ಯಾದಗಿರಿ ಜಾತಿ ಹೆಸರಿನಲ್ಲಿ ಕ್ರೈಸ್ತ ಧರ್ಮ ಹೆಸರಿನ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರ, ಯಾದಗಿರಿಯಲ್ಲಿ ಛಲವಾದಿ ನಾರಾಯಣಸ್ವಾಮಿ ಪ್ರತಿಕ್ರಿಯೆ, ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಜಾತಿ ಸಮೀಕ್ಷೆಯಲ್ಲಿ 52 ಹೊಸ ಕ್ರಿಶ್ಚಿಯನ್ ಜಾತಿಗಳ ಹೆಸರು ಉಲ್ಲೇಖಕ್ಕೆ ಛಲವಾದಿ ನಾರಾಯಣಸ್ವಾಮಿ ಸರಕಾರದ ವಿರುದ್ಧ ಗರಂ, ಒಂದು ಧರ್ಮ ಬಿಟ್ಟು ಇನ್ನೊಂದು ಧರ್ಮಕ್ಕೆ ಸೇರಿದವರು ಆ ಧರ್ಮದವರೇ ಹೊರತು, ಮತ್ತೆ ಅವರು ಹಳೆ ಧರ್ಮದವರು ಆಗುವುದಿಲ್ಲ, ಹಿಂದೂ ಧರ್ಮ ಬಿಟ್ಟು ಕ್ರೈಸ್ತ ಧರ್ಮಕ್ಕೆ ಸೇರಿದರೇ ಅತ ಕ್ರೈಸ್ತನೇ ಹೊರತು ಮತ್ತೆ ಹಳೆ ಧರ್ಮದವರು ಆಗುವುದಿಲ್ಲ, ಯಾವುದೇ ಜಾತಿ ವ್ಯಕ್ತಿ ಹಿಂದೂ ಧರ್ಮ ಬಿಟ್ಟು ಕ್ರೈಸ್ತ ಧರ್ಮಕ್ಕೆ ಸೇರಿದರೆ ಆತ ಕ್ರೈಸ್ತನೇ ಹೊರತು ಹಿಂದೂ ಕ್ರೈಸ್ತ ಆಗುವದಿಲ್ಲ, ಈಗ ಆ ರೀತಿ ಹೇಳಲು ಹೊರಟರೇ ಇಸ್ಲಾಂ ಧರ್ಮಕ್ಕೆ ಬಹಳ ಜನರು ಹಿಂದೇ ಸೇರಿಕೊಂಡಿದ್ದಾರೆ, ಬಹಳ ಜನ ಸೇರಿದ್ದು ಅವರು ಈಗ ಮುಸ್ಲಿಂ ಆಗಿದ್ದಾರೆ ಹೊರತು, ಔರಂಗಜೇಬನ ಕಾಲದಿಂದ ಹಿಡಿದು ಮುಸ್ಲಿಂ ಧರ್ಮಕ್ಕೆ ಸೇರಿದ್ದವರು ಮುಸ್ಲಿಂರು ಹೊರತು ,ಹಿಂದೂ ಮುಸ್ಲಿಂ ಅಲ್ಲ, ಅಂದರೆ ಕ್ರೈಸ್ತ ಧರ್ಮಕ್ಕೆ ಸೇರಿದವರು ಕ್ರೈಸ್ತರೇ ಆಗುತ್ತಾರೆ ಹೊರತು ಹಿಂದೂ ಕ್ರೈಸ್ತರಾಗುವದಿಲ್ಲ, ಇದಕ್ಕೆ ಕ್ರೈಸ್ತರು ಜನರಿಗೆ ಉತ್ತರ ಕೊಡಬೇಕು, ನೀವು ಧಾರ್ಮಿಕವಾಗಿ ಸೇರಿಸಿಕೊಂಡರೇ ಬ್ರಾಹ್ಮಣರಾಗಿ ಬಂದವರನ್ನು ಬ್ರಾಹ್ಮಣ ಕ್ರೈಸ್ತರು,ಒಕ್ಕಲಿಗ,ದಲಿತ, ಕುರುಬ ಕ್ರೈಸ್ತರು ಎಂದು ನಿಮ್ಮಲ್ಲಿ ಜಾತಿ ಇದೆಯಾ, ನಿಮ್ಮ ಧರ್ಮದಲ್ಲಿ ಈ ತರಹ ಜಾತಿ ಇದೆಯಾ ಆ ರೀತಿ ಯಾಕೆ ಗುರುತಿಸುತ್ತಿರಿ, ಧರ್ಮ, ಜಾತಿ ಹೆಸರಿನಲ್ಲಿ ಕ್ರೈಸ್ತರನ್ನು ಗುರುತಿಸಲು ಅವಕಾಶ ಕೊಡಬಾರದು, ಒಂದು ಬಾರಿ ಧರ್ಮ ಬಿಟ್ಟು ಹೋದರೆ ಮುಗಿದು ಹೊಯ್ತು, ಯಾವ ಧರ್ಮಕ್ಕೆ ಹೊಗುತ್ತಾರೋ ಅದೆ ಧರ್ಮದವರು ಅವರು ಹಿಂದೂ ಆಗಲು ಸಾಧ್ಯವಿಲ್ಲ, ಜಾತಿ,ಧರ್ಮದ ಹೆಸರಿನಲ್ಲಿ ಕ್ರೈಸ್ತರೆಂದು ಗುರುತಿಸಬಾರದು SC,ST ಯಲ್ಲಿ ಕೂಡ ಕ್ರೈಸ್ತ ಧರ್ಮ ಸೇರಿದ್ದಾರೆ, ಮೊನ್ನೆ ತಾನೆ ನೀವು ಮೀಸಲಾತಿ ಕೊಟ್ಟಿದ್ದಿರಿ, ಇದರಿಂದ ಮೀಸಲಾತಿಗೆ ಅರ್ಥ ಬರುವದಿಲ್ಲ ಅನೇಕರು ಕ್ರೈಸ್ತ ಧರ್ಮಕ್ಕೆ ಸೇರಿದ್ದು SC,ST ಸರ್ಟಿಫಿಕೇಟ್ ಪಡೆದಿದ್ದಾರೆ, ಕ್ರೈಸ್ತ ಧರ್ಮ ಎಂದು ತೆಗೆದುಕೊಂಡರೇ ಅವರಿಗೆ SC ಸರ್ಟಿಫಿಕೇಟ್ ಸಿಗುವದಿಲ್ಲ, ಇದು ಬಹಳ ದೊಡ್ಡ ಸಮಸ್ಯೆ ಆಗಲಿದೆ, ಕಾಂಗ್ರೆಸ್ ಸರಕಾರ ಸಮಸ್ಯೆ ಸೃಷ್ಟಿ ಮಾಡುತ್ತಿದೆ, ಕಾಂಗ್ರೆಸ್ ಸರಕಾರ ಜನರ ನೆಮ್ಮದಿ ಕಿತ್ತುಕೊಳ್ಳುವ ಕೆಲಸ ಮಾಡುತ್ತದೆ ಎಂದ ಛಲವಾದಿ ನಾರಾಯಣಸ್ವಾಮಿ ಹೇಳಿಕೆ