ಯಾದಗಿರಿ ರಾಜ್ಯದಲ್ಲಿ ನವೆಂಬರ್ ಕ್ರಾಂತಿ ವಿಚಾರ, ಪವರ್ ಶೆರಿಂಗ್ ಬಗ್ಗೆ ಯಾವುದೇ ಮಾತಾಗಿಲ್ಲವೆಂದು ಸಿಎಂ ಅವರೇ ಹೇಳಿದ್ದಾರೆಂದ ಸಚಿವ ಶರಣಬಸ್ಸಪ್ಪಗೌಡ ದರ್ಶನಾಪುರ, ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದಿಗ್ಗಿ ಗ್ರಾಮದಲ್ಲಿ ಸಚಿವ ಶರಣಬಸ್ಸಪ್ಪಗೌಡ ದರ್ಶನಾಪುರ ಹೇಳಿಕೆ, ಡಿಕೆಶಿ ಬಣದ ಶಾಸಕರು ದೆಹಲಿ ಗೆ ಯಾತ್ರೆ ವಿಚಾರ, ಶಾಸಕರು ಯಾಕೆ ಹೋಗಿದ್ದಾರೆ ಗೊತ್ತಿಲ್ಲ, 6 ತಿಂಗಳ ಹಿಂದೆ ಸಚಿವ ಸಂಪುಟ ಪುನರ್ ರಚನೆ ಮಾಡಿ ಎಂದು ಹೇಳಿದ್ದರು, ಸಚಿವ ಸಂಪುಟ ಪುನರ್ ರಚನೆ ಬಗ್ಗೆ ಶಾಸಕರು ಕೇಳಲು ದೆಹಲಿಗೆ ಹೋಗಿರಬಹುದು, ಅಧಿಕಾರ ಹಂಚಿಕೆ ಬಗ್ಗೆ ನಿರ್ಧಾರ ಮಾಡಲು ಪಕ್ಷದ ಹೈಕಮಾಂಡ್ ಇದೆ, ಹೈಕಮಾಂಡ್ ನಿರ್ಧಾರಕ್ಕೆ ಬದ್ದವೆಂದು ಈಗಾಗಲೇ ಸಿಎಂ, ಡಿಸಿಎಂ ಅವರು ಹೇಳಿದ್ದಾರೆ, ಸಿಎಂ ಸಿದ್ದರಾಮಯ್ಯ ಅವರೇ ಮುಂದುವರೆಯುತ್ತಾರೆ ಅವರೇ ಬಜೇಟ್ ಮಂಡನೆ ಮಾಡುತ್ತಾರೆ, ಸಿದ್ದರಾಮಯ್ಯ ಅವರೇ ಬಜೆಟ್ ಮಂಡನೆ ಮಾಡುತ್ತಾರೆಂದು ಸಚಿವ ದರ್ಶನಾಪುರ ಅಚ್ಚರಿ ಹೇಳಿಕೆ, ಡಿಕೆಶಿ ಬಣದ ಶಾಸಕರಿಂದ ಡಿಕೆಶಿ ಅವರು ಸಿಎಂ ಆಗಬೇಕೆಂಬ ಹೇಳಿಕೆಗೆ ಸಚಿವ ದರ್ಶನಾಪುರ ಪ್ರತಿಕ್ರಿಯೆ, ಲೀಡರ್ ಅಭಿಮಾನಿಗಳು ಬಹಳ ಇರುತ್ತಾರೆ, ಡಿಕೆಶಿ,ಸತೀಶ್ ಜಾರಕಿಹೊಳಿ,ಪರಮೇಶ್ವರ, ಎಚ್.ಸಿ.ಮಹಾದೇವಪ್ಪ ,ಪ್ರಿಯಾಂಕ್ ಖರ್ಗೆ ಅವರ ಅಭಿಮಾನಿಗಳು ಬಹಳ ಜನ ಇದ್ದಾರೆ, ಅವರ ಅಭಿಮಾನಿಗಳು ಹೇಳುವದು ಅವರಿಗೆ ಬಿಟ್ಟ ವಿಚಾರ, ಶಾಸಕ ಇಕ್ಬಾಲ್ ಹುಷೇನ್ ನಮ್ಮ ಹೈಕಮಾಂಡ್ ಅಲ್ಲ ಅವರು ನಮ್ಮ ಹಾಗೇ ಶಾಸಕರು,ಅವರ ಅಭಿಪ್ರಾಯ ಕೂಡ ಕೇಳುತ್ತಾರೆ, ಯಾವುದೇ ಸಿಎಂ ಬದಲಾವಣೆ ಮಾಡಬೇಕಾದರೆ ಹೈಕಮಾಂಡ್ ನಿರ್ಧಾರ ಮಾಡುತ್ತದೆ, ಹೈಕಮಾಂಡ್ ನಿರ್ಧಾರ ಮಾಡಿ ಶಾಸಕರ ಜೊತೆ ಚರ್ಚೆ ಮಾಡುತ್ತಾರೆ, ಕಾಂಗ್ರೆಸ್ ಹೈಕಮಾಂಡ್ ನವರು ಯಾವುದೇ ಶಾಸಕರಿಗೆ ಕರೆದು ಕೇಳಿಲ್ಲ, ರಾಜಕೀಯದಲ್ಲಿ ಇರುವರಿಗೆ ಸಿಎಂ ಆಗಬೇಕೆಂಬ ಕನಸು ಇರುತ್ತದೆ, ಏನು ಬೇಕಾಗಿಲ್ಲವೆಂದರೇ ಸನ್ಯಾಸಿ ಆಗಿ ಇರಬಹುದು, ಸಾಮಾನ್ಯ ಮನುಷ್ಯ MLA,MP,ಸಚಿವ,ಸಿಎಂ ಆಗಬೇಕು, ಪಿಎಂ ಆಗಬೇಕೆಂಬ ಆಸೆ ಇರುತ್ತದೆ, ಎಲ್ಲರಿಗೂ ಆಸೆ ಇರುತ್ತದೆ ಎಂದ ಸಚಿವ ದರ್ಶನಾಪುರ, ಡಿಕೆಶಿ ಅವರು ಸಿಎಂ ಆಗಬೇಕೆಂಬ ಆಸೆ ಇಟ್ಟು ಕೊಳ್ಳುವದು ಯಾವುದೇ ತಪ್ಪಲ್ಲ, ಸಿಎಂ ಆಗಲು ಪ್ರಯತ್ನ ಮಾಡುವುದರಲ್ಲಿ ಯಾವುದೇ ತಪ್ಪಲ್ಲ, ಪ್ರಯತ್ನ ಮಾಡದೇ ಏನು ಸಿಗುವದಿಲ್ಲ, ನಮ್ಮ ಪಕ್ಷದಲ್ಲಿ ಈಗ ಸಿದ್ದರಾಮಯ್ಯ ಅವರು ಸಿಎಂ ಆಗಿ ಇದ್ದಾರೆ, ಹೈಕಮಾಂಡ್ ತಿರ್ಮಾನ ಪ್ರಕಾರ ನಡೆಯುತ್ತೆನೆಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ, ಡಿಕೆಶಿ ಅವರು ಸಿಎಂ ಹೇಳಿದಂತೆ ಕೇಳುತ್ತೆನೆಂದು ಹೇಳಿದ್ದಾರೆ,
ರಾಜ್ಯದಲ್ಲಿ ನವೆಂಬರ್ ಕ್ರಾಂತಿ ವಿಚಾರ,ಪವರ್ ಶೆರಿಂಗ್ ಬಗ್ಗೆ ಯಾವುದೇ ಮಾತಾಗಿಲ್ಲ;ದರ್ಶನಾಪುರ
ರಾಜ್ಯದಲ್ಲಿ ನವೆಂಬರ್ ಕ್ರಾಂತಿ ವಿಚಾರ, ಪವರ್ ಶೆರಿಂಗ್ ಬಗ್ಗೆ ಯಾವುದೇ ಮಾತಾಗಿಲ್ಲವೆಂದು ಸಿಎಂ ಅವರೇ ಹೇಳಿದ್ದಾರೆಂದ ಸಚಿವ ಶರಣಬಸ್ಸಪ್ಪಗೌಡ ದರ್ಶನಾಪುರ





