ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘ ಬೆಂಗಳೂರು ಇವರ ವತಿಯಿಂದ ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆ ಪತ್ರಿಕೆಗಳಿಗೆ ಎರಡು ಪುಟಗಳ ಜಾಹೀರಾತು ನೀಡಲು ಆಗ್ರಹಿಸಿ ಇಂದು ಅಪರ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯ್ತು
ಕಲ್ಯಾಣ ಕರ್ನಾಟಕ ಭಾಗದ ಪತ್ರಿಕೆಗಳಿಗೆ ಸರ್ಕಾರದ ವತಿಯಿಂದ ಪ್ರತಿತಿಂಗಳು ಎರಡು ಪುಟಗಳ ಜಾಹೀರಾತು ನೀಡಬೇಕು ಕಲಬುರಗಿಯಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಪತ್ರಿಕೆಗಳ ಜಾಹೀರಾತು ವಿಚಾರ ಸೇರ್ಪಡೆ ಮಾಡಿ ಅದನ್ನ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡುವ ಮೂಲಕ ಪತ್ರಿಕೆಗಳನ್ನ ಪ್ರೋತ್ಸಾಹಿಸಬೇಕು ಅಂತ ಸಂಘದ ರಾಜ್ಯ ಉಪಾಧ್ಯಕ್ಷ ಭೀಮರಾಯ ಯೆತಿನಾಳ ಆಗ್ರಹಿಸಿದ್ದಾರೆ ಈ ವೇಳೆಯಲ್ಲಿ ಸಂಘದ ಹಿರಿಯ ಸಲಹೆಗಾರರು ಶಂಕರ್ ಕೋಡ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಚನ್ನಬಸು ಬಾಗಲವಾಡ ,ಖಜಾಂಚಿ ಖಾನ್ ಸಾಬ್ ಮೋಮೀನ್,ರಾಜ್ಯಕಾರ್ಯದರ್ಶಿ ಸುರೇಶ್ ಶಿಂಧೆ ಹಾಗು ಜಿಲ್ಲಾ ಪಧಾದಿಕಾರಿಗಳು ಹಾಜರಿದ್ರು