಿ ಆರಂಭವಾದ ಶ್ರೀ ಸಿದ್ದರಾಮೇಶ್ವರ ಕಣ್ಣಿನ ಆಸ್ಪತ್ರೆಯನ್ನು ಸಚಿವ ಡಾ ಶರಣಪ್ರಕಾಶ ಪಾಟೀಲ ಉದ್ಘಾಟಿಸಿದರು
ಸೇಡಂ – ನಗರದಲ್ಲಿ ನೂತನವಾಗಿ ಆರಂಬಗೊಂಡಿರುವ ಶ್ರೀ ಸಿದ್ದರಾಮೇಶ್ವರ ಕಣ್ಣಿನ ಆಸ್ಪತ್ರೆಯನ್ನು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ದಿ ಸಚಿವ ಡಾ ಶರಣಪ್ರಕಾಶ ಪಾಟೀಲ ಉದ್ಗಾಟಿಸಿ ಮಾತನಾಡಿ ಡಾ.ವಿಶ್ವನಾಥ ರೆಡ್ಡಿ ಅವರು ಮತ್ತು ಕುಟುಂಬದ ಸದಸ್ಯರು ಸುಮಾರು 30 ವರ್ಷಗಳಿಂದ ಕಣ್ಣಿನ ಚಿಕಿತ್ಸೆಯನ್ನು ಮಾಡುತ್ತಿದ್ದಾರೆ ಈಗಾಗಲೇ ಸೇಡಂನಲ್ಲಿ 70 ಜನರಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಉಚಿತವಾಗಿ ಮಾಡಿದ್ದಾರೆ ಚಿಕಿತ್ಸೆಯಲ್ಲಿ ಅಪಾರ ಅನುಭವ ಉಳ್ಳ ಡಾ ವಿಶ್ವನಾಥ ರೆಡ್ಡಿ ಅವರ ನೇತೃತ್ವದಲ್ಲಿ ಆರಂಬವಾದ ಕಣ್ಣಿನ ಆಸ್ಪತ್ರೆ ಸೇಡಂ ತಾಲೂಕಿನ ಜನರಿಗೆ ಉತ್ತಮ ವೈದ್ಯಕೀಯ ಸೇವೆ ನೀಡಲಿ ಎಂದರು.
ಡಾ.ರಾಜಶ್ರೀ ರೆಡ್ಡಿ ಮಾತನಾಡಿ ಕಳೆದ 30 ವರ್ಷಗಳಿಂದ ಕಲಬುರಗಿ ನಗರದಲ್ಲಿ ಕಣ್ಣಿನ ಪರೀಕ್ಷೆ ಹಾಗೂ ಶಸ್ತ್ರಚಿಕಿತ್ಸೆ ನಿರಂತರವಾಗಿ ಕಲಬುರಗಿ ಜಿಲ್ಲಾ, ಬೀದರ, ರಾಯಚೂರು ನಲ್ಲಿ ನಮ್ಮ ಸೇವೆ ತಲಪುವ ಹಾಗೆ ಮಾಡಿದ್ದೇವೆ ಆದರೆ ಸೇಡಂನಲ್ಲಿ ನಾವು ಕಣ್ಣಿನ ಆಸ್ಪತ್ರೆ ಪ್ರಾರಂಭ ಮಾಡಲು ಉದ್ದೇಶ ವೆಂದರೆ ನಾವು ಇದೇ ತಾಲೂಕಿನ ಕಸ್ತೂರಿ ಪಲ್ಲಿ ಗ್ರಾಮದವರು ಬಹಳಷ್ಟು ಜನರು ಆತ್ಮೀಯರು ಬಂದು ಬಳಗ ಇರುವದರಿಂದ ಇಲ್ಲಿನ ಜನರಿಗೆ ಅನುಕೂಲವಾಗಲೆಂದು ಕಣ್ಣಿನ ಆಸ್ಪತ್ರೆ ಪ್ರಾರಂಭ ಮಾಡಿದ್ದು ಈಗಾಗಲೇ ಕಳೆದ ಒಂದು ತಿಂಗಳಲ್ಲಿ ಸುಮಾರು 70 ಜನರಿಗೆ ಉಚಿತ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಇಂದು ಉದ್ಗಾಟನೆ ದಿನದಂದು 250 ಜನರಿಗೆ ಉಚಿತ ಕಣ್ಣಿನ ಪರೀಕ್ಷೆ ಮಾಡಲಾಗಿದೆ ಇನ್ನೂ ಮುಂದೆ 60 ರಿಂದ 70 ಜನರಿಗೆ ಉಚಿತ ಶಸ್ತ್ರಚಿಕಿತ್ಸೆ ಮಾಡಲಾಗುವದು ಎಂದರು.
ಶಿವಶಂಕರ ಮಠದ ಶಿವಶಂಕರೇಶ್ವರ ಸ್ವಾಮೀಜಿ ಆಶೀರ್ವದಿಸಿ ಮಾತನಾಡಿ ಕಣ್ಣಿನ ಆಸ್ಪತ್ರೆ ಸೇಡಂ ನಗರದಲ್ಲಿ ಅವಶ್ಯವಾಗಿತ್ತು ಇಂತಹ ಕಾರ್ಯವನ್ನು ಡಾ ವಿಶ್ವನಾಥ ರೆಡ್ಡಿ ಅವರು ಮಾಡಿದ್ದಾರೆ ಮುಂದಿನ ದಿನಗಳಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆ ನಡೆಯಲಿ ಇದಕ್ಕೆ ಯಾವಾಗಲೂ ನಮ್ಮ ಸಹಕಾರ ಆಶೀರ್ವಾದ ಇರುತ್ತದೆ ಎಂದರು.
ಈ ಸಂದರ್ಭದಲ್ಲಿ ತೋಟಗಾರಿಕೆ ಮಹಾ ಮಂಡಳಿ ರಾಜ್ಯ ಮಾಜಿ ಅದ್ಯಕ್ಷ ಬಸವರಾಜ ಪಾಟೀಲ ಊಡಗಿ, ಡಾ. ವಿಶ್ವನಾಥ ರೆಡ್ಡಿ, ಡಾ ಸಿದ್ದಲಿಂಗ ರೆಡ್ಡಿ, ಡಾ.ಓಂಪ್ರಕಾಶ ಪಾಟೀಲ, ಡಾ .ಸದಾನಂದ ಬೂದಿ, ಡಾ .ಉದಯಕುಮಾರ ಶಹಾ, ಡಾ.ಸದಾನಂದರೆಡ್ಡಿ, ಡಾ.ಶ್ರೀನಿವಾಸ ಮೊಕದ್ದಮ್, ಡಾ.ಶ್ರೀನಿವಾಸ ಅಂಕಲಕರ್
ಹಾಗೂ ಅನೇಕ ರಾಜಕೀಯ ಮುಖಂಡರು ಉಪಸ್ಥಿತರಿದ್ದರು





