ಅದು ಸೂಫಿ ಸಂತರು ನೆಲೆಸಿರುವ ಊರು, ಆ ಊರಲ್ಲಿ ವಾರದಲ್ಲಿ ನಾಲ್ಕು ದಿನ ನಡೆಯುವ ಜಾತ್ರೆಗೆ ಸಾವಿರಾರು ಭಕ್ತರು ದರ್ಶನಕ್ಕಾಗಿ ಬರ್ತಾರೆ, ಆದರೆ ಅಲ್ಲಿ ಅವರು ನೆಲೆಸೋದಕ್ಕೊಂದು ಪ್ರವಾಸಿ ಮಂದಿರ ಕೂಡ ಇಲ್ಲ, ಅದಿರಲಿ ಶೌಚಾಲಯ ಅದುನೂ ಇಲ್ಲ, ಇನ್ನೂ ಹೆಚ್ಚು ಕಡಿಮೆ ಆಗಿ ಹುಷಾರು ತಪ್ಪಿದ್ರೆ ಒಂದು ಆಸ್ಪತ್ರೆ ಕೂಡ ಇಲ್ಲ, ಆದರೆ ಇಲ್ಲಿನ ಶಾಸಕರಾಗಲಿ, ಉಸ್ತುವಾರಿ ಮಂತ್ರಿಗಳಾಗಲಿ ಈ ಊರಿನ ಕಡೆ ತಲೆ ಕೂಡ ಹಾಕಿಲ್ಲ! ಅದು ಯಾವ ಊರು ಅಂತೀರಾ? ನೀವೆ ನೋಡಿ
ಹೌದು ಅದು ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಸುಕ್ಷೇತ್ರ ನೀಲೂರ ಗ್ರಾಮ. ಈ ಗ್ರಾಮದಲ್ಲಿ ವಾರದಲ್ಲಿ ನಾಲ್ಕು ದಿನ ನಡೆಯುವ ಹಜರತ್ ಸೈಯದ್ ಶಾ ಇಸ್ಮಾಯಿಲ್ ಖಾದ್ರಿ ಅವರ ದರ್ಗಾಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನ ಬರ್ತಾರೆ, ಆದರೆ ಅವರು ಉಳಿದುಕೊಳ್ಳುವುದಕ್ಕೆ ಆ ಗ್ರಾಮದಲ್ಲಿ ಒಂದು ಪ್ರವಾಸಿ ಮಂದಿರ ಕೂಡ ಇಲ್ಲ, ಅಟ್ಲೀಸ್ಟ್ ಶೌಚಾಲಯ ಅಂದ್ರೆ ಅದು ಕೂಡ ನಿರ್ಮಾಣ ಮಾಡಿಲ್ಲ. ಇನ್ನೂ ಈ ಗ್ರಾಮಕ್ಕೆ ದೂರದ ಮಹಾರಾಷ್ಟ್ರ ರಾಜ್ಯದ ಪುಣೆ, ಮುಂಬಯಿ ಸೇರಿದಂತೆ ಹಲವು ಊರುಗಳಿಂದ ಬರುವ ಭಕ್ತಾದಿಗಳು ಅಚಾನಾಕ್ ಆಗಿ ಹುಷಾರು ತಪ್ಪಿದ್ರೆ ಅವರಿಗೆ ಹುಷಾರು ಸರಿಪಡಿಸಿಕೊಳ್ಳುವುದಕ್ಕೆ ಒಂದು ಆಸ್ಪತ್ರೆಯು ಕೂಡ ನಿರ್ಮಾಣ ಮಾಡಿಲ್ಲ. ನೂರಾರು ವರ್ಷಗಳ ಇತಿಹಾಸವುಳ್ಳ ಇಲ್ಲಿನ ದರ್ಗಾಕ್ಕೆ ಇಲ್ಲಿನ ಸ್ಥಳಿಯ ಶಾಸಕರಾದ ಎಮ್.ವೈ. ಪಾಟೀಲ್ ಅವರಾಗಲಿ, ಇಲ್ಲಿನ ಉಸ್ತುವಾರಿ ಮಂತ್ರಿಗಳಾಗಲಿ ಒಂದು ಬಾರಿಯೂ ಭೇಟಿ ಕೊಟ್ಟಿಲ್ಲ ಎನ್ನುವುದು ಇಲ್ಲಿನ ಸ್ಥಳೀಯರ ಮಾತಾಗಿದ್ದೂ, ಈ ಊರು ಅಫಜಲಪುರ ತಾಲೂಕಿನ ಗುಡೂರು ಗ್ರಾಮ ಪಂಚಾಯತಿಗೆ ಬರುವುದರಿಂದ ಈ ಗ್ರಾಮದಲ್ಲಿ ಸುಮಾರು 7 ಸಾವಿರಕ್ಕೂ ಅಧಿಕ ಜನಸಂಖ್ಯೆಯಿದ್ದೂ, ಇಲ್ಲಿನ ಗ್ರಾಮದವರೇ ಆದ 8 ಜನ ಗ್ರಾಮ ಪಂಚಾಯತಿ ಚುನಾಯಿತ ಸದಸ್ಯರಿದ್ದರು ಈ ಊರಿಗೆ ರಸ್ತೆ ಸೌಕರ್ಯವಾಗಲಿ, ಚರಂಡಿ ಸೌಕರ್ಯವಾಗಲಿ, ಕುಡಿಯುವ ನೀರಿನ ಸೌಕರ್ಯವಾಗಲಿ ಮಾಡಿಸಲು ಯಾರೂ ಮುಂದೆ ಬಂದಿಲ್ಲ ಎಂಬ ಮಾತು ಕೇಳಿ ಬರುತ್ತಿದ್ದೂ, ಈ ಗ್ರಾಮಕ್ಕೆ ಆದಷ್ಟು ಬೇಗ ಮೂಲ ಸೌಕರ್ಯಗಳನ್ನು ಒದಗಿಸಬೇಕೆಂದು ಭಾರತ ಕಮ್ಯೂನಿಸ್ಟ್ ಪಕ್ಷದ ಎಂ.ಬಿ. ಸಜ್ಜನ್ ಸೇರಿದಂತೆ, ಗ್ರಾಮದ ಮಹಾದೇವ ಸಿಂಗೆ, ಕಲ್ಯಾಣಿ ಸಿಂಗೆ, ಅಲ್ಲಾವುದ್ದಿನ್, ಪ್ರಕಾಶ್, ಖಾಜಾಸಾಬ್ ಲಡಾಫ್ ಸೇರಿದಂತೆ ಹಲವರು ಒತ್ತಾಯಿಸಿದ್ದಾರೆ