Google search engine
ಮನೆUncategorizedಸಚಿವ ಪ್ರಿಯಾಂಕ ಖರ್ಗೆ ಅವಹೇಳನ ಖಂಡಿಸಿ ಸೇಡಂನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು

ಸಚಿವ ಪ್ರಿಯಾಂಕ ಖರ್ಗೆ ಅವಹೇಳನ ಖಂಡಿಸಿ ಸೇಡಂನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು

ಸಚಿವ ಪ್ರಿಯಾಂಕ ಖರ್ಗೆ ಅವಹೇಳನ ಖಂಡಿಸಿ ಸೇಡಂನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು

ಸಚಿವ ಪ್ರಿಯಾಂಕ ಖರ್ಗೆ ಅವಹೇಳನ ಖಂಡಿಸಿ ಸೇಡಂನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು ಸೇಡಂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಜೀವ ಬೆದರಿಕೆ ಹಾಗೂ ಕುಟುಂಬವನ್ನು ಅಶ್ಲೀಲ ಪದಗಳಿಂದ ನಿಂದಿಸಿರುವದನ್ನು ಖಂಡಿಸಿ ನಾಗರಿಕ ಹೋರಾಟ ಸಮಿತಿ ಬ್ಲಾಕ್ ಕಾಂಗ್ರೆಸ್ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಕೊತ್ತಲಬಸವೇಶ್ವರ ದೇವಾಲಯದಿಂದ ಬಸವೇಶ್ವರ ವೃತ್ತದವರೆಗೆ ಕಾಲ್ನಡಿಗೆಯ ಮೂಲಕ ಪ್ರತಿಬಟಿಸಿ ಬಸವೇಶ್ವರ ವೃತದಲ್ಲಿ ಸಂಚಾರ ಬಂದಗೊಳಿಸಿ ತಹಶಿಲ್ದಾರ ಶ್ರೀಯಾಂಕ ಧನಶ್ರೀ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಇದೇ ವೇಳೆ ರಾಜ್ಯ ತೋಟಗಾರಿಕೆ ಮಹಾ ಮಂಡಳಿ ನಿರ್ದೇಶಕ ಬಸವರಾಜ ಪಾಟೀಲ ಊಡಗಿ ಪ್ರತಿಭಟನೆ ಉದ್ದೇಶಿಸಿ ಮಾತನಾಡಿ ಸಚಿವ ಪ್ರಿಯಾಂಕ ಖರ್ಗೆ ಬೆಳೆಯುತ್ತಿರುವದು ಅವರ ಮೇಲೆ ವ್ಯಯಕ್ತಿಕ ದ್ವೇಷ ಬೆಳವಣಿಗೆ ಸಹಿಸದ ಆರ್,ಎಸ್,ಎಸ್,ನವರು ಬಿಜೆಪಿಯವರು ವಿನಾಕಾರಣ ಆರೋಪಿಸುತ್ತಿದ್ದಾರೆ .ಸರ್ವರಿಗೆ ಒಳ್ಳೆಯದು ಬಯಸುವ ಖರ್ಗೆ ಅವರು ಸಾರ್ವಜನಿಕ ಸ್ಥಳಗಳಲ್ಲಿ ಕೋಮು ಭಾವನೆ ಸೃಷ್ಟಿ ಆಗಬಾರದೆಂದು ಎನ್ನುವ ಕಾರಣಕ್ಕೆ ಸರಕಾರಿ ಸ್ಥಳಗಳಲ್ಲಿ ಆರ್,ಎಸ್,ಎಸ್, ಚಟುವಟಿಕೆ ನಿಯಂತ್ರಿಸುವಂತೆ ಮುಖ್ಯ ಮಂತ್ರಿಗಳಿಗೆ ಪತ್ರ ಬರೆದಿದ್ದಾರೆ ಇದರಿಂದ ಬಯಗೊಂಡು ಆರ್,ಎಸ್,ಎಸ್,ನವರು ಖರ್ಗೆಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ ಇದು ಖಂಡನೀಯ ಇಂತವರನ್ನು ನಿಯಂತ್ರಿಸುವ ಕೆಲಸ ಆಗಬೇಕಾಗಿದೆ ಎಂದು ಹೇಳಿದರು. ಮುಧೋಳ ಕಾಂಗೆಸ್ ಎಸ್ಸಿ ಘಟಕ ಅದ್ಯಕ್ಷ ಜೈಭೀಮ ಊಡಗಿ, ಮಾಜಿ ಕಾಡಾ ಅದ್ಯಕ್ಷ ಮಹಾಂತಪ್ಪ ಸಂಗಾವಿ ಮಾತನಾಡಿದರು. ಈ ಸಂದರ್ಭದಲ್ಲಿ ಸೇಡಂ ಬ್ಲಾಕ್ ಅದ್ಯಕ್ಷ ಶಿವಶರಣರೆಡ್ಡಿ ಪಾಟೀಲ,ಮುಧೋಳ ಬ್ಲಾಕ್ ಅದ್ಯಕ್ಷ ರವಿಂದ್ರ ನಂದಿಗಾಮ, ಪುರಸಭೆ ಅದ್ಯಕ್ಷ ವಿರೇಂದ್ರ ರುದ್ನೂರ, ರವಿ ಸಾಹು ತಂಬಾಕೆ, ನಾಗರಿಕ ಹೋರಾಟ ಸಮಿತಿ ಅದ್ಯಕ್ಷ ವಿಲಾಸ ಗೌತಮ್, ಮಾರುತಿ ಕೋಡಂಗಲಕರ್,ಜಗನ್ನಾಥ ಚಿಂತಪಳ್ಳಿ, ಮಹಿಳಾ ಕಾಂಗ್ರೆಸ್ ಅದ್ಯಕ್ಷೆ ಲಲಿತಾ ಯಾಕಾಪೂರ, ಸತೀಷ ಪೂಜಾರಿ, ಅಬ್ದುಲ್ ಗಪೂರ್, ರಾಮಯ್ಯ ಪೂಜಾರಿ, ಪ್ರಶಾಂತ ಸೇಡಮಕರ್,ಬಸವರಾಜ ಕಾಳಗಿ ,ಇನ್ನೂ ಅನೇಕ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಶರಣಪ್ಪ ಎಳ್ಳಿ ssvtv news ಸೇಡಂ

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!