ಕಲಬುರಗಿ ಜಿಲ್ಲೆಯ ಫಿರೋಜಾಬಾದ್ ಗ್ರಾಮ ಪಂಚಾಯತಿ ಪ್ರಕರಣಕ್ಕೆ ಮತ್ತೆ ತಿರುವು ಸಿಕ್ಕಿದ್ದೂ ಗ್ರಾಮ ಪಂಚಾಯತಿ ಅಧ್ಯಕ್ಷ ರಾಜು ಹಾಲು ಕಲಬುರಗಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಕಲಬುರಗಿ ಜಿಲ್ಲೆಯ ಕಲಬುರಗಿ ತಾಲ್ಲೂಕಿನ ಫಿರೋಜಾಬಾದ್ ಗ್ರಾಮ ಪಂಚಾಯತಿ ಪ್ರಕರಣದ ಬಗ್ಗೆ ಗ್ರಾಮ ಪಂಚಾಯತಿ ಅಧ್ಯಕ್ಷ ರಾಜು ಹಾಲು ಸ್ಪಷ್ಟನೆ ನೀಡಿದ್ದೂ, ನಮ್ಮ ಪಿರಿಯಡ್’ನಲ್ಲಿ ಯಾವುದೇ ರೀತಿಯ ಅಕ್ರಮ ನಡೆದಿಲ್ಲ. ನಮ್ಮ ಮೇಲೆ ಮತ್ತು ಪಂಚಾಯತಿಯ ಅಭಿವೃದ್ಧಿ ಅಧಿಕಾರಿಯಾದ ವಿದ್ಯಾವತಿ ಅವರ ಮೇಲೆ ಇಲ್ಲಿನ ಗ್ರಾಮ ಪಂಚಾಯತಿ ಸದಸ್ಯರಾದ ಲತೀಫ್ ಜಹಾಗಿರ್ದಾರ್ ಅವರು ಇಲ್ಲ ಸಲ್ಲದ ಸುಳ್ಳು ಆರೋಪ ಮಾಡುತ್ತಿದ್ದಾರೆ. 15 ನೇ ಹಣಕಾಸಿನಲ್ಲಿ ಯಾವುದೇ ರೀತಿಯ ಅಕ್ರಮ ನಡೆದಿಲ್ಲ. ಆದರೆ ಲತೀಫ್ ಅವರು ಇದರ ಬಗ್ಗೆ ಬಾರಿ ಬಾರಿ ಸುದ್ದಿಗೋಷ್ಟಿ ಮಾಡಿ ಸಮಸ್ಯೆಯನ್ನ ಬಗೆಹರಿಸುವುದನ್ನು ಬಿಟ್ಟು ದೊಡ್ಡದು ಮಾಡುತ್ತಿದ್ದಾರೆ. ಅವರು ಬೇಕಿದ್ದರೆ ನೇರ ಚರ್ಚೆಗೆ ಬರಲಿ ಅದಕ್ಕೆ ಸ್ಪಷ್ಟ ಉತ್ತರ ನೀಡುತ್ತೇವೆ ಎಂದಿದ್ದಾರೆ