Home Uncategorized ತೆಂಗಳಿ ಗ್ರಾಮ ವಾರ್ಡ್ ನಂಬರ್ 1ರಲ್ಲಿ ಮೂಲಭೂತ ಸೌಕರ್ಯಗಳಿಲ್ಲದ ಕಾರಣ ಕಲ್ಯಾಣ ಕರ್ನಾಟಕ ವಿಮೋಚನ ತಾತ್ಕಾಲಿಕ ಸ್ಥಗಿತ

ತೆಂಗಳಿ ಗ್ರಾಮ ವಾರ್ಡ್ ನಂಬರ್ 1ರಲ್ಲಿ ಮೂಲಭೂತ ಸೌಕರ್ಯಗಳಿಲ್ಲದ ಕಾರಣ ಕಲ್ಯಾಣ ಕರ್ನಾಟಕ ವಿಮೋಚನ ತಾತ್ಕಾಲಿಕ ಸ್ಥಗಿತ

0

ಕಾಳಗಿ ತಾಲೂಕಿನ ತೆಂಗಳಿ ಗ್ರಾಮದಲ್ಲಿ ವಾರ್ಡ್ ನಂಬರ್ 1ರಲ್ಲಿ ಮೂಲಭೂತ ಸೌಕರ್ಯಗಳಿಲ್ಲದ ಕಾರಣ ಕಲ್ಯಾಣ ಕರ್ನಾಟಕ ವಿಮೋಚನ ಧ್ವಜಾರೋಹಣ ಕಾರ್ಯಕ್ರಮವನ್ನು ತಾತ್ಕಾಲಿಕ ಸ್ಥಗಿತ ಮಾಡಿ ವಾರ್ಡ್ ಸಂಖ್ಯೆ-1 ಜನರು ಪ್ರತಿಭಟನೆ ಮಾಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ಅಧ್ಯಕ್ಷರು ಹಾಗೂ ವಾರ್ಡ್ನ ಸದಸ್ಯರು ಸೇರಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು ರಸ್ತೆ ಶೌಚಾಲಯ ಮತ್ತು ಬೀದಿ ದೀಪಗಳ ಸಮಸ್ಯೆಗಳನ್ನು ಎರಡು ದಿನದ ಒಳಗಾಗಿ ಮಾಡಿಕೊಡುವುದಾಗಿ ಒಪ್ಪಂದ ಪತ್ರವನ್ನು ವಾರ್ಡಿನ ಜನರಿಗೆ ಬರೆದು ಕೊಟ್ಟಿರುತ್ತಾರೆ,ತದನಂತರ ಧ್ವಜಾರೋಹಣಕ್ಕೆ ಜನರು ಅವಕಾಶ ಮಾಡಿಕೊಟ್ಟಿರುತ್ತಾರೆ , ಇದೇ ಸಂದರ್ಭದಲ್ಲಿ ತಾಲೂಕಿನ ಇಓ ಆದ ಬಸಲಿಂಗಪ್ಪ ಡಿಗಿ ಅವರು ಗ್ರಾಮಕ್ಕೆ ಭೇಟಿ ನೀಡಿ ಜನರ ಸಮಸ್ಯೆಯನ್ನು ಕೇಳಿ ಶೀಘ್ರವೇ ಪರಿಹರಿಸಿಕೊಡುವುದಾಗಿ ಹೇಳಿದರು

LEAVE A REPLY

Please enter your comment!
Please enter your name here

error: Content is protected !!