Home Uncategorized ವೈಚಾರಿಕತೆಗೆ ನೆಲೆಯಾಗಿದ್ದ ಮಂಗಳೂರ ಕೋಮುವಾದದ ಶಕ್ತಿ ಕೇಂದ್ರವನ್ನಾಗಿಸಿದ, ಆರ್.ಎಸ್.ಎಸ್ ಮತ್ತು ಬಿ.ಜೆ.ಪಿ ಆರ್.ಎಸ್.ಎಸ್ ಬೆಂಕಿ ಹಚ್ಚುವ ಕೆಲಸ ; ದಲತ ಸಂಘರ್ಷ ಸಮೀತಿ ಆರೋಪ

ವೈಚಾರಿಕತೆಗೆ ನೆಲೆಯಾಗಿದ್ದ ಮಂಗಳೂರ ಕೋಮುವಾದದ ಶಕ್ತಿ ಕೇಂದ್ರವನ್ನಾಗಿಸಿದ, ಆರ್.ಎಸ್.ಎಸ್ ಮತ್ತು ಬಿ.ಜೆ.ಪಿ ಆರ್.ಎಸ್.ಎಸ್ ಬೆಂಕಿ ಹಚ್ಚುವ ಕೆಲಸ ; ದಲತ ಸಂಘರ್ಷ ಸಮೀತಿ ಆರೋಪ

0

ಒಂದು ಕಾಲದಲ್ಲಿ ವೈಚಾರಿಕತೆಗೆ ನೆಲೆಯಾಗಿದ್ದ ಮಂಗಳೂರ ಕೋಮುವಾದದ ಶಕ್ತಿ ಕೇಂದ್ರವನ್ನಾಗಿಸಿದ, ಆರ್.ಎಸ್.ಎಸ್ ಮತ್ತು ಬಿ.ಜೆ.ಪಿ ಈಗ ರೈತ ಚಳುವಳಿ ಹಾಗೂ ದಲಿತ ಚಳುವಳಿಯ ವೈಚಾರಿಕತೆ ಪ್ರಜ್ಞೆಯಿಂದ ಕೂಡಿದ ಮಂಡ್ಯ ಜಿಲ್ಲೆಯನ್ನು ಕೋಮುವಾದದ ವಿಷ ಬೀಜ ಬಿತ್ತಲು ಹೋರಟಿರುವ ಬಿ.ಜೆ.ಪಿ ಮತ್ತು ಆರ್.ಎಸ್.ಎಸ್ ಬೆಂಕಿ ಹಚ್ಚುವ ಕೆಲಸ ಮಾಡುತ್ತಲಿದೆ. ಎಂದು ಕರ್ನಾಟಕ ರಾಜ್ಯ ದಕಿತ ಸಂಘರ್ಷ ಸಮೀತಿ ಆರೋಪಿಸಿದೆ ಕೇರೆಗೋಡು ಹನುಮಧ್ವಜ ಪ್ರಕರಣ, ನಾಗಮಂಗಲ ಗಣೇಶ ಮೇರವಣಿಗೆ, ಉರಿಗೌಡ ನಂಚೆಗೌಡ, ಪ್ರಕರಣಗಳಿಂದ ಕೋಮು ಪ್ರಚೋದನೆಗೆ ಸನ್ನಿವೇಶಗಳು ಸೃಷ್ಟಿ ಮಾಡಿದೆ. ಹೆಣ ಬಿದ್ದರೆ ಹದ್ದುಗಳಿಗೆ ಹಬ್ಬ, ಗಲಭೆಯೆದ್ದರೆ ಆರ್ಎಸ್ಎಸ್ ಮತ್ತು ಬಿಜೆಪಿಯವರಿಗೆ ಸ್ವರ್ಗ ಎಂಬುದು ಇವತ್ತಿನ ರಾಜಕೀಯ ವಾಸ್ತವವಾಗಿದೆ. ಮದ್ದುರು ಗಣೇಶ ಮೂರ್ತಿಯ ಮೇರವಣಿಗೆಯ ಸಂದರ್ಭದಲ್ಲಿ ನಡೆದ ಕಲ್ಲು ತೂರಾಟದ ಸಂದರ್ಭದಲ್ಲಿ ಹಿಂದು, ಮುಸ್ಲಿಂ ಸಮುದಾಯದವರು ವಿವಚನೆಯಿಂದ ವರ್ತಿಸಬೇಕಾಗಿತ್ತು. ತಮ್ಮ ತಮ್ಮ ಸಮುದಾಯದವರ ಮಿದುಳಿನಲ್ಲಿ ವಿಷವನ್ನು ತುಂಬಿ ಗಲಭೆಗೆ, ಪ್ರಚೋದಿಸುವ, ಹಿಂಸೆಗೆ ಉತ್ತೇಜನ ನೀಡುವ ಕೆಲ ವಿಷ ಜಂತುಗಳು ಎರಡು ಸಮುದಾಯಗಳಲ್ಲಿ ಇವೆ. ಇಂತಹ ಘಟನೆಗಳು ನಡೆದಾಗ ರಾಜಕೀಯ ನಾಯಕರು ಎನಿಸಿಕೊಂಡವರು ಸಂಯಮದಿಂದ ವರ್ತಿಸಿ ಶಾಂತಿಕಾಪಾಡುವ ವಾತಾವರಣ ನಿರ್ಮಾಣ ಮಾಡುವುದು ಮೊದಲ ಕೆಲಸವಾಗಬೇಕು. ಆದರೆ ಕೋಮು ಘರ್ಷಣೆಯನ್ನು ಮುಂದಿಟ್ಟುಕೊಂಡು ತಮ್ಮ ರಾಜಕೀಯ ನೆಲೆಯನ್ನು ವಿಸ್ತರಿಸಿಕೊಳ್ಳುವುದು ಮಾಡಬಾರದು. ಮದ್ದುರು ಘಟನೆಯಲ್ಲಿ ಬಿ.ಜೆ.ಪಿ ನಾಯಕರ ಮಾತು ನಡೆಗಳು ನೋಡಿದರೆ ಅವರಿಗೆ ಸಾರ್ವಜನಿಕ ಲಜ್ಜೆಯಾಗಲಿ. ಜನಹಿತದ ಕಾಳಜಿಯಾಗಲಿ ಇದ್ದಂತೆ ಕಾಣುವುದಿಲ್ಲ. ರಾಜಕೀಯ ಲಾಭ ಪಡೆದುಕೊಳ್ಳಲು, ಯಾರನ್ನಾದರು ಬಲಿ ಕೊಡಲು ಹತಾರ ಹಿಡಿದು ನಿಂತಂತೆ ವರ್ತಿಸುತ್ತಿದ್ದಾರೆ. ಎಂದು ಆರೋಪಿಸಲಾಗಿದೆ

LEAVE A REPLY

Please enter your comment!
Please enter your name here

error: Content is protected !!