Google search engine
ಮನೆಬಿಸಿ ಬಿಸಿ ಸುದ್ದಿಬೀದರ ನಗರದಲ್ಲಿ ಅಖಿತ ಭಾರತ ವಿದ್ಯಾರ್ಥಿ ಒಕೂಟ ಮತ್ತು ಬಿಜೆಪಿ ಪಕ್ಷದ ಮಹಿಳಾ ಮೋರ್ಚಾ...

ಬೀದರ ನಗರದಲ್ಲಿ ಅಖಿತ ಭಾರತ ವಿದ್ಯಾರ್ಥಿ ಒಕೂಟ ಮತ್ತು ಬಿಜೆಪಿ ಪಕ್ಷದ ಮಹಿಳಾ ಮೋರ್ಚಾ ನಡಿಸಿದ ಬೃಹತ ಪ್ರತಿಭಟನೆ

.         ಬಸವಕಲ್ಯಾಣ ತಾಲೂಕಿನ ಗುಣತೀರ್ಥವಾಡಿ ಗ್ರಾಮದ ಯುವತಿಯೊಬ್ಬಳನ್ನು ಭೀಕರವಾಗಿ ಕೊಲೆಮಾಡಿ ಮುಳ್ಳು ಕಂಟಿಯಲ್ಲಿ ಶವ ಬಿಸಾಡಿ ಹೋಗಿರುವವರ ಮೇಲೆ ಕಾನೂನಿನ ಕಠಿಣ ಶಿಕ್ಷೆಗೆ ಗುರಿಂತೆ ಒತ್ತಾಯಿಸಿ ಅಖಿತ ಭಾರತ ವಿದ್ಯಾರ್ಥಿ ಒಕೂಟ ಮತ್ತು  ಬಿಜೆಪಿ ಪಕ್ಷದ ಮಹಿಳಾ ಮೋರ್ಚಾ  ಬೀದರ ನಗರದಲ್ಲಿ ನಡಿಸಿದ  ಬೃಹತ ಪ್ರತಿಭಟನೆ

ಬನವಕಲ್ಯಾಣ ತಾಲ್ಲೂಕಿನ ಗುಣತೀರ್ಥ ವಾಡಿ ಗ್ರಾಮದಲ್ಲಿ ಯುವತಿಯೊಬ್ಬಳನ್ನು ಭೀಕರವಾಗಿ ಕೊಲೆ ಮಾಡಿ ಮುಳ್ಳು ಕಂಟೆಯಲ್ಲಿ ಶವ ಬಿಸಾಡಿ ಹೋಗಿದ್ದಾರೆ ಮೂಲತಃ ಬಸವಕಲ್ಯಾಣ ತಾಲ್ಲೂಕಿನ ಗುಂಡೂರ ಗ್ರಾಮದ ಭಾಗ್ಯಶ್ರೀ (8) ಕೊಲೆಯಾದ ಯುವತಿ. ಈಕೆಯ ಪಾಲಕರು ಕಳೆದ ಕೆಲ ವರ್ಷಗಳಿಂದ ಗುಣತೀರ್ಥ ವಾಡಿ ಗ್ರಾಮದಲ್ಲಿ ಉಳಿದು ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತ ಇಲ್ಲೆ ನೆಲೆಸಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ರಾತ್ರಿ ವೇಳೆ ಈಕೆ ಮನೆಯಿಂದ ನಾಪತ್ತೆಯಾಗಿದ್ದು ಭಾನುವಾರ ಬೆಳಿಗ್ಗೆ 11ರ ಸುಮಾರಿಗೆ ಗ್ರಾಮದ ಸರ್ಕಾರಿ ಶಾಲೆ ಪಕ್ಕದ ಮುಳ್ಳಿನ ಹೋದೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ ಯುವತಿ ಶವ ಬಹುತೇಕ ವಿವಸ್ತವಾಗಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ತಲೆ ಸೇರಿದಂತೆ ದೇಹದ ಹಲವು ಭಾಗಗಳಲ್ಲಿ ಗಾಯಗಳಿದ್ದು, ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರಬಹುದು ಎನ್ನುವ ಬಗ್ಗೆ ಸಂಶಯ ವ್ಯಕ್ತವಾಗಿದೆ ಆ ಹೆಣ್ಣುಮಗುವಿನ ಹತ್ಯೆ

ಕೊಲೆಗಾರನಿಗೆ ಕಾನೂನಿನ ಯಾವುದೇ ಭಯವೂ ಇಲ್ಲದೆ ರಾಜಾರೋಷವಾಗಿ ಕೃತ್ಯ ಮಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದರೆ ನಮ್ಮ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎತ್ತು ಕುಸಿದು ಹೋಗಿದೆ ಎನ್ನುವುದು ಸ್ಪಷ್ಟವಾಗಿ ತಿಳಿಯುವಂತಾಗಿದೆ. ಈ ಘಟನೆಯಿಂದ ರಾಜ್ಯದ ಮಹಿಳೆಯರು, ವಿದ್ಯಾರ್ಥಿ ಸಮುದಾಯ ಭಯಭೀತ ಗೊಂಡಿದೆ. ರಾಜ್ಯಾಧ್ಯಂತ ಈ ರೀತಿಯ ಸಂಭಾವ್ಯ ಘಟನೆಗಳನ್ನು ತಡೆಯಲು ಪ್ರಯತ್ನಿಸಬೇಕು. ರಾಜ್ಯ ಸರ್ಕಾರ ದಿನದಿಂದ ದಿನಕ್ಕೆ ಹದಗೆಡುತ್ತಿರುವ ಕಾನೂನು ಸುವ್ಯವಸ್ಥೆಯ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿ ಕಾರ್ಯ ಪ್ರವೃತ್ತರಾಗಬೇಕು. ಸರ್ಕಾರಗಳು ಇಂತಹ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಕಾನೂನಿನ ಭಯ ಇಲ್ಲದಾಗ ಮಾತ್ರ ಇಂತಹ ಘಟನೆಗಳು ನಡೆಯಲು ಸಾಧ್ಯ ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ  ಹುರಿದುಂಬಿಸಬೇಕು  ಹಾಗೂ ಉನ್ನತ ಮಟ್ಟದ ತನಿಖೆ ಮಾಡಬೇಕು ಪೊಲೀಸರು ಕೂಡಲೇ ಅಪರಾಧಿಯನ್ನು ಉಗ್ರ ಶಿಕ್ಷೆ ಆಗುವ ಹಾಗೆ ಸೂಕ್ತ ತನಿಖೆಯನ್ನು ಕೈಗೊಂಡ ಆ ಹೆಣ್ಣುಮಗುವಿನ ಕುಂಟುಂಬಕ್ಕೆ ನ್ಯಾಯ ಒದಗಿಸುವಂತೆ ಎಬಿವಿಪಿ ಮತ್ತು ಬಿಜೆಪಿ ಪಕ್ಷದ ಮಹಿಳಾ ಮೋರ್ಚಾ ನಗರದಲ್ಲಿ ಬೃಹತ್ ಪ್ರತಿಭಟನೆ ನಡಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯ ಮಂತ್ರಿಗಳೆಗೆ ಮನವಿ ಪತ್ರ ಸಲ್ಲಿಸಲಾಯಿತು  ಈ ಪ್ರತಿಭಟನೆಯಲ್ಲಿ ಪಾಲ್ಗೊಂಡ ಬಸವಕಲ್ಯಾಣ ಶಾಸಕ ಶರಣು ಸಲಗರ ಮಾತನಾಡಿ

ಕೂಲಿಗಾಗಿ ಊರನ್ನು ಬಿಟ್ಟು ಗುಣತೀರ್ಥ ವಾಡಿ ಗ್ರಾಮದಲ್ಲಿ ಬಂದು ಕೂಲಿ ಕೆಲಸ ಮಾಡುತಿರುವ ಬಡಕುಂಟುಬದ ಹದಿನೆಂಟು ವರ್ಷದ  ಮಗಳನ್ನು ಕಳೆದು ಕೊಂಡ ಕುಟುಂಬದ ಸ್ಥತಿ ಚಿಂತಾಜನಕ ವಾಗಿದು ನಾನು ಈಗಾಗಲೇ  ನನ್ನ ವಯಕ್ತಿಕ ವಾಗಿ ಒಂದು ಲಕ್ಷ ರೂಪಾಯಿ ಸಹಾಯ ಮಾಡಿ ಸಾಂತ್ವಾನ ಹೇಳಿದೆನೆ ಹಾಗೂ ನಾನು ಕೂಡಲೆ ಮುಖ್ಯ ಮಂತ್ರಿಗಳನ್ನು ಹಾಗೂ ಗೃಹ ಸಚಿವರನ್ನು ಬೇಟಿಯಾಗಿ ಕೂಡಲೆ ನೊಂದ ಕುಟುಂಬಕ್ಕೆ ಸೂಕ್ತ  ಪರಿಹಾರ ನೀಡಿ   ನ್ಯಾಯೊದಗಿಸುವುದಾಗಿ ತಿಳಿಸಿದರು

ಬಿಜೆಪಿ ಮಹಿಳಾ ಮೊರ್ಚಾದ ಮುಖಂಡರಾದ ಶಕುಂತಲಾ ಬೆಲ್ದಾಳೆ, ಉಷಾ ಮುದ್ನಾಳೆ ಹಾಗೂ ಬೃಹತ್ ಪ್ರಮಾಣದ ವಿದ್ಯಾರ್ಥಿಗಳು ಹಾಗೂ ಮಹಿಳಾ ಕಾರ್ಯಕರ್ತರು ಉಪಸ್ಥಿತರಿದ್ದರು

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!