ಪ್ರಮುಖ ರಸ್ತೆಗಳನ್ನು ಸ್ಕ್ಯಾನಿಂಗ್ ಮಾಡಿ ಗುಂಡಿಗಳನ್ನು ಪತ್ತೆ ಮಾಡಲು ಬಿಬಿಎಂಪಿಯು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಯಾಮೆರಾಗಳ ಮೊರೆ ಹೋಗಿದೆ.
ಪಾಲಿಕೆಯು ಎಐ ಕ್ಯಾಮೆರಾಗಳ ಮೂಲಕ ರಸ್ತೆ ಗುಂಡಿಗಳು, ಕಸ, ರಸ್ತೆ ಬದಿಯಲ್ಲಿನ ಧೂಳನ್ನು ಗುರುತಿಸಿ ತೆರವು ಮಾಡಲು ಉದ್ದೇಶಿಸಿದೆ ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ. ಈ ರಸ್ತೆಗಳಲ್ಲಿ ಗುಂಡಿಗಳಿಂದಾಗಿ ಸಂಚಾರ ನಿಧಾನಗೊಳ್ಳುತ್ತದೆ ಮತ್ತು ವಾಹನ ಚಾಲಕರ ಜೀವವನ್ನು ಅಪಾಯಕ್ಕೆ ತಳ್ಳುತ್ತದೆ ಎಂದು ಆಯುಕ್ತರು ಹೇಳಿದ್ದಾರೆ.





