Home Uncategorized ಕರ್ನಾಟಕ ಸರಕಾರ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಕಾರ್ಯ ಕೈಕೊಂಡಿದೆ

ಕರ್ನಾಟಕ ಸರಕಾರ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಕಾರ್ಯ ಕೈಕೊಂಡಿದೆ

0
ಕರ್ನಾಟಕ ಸರಕಾರ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಕಾರ್ಯ ಕೈಕೊಂಡಿದೆ

ಕರ್ನಾಟಕ ಸರಕಾರ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಕಾರ್ಯ ಕೈಕೊಂಡಿದೆ. ಗಣತಿಗಾಗಿ ಅಂಕಣಗಳೊಳ ಪತ್ರಿಕೆತಯಾರಿಸಿದೆ. ಅದರಲ್ಲಿ ಜಾತಿಗಳ ವಿವರಣೆಗಳಿಗಾಗಿ ಅಂಕಣಗಳಿವೆ. ಆದರೆ ಅದರಲ್ಲಿ ಕಂಬಾರ, ಕಮ್ಮಾರ. ಬಡಿಗ ಮತ್ತು ಲೋಹಾರ ಜಾತಿಗಳ ಹೆಸರಿಲ್ಲ. ಬಹುಷ ವಿಶ್ವಕರ್ಮ ಸಮುದಾಯದಲ್ಲಿ ಸೇರಿಸಿರಬಹುದು. ವಿಶ್ವಕರ್ಮ ಸಮಾಜವು ಕಂಬಾರ, ಕಮ್ಮಾರ, ಲೋಹಾರ ಮತ್ತು ಬಡಿಗೇರಿಗೆ ಜನಿವಾರ ಇಲ್ಲಂತ ನಮ್ಮನ್ನು ದೂರ ಇಟ್ಟಿದ್ದಾರೆ. ವಿಶ್ವಕರ್ಮ ಅಭಿವೃದ್ಧಿ ನಿಗಮದಲ್ಲಿ ಜನಿವಾರಧಾರಿ ವಿಶ್ವಕರ್ಮದವರೇ ಇದ್ದಾರೆ. ಆದರಲಾಭ ಬಹಳಷ್ಟು ಜನಿವಾರ ವಿಶ್ವಕರ್ಮದವರೇ ತೆಗೆದುಕೊಳ್ಳುತ್ತಿದ್ದಾರೆ. ಇದು ಸತ್ಯ ವಿಶ್ವಕರ್ಮ ನಮ್ಮ ಜಾತಿ ಅಲ್ಲ ನಮ್ಮ ಜಾತಿ ಕಂಬಾರ, ಕಮ್ಮಾರ, ಲೋಹಾರ ಮತ್ತು ಬಡಿಗ ಇದೆ. ಸಾಮಾಜಿಕವಾಗಿ, ಸಂಸ್ಕೃತಿಕವಾಗಿ ಮತ್ತು ಶೈಕ್ಷಣಿಕವಾಗಿ ನಾವು ಬಹಳ ಹಿಂದೆ ಉಳಿದಿದ್ದೇವೆ ಯಂತ್ರಗಳು ಬಂದ ನಂತರ ನಮ್ಮ ಹೈರಾಣ ದೇವರಿಗೂ ಗೊತ್ತಾಗಿಲ್ಲ ಅಲೆಮಾರಿಗಳಾಗಿ ತಿರುಗಾಡುತ್ತಿದ್ದೇವೆ ಈ ಸಾಮಜಿಕ ಶೈಕ್ಷಣಿಕ ಸಮೀಕ್ಷೆ ಅಂಕಣಗಳಲ್ಲಿ ಹಿಂದು ಕಂಬಾರ ಬರೆಯಲು ವ್ಯವಸ್ಥೆ ಮಾಡಬೇಕು ಅದಕ್ಕಾಗಿ ಆಯೋಗದ ಸದಸ್ಯಕಾರ್ಯದರ್ಶಿಯವರಿಗೆ ಕಂಬಾರ ಜಾತಿ ಬರೆಯಲು ಬೇರೆ ಅಂಕಣ ವ್ಯವಸ್ಥೆ ಮಾಡಲು ಸೂಚಿಸಬೇಕಾಗಿ ಕಂಬಾರ ಸಮಾಜವು ಆಗ್ರಹಪೂರ್ವಕವಾಗಿ ಸರಕಾರಕ್ಕೆ ವಿನಂತಿ ಮಾಡಿಕೊಂಡಿದೆ

LEAVE A REPLY

Please enter your comment!
Please enter your name here

error: Content is protected !!