Home Uncategorized ಬಳ್ಳಾರಿಯಲ್ಲಿ ಸಚಿವ ಚಲುವರಾಯ ಸ್ವಾಮಿ ಹೇಳಿಕೆ

ಬಳ್ಳಾರಿಯಲ್ಲಿ ಸಚಿವ ಚಲುವರಾಯ ಸ್ವಾಮಿ ಹೇಳಿಕೆ

0
ಬಳ್ಳಾರಿಯಲ್ಲಿ ಸಚಿವ ಚಲುವರಾಯ ಸ್ವಾಮಿ ಹೇಳಿಕೆ

ಬಳ್ಳಾರಿಯಲ್ಲಿ ಸಚಿವ ಚಲುವರಾಯ ಸ್ವಾಮಿ ಹೇಳಿಕೆ ಕೃಷಿ ಕಟ್ಟಡ ಉದ್ಘಾಟನೆ ಕಾರ್ಯಕ್ರಮದ ಬಳಿಕ ಹೇಳಿಕೆ ನೀಡಿದ ಸಚಿವಚಲುವರಾಯ ಸ್ವಾಮಿಯವರು, ಕಬ್ಬು ಬೆಳೆಗಾರರ ಸಮಸ್ಯೆ ಬಗ್ಗೆ ನಿನ್ನೆ ತೀರ್ಮಾನ ಆಗಿದೆ, ನಿನ್ನೆಯೇ ರೈತರು ಪ್ರತಿಭಟನೆ ವಾಪಸು ಪಡೆದಿದ್ದಾರೆ. ಕೆಲವು ಕಡೆ ಅಷ್ಟೇ ಸ್ವಲ್ಪ ಪ್ರತಿಭಟನೆ ಇರಬಹುದು. ಸಿಎಂ ನಿನ್ನೆ ನಿರಂತರವಾಗಿ ಮಾಲಿಕರ ಹಾಗೂ ರೈತರ ಜೊತೆ ಮಾತಾಡಿದ್ದಾರೆ. 3250ರೂ ಕಾರ್ಖಾನೆ ಕೊಡಬೇಕು, 50 ರೂಪಾಯಿ ಸರ್ಕಾರ ಕೊಡುತ್ತೆ ಎಂದು ತೀರ್ಮಾನ ಆಗಿದೆ. ನವೆಂಬರ್ ಕ್ರಾಂತಿ ಬಗ್ಗೆ ಸಚಿವ ಚಲುವರಾಯ ಸ್ವಾಮಿ ಪ್ರತಿಕ್ರಿಯೆ ನೀಡಿದರು. ನೋಡಿ ಈಗಾಗಲೇ ನವೆಂಬರ್ ಮುಗಿಯುತ್ತ ಬಂದಿದೆ. ಸಿಎಂ ಬದಲಾವಣೆ ವಿಚಾರ ಅದೇನಾದ್ರು ಇದ್ರೆ ಪಕ್ಷದ ಹೈಕಮಾಂಡ್ ಗೆ ಬಿಟ್ಟ ವಿಚಾರ. ಮಂತ್ರಿ ಮಂಡಲ ರಿಷಫಲ್ ಸೇರಿ ಏನೇ ಇದ್ರೂ ನಮ್ಮ‌ ಪಕ್ಷದ ವರಿಷ್ಠರು ತಿರ್ಮಾನ ಮಾಡ್ತಾರೆ ನಮ್ಮ ಕಾಂಗ್ರೆಸ್ ಪಕ್ಷ ಬಿಜೆಪಿ ಪಕ್ಷದ ತರ ಅಲ್ಲ, ನಮ್ಮ ಪಾಡಿಗೆ ನಾವು ಕೆಲಸ ಮಾಡ್ತಾ ಇದ್ದೇವೆ. ಬಿಹಾರ್ ಚುನಾವಣೆಯಲ್ಲಿ ಸಿಎಂ‌ ಮೊದಲೇ ಪ್ರಚಾರ ಮಾಡಿ ಬಂದಿದ್ದರು. ಆ ಬಳಿಕ ಡಿಸಿಎಂ ಹೋದ್ರು, ಅವರು ಪಕ್ಷದ ಅಧ್ಯಕ್ಷರು ಹೀಗಾಗಿ ಪದೇ ಪದೇ ಹೋಗ್ತಾರೆ ನಮ್ಮ ಪಕ್ಷದದಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಸಚಿವ ಚಲುವರಾಯಸ್ವಾಮಿ ಸ್ವಾಮಿ ಹೇಳಿಕೆ ನೀಡಿದರು

LEAVE A REPLY

Please enter your comment!
Please enter your name here

error: Content is protected !!