Google search engine
ಮನೆಬಿಸಿ ಬಿಸಿ ಸುದ್ದಿಕೆಕೆಆರ್'ಡಿಬಿ ಮಾಜಿ ಅಧ್ಯಕ್ಷರಾದ ದತ್ತಾತ್ರೆಯ ಪಾಟೀಲ್ ರೇವೂರ್ ಮೇಲೆ ಶಾಸಕ ಅಲ್ಲಮಪ್ರಭು ಪಾಟೀಲ್ ಗಂಭೀರ ಆರೋಪ

ಕೆಕೆಆರ್’ಡಿಬಿ ಮಾಜಿ ಅಧ್ಯಕ್ಷರಾದ ದತ್ತಾತ್ರೆಯ ಪಾಟೀಲ್ ರೇವೂರ್ ಮೇಲೆ ಶಾಸಕ ಅಲ್ಲಮಪ್ರಭು ಪಾಟೀಲ್ ಗಂಭೀರ ಆರೋಪ

ಕೆಕೆಆರ್’ಡಿಬಿ ಮಾಜಿ ಅಧ್ಯಕ್ಷರಾದ ದತ್ತಾತ್ರೆಯ ಪಾಟೀಲ್ ರೇವೂರ್ ಮೇಲೆ ಶಾಸಕ ಅಲ್ಲಮಪ್ರಭು ಪಾಟೀಲ್ ಗಂಭೀರ ಆರೋಪ ಮಾಡಿದ್ದು, ಕಲಬುರಗಿ ನಗರದ

ದರಿಯಾಪುರ ಲೇಔಟ್’ನಲ್ಲಿ‌ನ ಸಿಎ ಸೈಟ್ ಅನ್ನು ತಮ್ಮ ಸ್ವಹಿತಕ್ಕಾಗಿ ಬಳಸಿಕೊಂಡಿದ್ದಲ್ಲದೇ, ಕೇಂದ್ರ ಬಸ್ ನಿಲ್ದಾಣದ ಪಕ್ಕದಲ್ಲಿ ನಿರ್ಮಿಸುತ್ತಿರುವ ಆಸ್ಪತ್ರೆಯ ಕಟ್ಟಡದ ಪರ್ಮಿಷನ್ ತೆಗೆದುಕೊಳ್ಳುವ ಸಂದರ್ಭದಲ್ಲಿ ಪಾಲಿಕೆಗೆ 1 ಕೋಟಿ ರೂಪಾಯಿ ತೆರಿಗೆ ಭರಿಸದೆ ತೆರಿಗೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ

 ಕಲಬುರಗಿ ನಗರದಲ್ಲಿ ಮಾತನಾಡಿದ ಶಾಸಕರು ಕಲಬುರಗಿ ನಗರದ ದರಿಯಾಪುರ ಕೋಟನೂರಿನ ಸರ್ವೆ ನಂ.8 ರಲ್ಲಿ ದತ್ತಾತ್ರೆಯ ಪಾಟೀಲ್ ರೇವೂರ್ ಅವರು 2010 ರಲ್ಲಿ ಸಿಎ ನಿವೇಶನ ಸಂಖ್ಯೆ 11 ಅನ್ನು ಸಮುದಾಯ ಭವನಕ್ಕಾಗಿ ನಿವೇಶನ ಹಂಚಿಕೆ ಮಾಡಿಕೊಂಡು ಅದರಲ್ಲಿ ಕಟ್ಟಡ ನಿರ್ಮಿಸಲು ಸರಕಾರದ ಅನುದಾನ ಬಳಕೆ ಮಾಡಿಕೊಂಡು ಸಮುದಾಯ ಭವನದ ಉಪಯೋಗವನ್ನು ಜನರ ಬಳಕೆಗಾಗಿ ನೀಡದೇ, ಅವರೆ ಅಧ್ಯಕ್ಷರಾಗಿರುವ ಗುಲಬರ್ಗಾ ಡಿಸ್ಟ್ರಿಕ್ಟ್ ಕೆಮಿಸ್ಟ್ರಿ ಡ್ರಗ್ಗಿಸ್ಟ್ ಅಸೋಸಿಯೇಷನ್ ಕಟ್ಟಡದಲ್ಲಿ ಎದುರುಗಡೆ ವಾಣಿಜ್ಯ ಮಳಿಗೆ ಮಾಡಿ ಬಾಡಿಗೆ ಪಡೆಯುತ್ತಿರುವುದಲ್ಲದೇ, ಸಮುದಾಯ ಭವನಕ್ಕೂ ಬಾಡಿಗೆ ಕೊಟ್ಟು ಆದಾಯ ಪಡೆಯುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇನ್ನೂ ಇದು ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರವು ವಿಧಿಸಿದ ಷರತ್ತುಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಹೇಳಿರುವ ಅವರು ಕೇಂದ್ರ ಬಸ್ ನಿಲ್ದಾಣದ ಪಕ್ಕದಲ್ಲಿ ಸುಮಾರು 30 ಸಾವಿರ ಚದರ ಅಡಿ ನಿವೇಶನದಲ್ಲಿ ಆಸ್ಪತ್ರೆಯ ಕಟ್ಟಡ ನಿರ್ಮಿಸುತ್ತಿರುವ ದತ್ತಾತ್ರೆಯ ಪಾಟೀಲ್ ಅದಕ್ಕೆ ಕಟ್ಟಡ ಅನುಮತಿ ಪಡೆಯುವಾಗ ಅಧಿಕಾರಿಗಳ ಮೇಲೆ ಒತ್ತಡ ಹಾಕಿ 1 ಕೋಟಿ ರೂಪಾಯಿ ತೆರಿಗೆ ಭರಿಸದೇ ಅದರ ಮೊತ್ತ ಕಡಿಮೆ ಮಾಡಿಸಿ ತೆರಿಗೆ ವಂಚನೆ ಮಾಡಿದ್ದಲ್ಲದೇ ಕಟ್ಟಡದ ಅನುಮತಿ ಮುಗಿದಿದ್ದರೂ ಕಟ್ಟಡ ಕಟ್ಟುವುದನ್ನು ಮುಂದುವರಿಸಿದ್ದಾರೆ. ಹಾಗೆಯೇ ಅವರ ಮನೆಯ ಮುಂದೆ ಗಾರ್ಡನ್ ಇದ್ದೂ ಅದರಲ್ಲಿ ಪರಸಿ ಹಾಕಿ ತಮ್ಮ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಾರೆ ಸಾರ್ವಜನಿಕರ ಉದ್ಯಾನದಲ್ಲಿ ಪಾರ್ಕಿಂಗ್ ಮಾಡಿ ನಮಗೆ ಬುದ್ದಿ ಹೇಳಲು ಬರುತ್ತಾರೆ, ಹಗೆತ‌ನದ ರಾಜಕೀಯ ಮಾಡುವಂತಹದ್ದು ನಮ್ಮ ಸ್ವಭಾವದಲ್ಲಿ ಇಲ್ಲ. ಆದರೆ ನಮ್ಮ ಬಗ್ಗೆ ಆರೋಪ ಮಾಡಿರುವ ಮಾಜಿ ಶಾಸಕರು ನಮ್ಮ ತಪ್ಪಿಗೆ ಕಡಿವಾಣ ಹಾಕಲಿ, ನಾವು ಅವರ ತಪ್ಪುಗಳಿಗೆ ಕಡಿವಾಣ ಹಾಕುವ ಕೆಲಸ ಮಾಡುತ್ತೇವೆ ಎಂದಿದ್ದಾರೆ

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!