Home Uncategorized ಭೂಸ್ವಾಧೀನದ ಪರಿಹಾರ ಹಣ ವಂಶವೃಕ್ಷದಂತೆ ವಿತರಿಸದೆ ಭೂಸ್ವಾಧೀನ ಅಧಿಕಾರಿ ಭ್ರಷ್ಟ

ಭೂಸ್ವಾಧೀನದ ಪರಿಹಾರ ಹಣ ವಂಶವೃಕ್ಷದಂತೆ ವಿತರಿಸದೆ ಭೂಸ್ವಾಧೀನ ಅಧಿಕಾರಿ ಭ್ರಷ್ಟ

0
ಭೂಸ್ವಾಧೀನದ ಪರಿಹಾರ ಹಣ ವಂಶವೃಕ್ಷದಂತೆ ವಿತರಿಸದೆ ಭೂಸ್ವಾಧೀನ ಅಧಿಕಾರಿ ಭ್ರಷ್ಟ

ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಯಲ್ಮಾಮಡಿ ಗ್ರಾಮದ ರೈತರಿಗೆ ಭೂಸ್ವಾಧೀನದ ಪರಿಹಾರ ಹಣವನ್ನು ವಂಶವೃಕ್ಷದಂತೆ ವಿತರಿಸದೆ ಭೂಸ್ವಾಧೀನ ಅಧಿಕಾರಿ ಕಲಬುರಗಿ ಅವರು ಕಾನೂನು ಭ್ರಷ್ಟಾಚಾರದಿಂದ ಪರಿಹಾರದ ಹಣವನ್ನು ನ್ಯಾಯಾಲಯದ ಆದೇಶದ ವಿರುದ್ಧವಾಗಿ ಪಡೆದುಕೊಂಡಿದ್ದಾರೆ ಎಂದು ಸಂತ್ರಸ್ಥರು ಆರೋಪಿಸಿದ್ದಾರೆ ದಿನಾಂಕ-4-08-2025 ರಂದು ನಾನು ವಿಶೇಷ ಭೂಸ್ವಾಧೀನಾಧಿಕಾರಿಗಳು ಕರ್ನಾಟಕ ನೀರಾವರಿ ನಿಗಮ ನಿಯಮಿತ ಕಲಬುರಗಿ ಅವರಿಗೆ ಜಮೀನಿನ ಭೂಸ್ವಾಧೀನ ಹಣವನ್ನು ವಂಶಸ್ಥರಿಗೆ ಕಾನೂನು ಪ್ರಕಾರ ಹಂಚಲು ತಕರಾರು ಅರ್ಜಿಯನ್ನು ಸಲ್ಲಿಸಲಾಗಿತ್ತು. ಅಂದು ಅವರು ಮನವಿಯನ್ನು ಸ್ವೀಕರಿಸಿ ವಂಶಾವಳಿಯ ಪ್ರಕಾರ ವಿತರಿಸುವುದಾಗಿ ತಿಳಿಸಿದ್ದರು. ಆದರೆ ಈಗ ಮನವಿಯನ್ನು ತಿರಸ್ಕರಿಸಿ ತಮ್ಮ ನಾಗಯ್ಯ ಮತ್ತು ಅಕ್ಕ ರೇಣುಕಾ ವರಿಬ್ಬರಿಗೆ ಮಾತ್ರ ವಿತರಿಸಲು ಮೇಲಾಧಿಕಾರಿಗಳಿಗೆ ದಾಖಲೆಗಳನ್ನು ಸಲ್ಲಿಸಿದ್ದಾರೆ. ಆಜ್ಜಿ ದಿ. ಶಿವಮ್ಮ ಗಂಡ ನಾಗಯ್ಯ ಹಾಗೂ ತಂದೆ ತಾಯಿ ಯಾರೂ ಜೀವಂತವಿಲ್ಲ. ಕಾನೂನು ಪ್ರಕಾರ ವಂಶಾವಳಿಯ ಪ್ರಕಾರ ಮೂರು ಜನರು ಹಕ್ಕುದಾರರಾಗಿದ್ದು ಆ ವಿಷಯ ವಿಶೇಷ ಭೂಸ್ವಾಧೀನಾಧಿಕಾರಿಗಳಿಗೆ ಗೊತ್ತಿದ್ದರೂ ನನ್ನ ಹೆಸರನ್ನು ಹೊರತು ಪಡಿಸಿ ನನ್ನ ಅಕ್ಕ ಮತ್ತು ತಮ್ಮನಿಗೆ ಮಾತ್ರ ಹಣ ವಿತರಿಸುತ್ತಿದ್ದಾರೆ. ಸತ್ಯ ಸಂಗತಿಯನ್ನು ಮರೆಮಾಚಿ ಬ್ರಷ್ಟಾಚಾರದಿಂದ ಬಡ ರೈತರಿಗೆ ಅನ್ಯಾಯ ಮಾಡುತ್ತಿರುವ ಇಂತಹ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಂಡು ನಮ್ಮಂತ ಬಡರೈತರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕೆಂದು ವಿನಂತಿಸಲಾಗಿದೆ

LEAVE A REPLY

Please enter your comment!
Please enter your name here

error: Content is protected !!