Home Uncategorized ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಹಿರಿದು: ಕೋಡ್ಲಾ

ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಹಿರಿದು: ಕೋಡ್ಲಾ

0
ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಹಿರಿದು: ಕೋಡ್ಲಾ

ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಹಿರಿದು: ಕೋಡ್ಲಾ

ಸೇಡಂ: ಮಕ್ಕಳ ಭವಿಷ್ಯ ರೂಪಿಸುವುದ ರಲ್ಲಿ ಪಾಲಕರಿಗಿಂತಲೂ ಶಿಕ್ಷಕರ ಪಾತ್ರ ಹಿರಿದಾಗಿದೆ ಎಂದು ಮಹಾತ್ಮ ಜೋತಿಬಾ ಫುಲೆ ಎಜುಕೇಷನಲ್ ಸೊಸೈಟಿ ಅಧ್ಯಕ್ಷ ಶಂಕರ ಕೋಡ್ಲಾ ಹೇಳಿದರು.

ಕುರಕುಂಟಾ ಶ್ರೀ ಸಂಗಮೇಶ್ವರ ದೇವಾಲಯದಲ್ಲಿ ಆಯೋಜಿಸಿದ್ದ ಅಕ್ಕನಾಗಮ್ಮ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ದೇವಾನಂದ ಶಿಂಧೆ ಸೇವಾ ನಿವೃತ್ತಿ ಸಮಾರಂಭದಲ್ಲಿ ಅವರು ಮಾತನಾಡಿ ದರು.ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳಿಂತ ಅನುದಾನಿತ ಶಾಲೆಗಳಲ್ಲಿ ಮಕ್ಕಳನ್ನು ಸೇರಿಸಲು ಪಾಲಕರು ಮುಂದೆ ಬರುತ್ತಿಲ್ಲ ಶಾಲೆಗೆ ಮಕ್ಕಳೆ ಬಾರದಿದ್ದ ಮೇಲೆ ಶಾಲೆ ನಡೆಸುವುದಾ ದರೂ ಹೇಗೆ ಎಂದು ಪ್ರಶ್ನಿಸಿದರು.

ಪಾಲಕರು ಮಕ್ಕಳನ್ನು ಗ್ರಾಮದಲ್ಲಿನ ಅನುದಾನಿತ ಶಾಲೆಗೆ ಸೇರಿಸುವ ಕೆಲಸ ಮಾಡಬೇಕು. ಸೇವಾ ನಿವೃತ್ತಿ ಹೊಂದುತ್ತಿರುವ ದೇವಾನಂದ ಶಿಂಧೆ ಹಾಗೂ ಶಾಲೆ ಶಿಕ್ಷಕರು ಮಕ್ಕಳ ಉಜ್ವಲ ಭವಿಷ್ಯ ರೂಪಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದಾರೆ. ಆದ್ದರಿಂದ ಶಾಲೆ ಉಳಿಸಿ ಬೆಳೆಸುವ ಕೆಲಸವನ್ನು ಗ್ರಾಸ್ಥರು ಮಾಡಬೇಕು ಎಂದರು.

ಈ ವೇಳೆ ನಿವೃತ್ತಿ ಹೊಂದಿದ ಶಿಕ್ಷಕ ದೇವಾನಂದ ಶಿಂಧೆ ದಂಪತಿಗೆ ರಾಜಕೀಯ ಮುಖಂಡರು, ಶಿಕ್ಷಕರು, ಗ್ರಾಮಸ್ಥರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಶಾಲೆಯ ಹಳೆಯ ವಿದ್ಯಾಥಿಗಳು ಸನ್ಮಾನಿಸಿದರು.

ಗ್ರಾಂಪ ಅಧ್ಯಕ್ಷ ರಾಜಶೇಖರ್ ಮುಗಳಿ, ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಪ್ರೇಮಾ, ನಿವೃತ್ತ ಮುಖ್ಯ ಗುರುಗಳಾದ ರಮೇಶ ಸೊಂತ, ಶಿವರಾಜ್, ಶಿಕ್ಷಣ ಪ್ರೇಮಿಗಳಾದ ವೀರಣ್ಣ ಮಂತಟ್ಟಿ ರಾಮಯ್ಯ ಪೂಜಾರಿ, ವೆಂಕಟೇಶ ಸೊಂತ, ಬಾಲರಾಜ ಹೋಳ್ತರ್‌, ನಾಗಪ್ಪ ಕೊಳ್ಳಿ, ಬಸವರಾಜ ಮರಗೋಳ ಉಪಸ್ಥಿತರಿದ್ದರು.

ಶಿಕ್ಷಕ ಶಿವಪ್ರಸಾದ ವಿಶ್ವಕರ್ಮ ಸ್ವಾಗತಿಸಿದರು. ನಿವೃತ್ತ ಶಿಕ್ಷಕಿ ಅಕ್ಕನಾಗಮ್ಮ ಆಡಕಿ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕಿ ಪದ್ಮಾವತಿ ರೊಟ್ಟಿ ನಿರೂಪಿಸಿ, ವಂದಿಸಿದರು.

LEAVE A REPLY

Please enter your comment!
Please enter your name here

error: Content is protected !!