ಶರಣಬಸವ ವಿಶ್ವವಿದ್ಯಾಲಯದ ದೊಡ್ಡಪ್ಪ ಸಭಾ ಮಂಟಪದಲ್ಲಿ ಜೂನ್ ಐದರಂದು ವಿಶ್ವವಿದ್ಯಾಲಯ ಸಿವಿಲ್ ಇಂಜಿನಿಯರಿಂಗ್ ವಿಭಾಗದ ವತಿಯಿಂದ ವಿಶ್ವ ಪರಿಸರ ದಿನಾಚರಣೆ 2024ರ ಕಾರ್ಯಕ್ರಮವನ್ನು ಆಚರಿಸಿದ್ದರು.
ಈ ಸಂದರ್ಭದಲ್ಲಿ ಶರಣಬಸವ ವಿಶ್ವವಿದ್ಯಾಲಯ ಉಪಕುಲಪತಿಗಳಾದ ಡಾ| ಅನಿಲ್ ಕುಮಾರ್ ಬಿಡವೆ, ಕುಲ ಸಚಿವ ಡಾ. ಎಸ್. ಜಿ ಡೊಳ್ಳೆಗೌಡರ್,ಡಾ| ಎಸ್. ಹೆಚ್. ಹೊನ್ನಳ್ಳಿ ಹಾಗೂ ಡೀನ್ ಡಾ| ಲಕ್ಷ್ಮಿ ಪಾಟೀಲ್ ಮಾಕಾ ಸೇರಿದಂತೆ ಇತರ ಗಣ್ಯರು ಉಪಸ್ಥಿತರು ಭಾಗವಹಿಸಿದರು . ಈ ಕಾರ್ಯಕ್ರಮದ ಕುರಿತು ಕ್ರೀಡೆ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ| ಶಶಿಕಾಂತ ಮೀಸೆ ಅವರು ವಿಶ್ವ ಪರಿಸರ ದಿನಾಚರಣೆ ವಿಷಯದ ಮೇಲೆ ಮಾತನಾಡಿದರು. ಶರಣಬಸವ ವಿಶ್ವವಿದ್ಯಾಲಯ ಹಲವು ದಿನಗಳ ಹಿಂದೆ ನಡೆದ ವಾರ್ಷಿಕ ಕ್ರೀಡಾಕೂಟ 2024ರಲ್ಲಿ ವಿಜೇತರಾದ ವಿವಿಧ ವಿಭಾಗದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.





