ಕಲಬುರಗಿ ನಗರದ ಆಳಂದ ರಸ್ತೆಯ ವಿಜಯನಗರ ಕಾಲೋನಿಯಲ್ಲಿನ ಐವತ್ತು ವರ್ಷಗಳ ಪುರಾತನ ವಿಗ್ನೇಶ್ವರ ದೇವಸ್ಥಾನದಲ್ಲಿ ಗಣೇಶ ಚತುರ್ಥಿಯ ಪ್ರಯುಕ್ತ ಹಮ್ಮಿಕೊಂಡ ಮೂರನೇ ದಿನದ ಶರಣ ಚರಿತಾಮೃತ ಪ್ರವಚನ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು
ಕಲ್ಪತರು ಸೇವಾ ಸಂಘದ ವತಿಯಿಂದ ವಿಗ್ನೇಶ್ವರ ದೇವಾಲಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಗಣೇಶ ಮೂರ್ತಿಯನ್ನು ಪ್ರತಿಷ್ಟಾಪಿಸಿದ್ದು, ವಿಗ್ರಹದ ಮೂರನೇ ದಿನದ ಪೂಜೆಯು ವೇದಮೂರ್ತಿ ಸಿದ್ದೇಶ್ವರ ಶಾಸ್ತ್ರಿಗಳ ನೇತೃತ್ವದಲ್ಲಿ ಕಮೀಟಿಯ ಅಧ್ಯಕ್ಷರಾದ ಸಂತೋಷ್ ಪಾಟೀಲ್ ಅವರ ಕುಟುಂಬಸ್ಥರಿಂದ ನೆರವೇರಿತು. ನಂತರ ಡಾ. ಪಂಚಾಕ್ಷರಿ ಪುಟ್ಟರಾಜ ಕವಿ ಶಿವಯೋಗಿಗಳ ಶಿಷ್ಯರಾದ ಹಿರೇಮಠ ಸಂಸ್ಥಾನ ಸುಂಟನೂರು ಕಲಬುರಗಿಯ ವೇದಮೂರ್ತಿ ಬಂಡಯ್ಯ ಶಾಸ್ತ್ರಿಗಳು ಶರಣ ಚರಿತಾಮೃತ ವಿಷಯದ ಕುರಿತು ನೀಡಿದ ಪ್ರವಚನದಲ್ಲಿ ಜೀವನವನ್ನು ಮೂರಕ್ಷರದ ನಿಘಂಟು ಎಂದು ಕರೆಯುವುದರ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು. ಈ ಪ್ರವಚನಕ್ಕೆ ಆಕಾಶವಾಣಿಯ ಹಾರ್ಮೋನಿಯಮ್ ಕಲಾವಿದರಾದ ಗುರುಶಾಂತಯ್ಯ ಹಿರೇಮಠ ಅವರು ಸಂಗೀತದ ಸಾಥನ್ನ ನೀಡಿದರೆ ತಬಲಾ ಸಾಥನ್ನ ಜಗದೀಶ ದೇಸಾಯಿ ಕಲ್ಲೂರು ಅವರು ನೀಡಿದರು.
ಈ ಸಂದರ್ಭದಲ್ಲಿ ಕಮೀಟಿಯ ಅಧ್ಯಕ್ಷರು ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಸಂತೋಷ್ ಪಾಟೀಲ್, ಉಪಾಧ್ಯಕ್ಷರಾದ ಡಾ.ಸಂತೋಷ ಕೋಟನೂರ, ಸೆಕ್ರೆಟ್ರಿ ಮುನಿಕುಮಾರ ಹಿರೇಮಠ, ಸೋಮದತ್ತ ಪಾಟೀಲ್ ಸೇರಿದಂತೆ ಕಮೀಟಿಯ ಉಳಿದ ಸದಸ್ಯರು, ಕಾಲೋನಿಯಲ್ಲಿನ ಮಹಿಳೆಯರು, ಹಿರಿಯರು, ಮುದ್ದುಮಕ್ಕಳು, ಹಲವರು ಪ್ರವಚನ ಆಲಿಸಲು ಸೇರಿದ್ದರು