Home Uncategorized ನ್ಯಾಯಾಲಯದ ಆದೇಶ ಪಾಲನೆ ಮಾಡುವಂತೆ, ಕೆಲಸದ ಸ್ಥಳದಲ್ಲಿ ನಡೆಯುತ್ತಿರುವ ಕಿರುಕುಳ ತಪ್ಪಿಸಲು ಮತ್ತು ಇತರ ಬೇಡಿಕೆಗಳಿಗೆ ಆಗ್ರಹ

ನ್ಯಾಯಾಲಯದ ಆದೇಶ ಪಾಲನೆ ಮಾಡುವಂತೆ, ಕೆಲಸದ ಸ್ಥಳದಲ್ಲಿ ನಡೆಯುತ್ತಿರುವ ಕಿರುಕುಳ ತಪ್ಪಿಸಲು ಮತ್ತು ಇತರ ಬೇಡಿಕೆಗಳಿಗೆ ಆಗ್ರಹ

0

ನ್ಯಾಯಾಲಯದ ಆದೇಶ ಪಾಲನೆ ಮಾಡುವಂತೆ, ಕೆಲಸದ ಸ್ಥಳದಲ್ಲಿ ನಡೆಯುತ್ತಿರುವ ಕಿರುಕುಳ ತಪ್ಪಿಸಲು ಮತ್ತು ಇತರ ಬೇಡಿಕೆಗಳಿಗೆ ಆಗ್ರಹಿಸಿ ಉಗಾರ್ ಶುಗರ್ ಕಾಂಟ್ರಾಕ್ಟ್ ವರ್ಕರ ಯೂನಿಯನ್ ಸಂಯೋಜಿತ ಎ.ಐ.ಟಿ.ಯು.ಸಿ ವತಿಯಿಂದ ದಿನಾಂಕ 15-09-2025 ರಂದು ಪ್ರತಿಭಟನಾ ಧರಣಿ ನಡೆಸುತ್ತಿರುವ ಕುರುತಾಗಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಲಾಗಿದೆ

 

ಯಡ್ರಾಮಿ ತಾಲೂಕಿನಲ್ಲಿರುವ ಏಕೈಕ ಸಕ್ಕರೆ ಕೈಗಾರಿಕೆಯಾದ ಉಗಾರ್ ಶುಗರ್ ವರ್ಕ್ಸ ಲಿ ಮಳ್ಳಿ-ನಾಗರಳ್ಳಿಯಲ್ಲಿ ಕಾರ್ಖಾನೆ ಪ್ರಾರಂಭವಾದಾಗಿನಿಂದಲೂ ಸೆಕ್ಯೂರಿಟಿ ಕೆಲಸವನ್ನು ಮಾಡುತ್ತ ಬಂದಿರುವ ಕಾರ್ಮಿಕರಿಗೆ ಕನಿಷ್ಟ ವೇತನವನ್ನೂ ಕೊಡದೇ. ಇತರೆ ಮೂಲಭೂತ ಸೌಲಭ್ಯಗಳನ್ನು ಒದಗಿಸದೇ ಜೀತದಾಳುಗಳಂತೆ ದುಡಿಸಿಕೊಳ್ಳುತ್ತಿದ್ದ ಸಂದರ್ಭದಲ್ಲಿ ನಮ್ಮ ಹಕ್ಕುಗಳ ರಕ್ಷಣೆಗಾಗಿ ಕಾರ್ಮಿಕ ಸಂಘವನ್ನು ರಚಿಸಿಕೊಂಡು ಕಾನೂನುಬದ್ದವಾಗಿ ನಮಗೆ ದೊರೆಯಬೇಕಾದ ಸೌಲಭ್ಯಗಳನ್ನು ಕೇಳಲು ಮುಂದಾದಾಗಿನಿಂದಲೂ ಆಡಳಿತ ಮಂಡಳಿ ಹಾಗೂ ನೆಪ ಮಾತ್ರಕ್ಕೆ ಇರುವ ಗುತ್ತಿಗೆದಾರರಿಂದ ಹಲವು ಬಗೆಯ ತೊಂದರೆಗಳು ಪ್ರಾರಂಭವಾಗಿವೆ. ಬಾಕಿ ಇರುವ ಕನಿಷ್ಟ ವೇತನ ಮತ್ತು ಹೆಚ್ಚುವರಿ ಕೆಲಸ ಮಾಡಿಸಿಕೊಂಡು ಕೊಡಬೇಕಾಗಿದ್ದ ವೇತನವನ್ನು ಕೊಡದೇ ಸತಾಯಿಸುತ್ತಿದ್ದು, ಅದನ್ನು ಪ್ರಶ್ನಿಸಿ ಉಪ ಕಾರ್ಮಿಕ ಆಯುಕ್ತರ ನ್ಯಾಯಾಲಯಕ್ಕೆ ಮೋರೆ ಹೋಗಿ ನ್ಯಾಯ ಪಡೆಯಲು ಪ್ರಯತ್ನಿಸಲಾಗಿದೆ. ಆದರೆ ಕಾರ್ಖಾನೆ ಆಡಳಿತ ಮಂಡಳಿ ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡದೇ ಕಾರ್ಮಿಕ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಹಾಗೂ ಗುತ್ತಿಗೆದಾರ ಐಪಿಎಫ್ ಸಂಸ್ಥೆಯೂ ಕೂಡ, ಯಾವದೇ

LEAVE A REPLY

Please enter your comment!
Please enter your name here

error: Content is protected !!