Home Uncategorized ನಲವತ್ತುವರ್ಷದಲ್ಲೆಅತಿ ಹೆಚ್ಚುಮಳೆಈಭಾಗದಲ್ಲಿಆಗಿದೆ NDRF ಪ್ರಕಾರ ಏನು ಪರಿಹಾರ ನೀಡಬೇಕು ಕೊಡಿ; ಬಿ ವೈ ವಿಜಯೇಂದ್ರ

ನಲವತ್ತುವರ್ಷದಲ್ಲೆಅತಿ ಹೆಚ್ಚುಮಳೆಈಭಾಗದಲ್ಲಿಆಗಿದೆ NDRF ಪ್ರಕಾರ ಏನು ಪರಿಹಾರ ನೀಡಬೇಕು ಕೊಡಿ; ಬಿ ವೈ ವಿಜಯೇಂದ್ರ

0
ನಲವತ್ತುವರ್ಷದಲ್ಲೆಅತಿ ಹೆಚ್ಚುಮಳೆಈಭಾಗದಲ್ಲಿಆಗಿದೆ NDRF ಪ್ರಕಾರ ಏನು ಪರಿಹಾರ ನೀಡಬೇಕು ಕೊಡಿ; ಬಿ ವೈ ವಿಜಯೇಂದ್ರ

ನಲವತ್ತು ವರ್ಷದಲ್ಲೆ ಅತಿ ಹೆಚ್ಚು ಮಳೆ ಈಭಾಗದಲ್ಲಿ ಆಗಿದೆ.. ಅಫಜಲಪುರ ಭಾಗದಲ್ಲಿ 1ಲಕ್ಷ 34 ಸಾವಿರ ಹೆಕ್ಟರ್ ಪ್ರದೇಶಲದಲ್ಲಿ ಬೆಳೆ ಹಾನಿ ಯಾಗಿದೆ.. ಬೆಳೆ ವಿಮೆ ಮಾಡಿಸಿದ್ದರು ಪರಿಹಾರ ನೀಡಲು ಸರ್ಕಾರ ತಡ ಮಾಡುತ್ತಿದೆ.. ರಾಜ್ಯ ಸರ್ಕಾರದ ಕಡೆ ರೈತರು ತಿರುಗಿ ನೋಡುತ್ತಿದ್ದಾರೆ.. ದುರಂತ ಅಂದ್ರೆ ಜಿಲ್ಲೆ ಉಸ್ತುವಾರಿ ಸಚಿವರು,ಕಂದಾಯ ಸಚಿವರು ಬರ್ತಿಲ್ಲಾ.. ಬೆಂಗಳೂರಿನಲ್ಲೆ ಕುಳಿತು ಚರ್ಚೆ ಮಾಡ್ತಿದ್ದಾರೆ, ಸಿಎಂ ಗೆ ಭೇಟಿಯಾಗ್ತಾರೆ.. ತಮ್ಮ ತಮ್ಮ ಭಾಗಕ್ಕೆ ಬಂದು ಭೇಟಿ ಕೊಟ್ಟು ಸಮೀಕ್ಷೆ ಮಾಡಿ ಸಿಎಂ ಗೆ ವರದಿ ಸಲ್ಲಿಸಬೇಕಿತ್ತು.. ವೈಮಾನಿಕ ಸಮೀಕ್ಷೆ ಮಾಡೊದಾದ್ರೆ ಜನಪ್ರತಿನಿಧಿಗಳು ಯಾಕೆ ಬೇಕು.ಅಂದರೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಕಲಬುರಗಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ್ದಾರೆ ಇಂದು ಕಲಬುರಗಿಗೆ ಸಿಎಂ ಸಿದ್ದರಾಮಯ್ಯ ಅವರು ಬರ್ತಿದ್ದಾರೆ.. ಸಿಎಂ ಅವರೆ ನೀವು ಕಲಬುರಗಿಗೆ ಬರುವ ಮೊದಲು ಪರಿಹಾರಘೋಷಿಸಿ ಬನ್ನಿ.. ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಏನು ಪರಿಹಾರ ಪ್ಯಾಕೇಜ್ ನೀಡ್ತಿರಾ ಘೋಷಣೆಮಾಡಿ ಆಮೆಲೆ ಬನ್ನಿ.. ಅದನ್ನು ಬಿಟ್ಟು ಕೇಂದ್ರಕ್ಕೆ ಪತ್ರ ಬರೆಯುತ್ತೆನೆ ಎನ್ನುವ ನಿಮ್ಮ ಮಾತು ಬಿಡಿ. NDRF ಪ್ರಕಾರ ಏನು ಪರಿಹಾರ ನೀಡ ಬೇಕು ಅದನ್ನು ಮೊದಲುಕೊಡಿ.. ಕೇಂದ್ರಕ್ಕೆ ರಾಜ್ಯ ಬಿಜೆಪಿ ನಿಯೋಗ ಹೋಗುವ ಅವಶ್ಯಕತೆ ಇಲ್ಲಾ.. NDRF ಪ್ರಕಾರ ಏನು ಪರಿಹಾರ ಕೊಡ ಬೇಕು ಅದನ್ನು ಕೊಡಲಿ.. ನಿನ್ನೆ ಸಿಎಂ ಅವರಗೆ ಬೀದರ್ ರಾಯಚೂರು ಉಸ್ತುವಾರಿ ಸಚಿವರು ಅಲ್ಲೇ ಮನವಿ ಕೊಡ್ತಾರೆ. ನಿಮ್ಮ ಕೃಷಿ ಸಚಿವರಿಗೆ ಕಂದಾಯ ಸಚಿವರಿಗೆ ಬೆಂಗಳೂರಿಗೆ ಬರಬೇಡಿ ಅಂತಾ ಹೇಳಿ.. ಒಂದು ತಿಂಗಳು ನೀವು ಯಾರು ಬೆಂಗಳೂರಿಗೆ ಬರಬೇಡಿ ಅಂತಾ ಹೇಳಿ.. ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತಿವೃಷ್ಠಿಗೊಳಗಾದ ಪ್ರದೇಶಕ್ಕೆ ತಿರುಗಾಡಿ ಎಂದು ಹೇಳಿ.. ಎಷ್ಟೆಲ್ಲಾ ಬೆಳೆ ಹಾನಿಯಾಗಿದೆ,ಮನೆಗಳು ಹಾನಿಯಾಗಿದೆ ಎಂದು ವರದಿ ಸಲ್ಲಿಸೊಕೆ ಹೇಳಿ ಎಂದಿದ್ದಾರೆ

LEAVE A REPLY

Please enter your comment!
Please enter your name here

error: Content is protected !!