ಪ್ರತಿವರ್ಷದಂತೆ ಈ ವರ್ಷವೂ ಕ್ಷೇತ್ರಾಧಿಪತಿ ಅಲ್ಲಮಪ್ರಭುದೇವರ ಜಾತ್ರಾಮಹೋತ್ಸವವು ಸೋಮವಾರದಂದು ಸಂಭ್ರಮದಿಂದ ಅದ್ದೂರಿಯಾಗಿ ಜರುಗಿತು.
ಜಾತ್ರೆ ನಿಮಿತ್ಯ ಅಲ್ಲಮಪ್ರಭು ದೇವರಿಗೆ ವಿಶೇಷ ಪೂಜೆ, ಆರುತಿ, ನಗಾರಿ, ಧೂಪ ಸೇವೆಗಳು ಅರ್ಚಕರಿಂದ ಸಾಂಪ್ರದಾಯಿಕವಾಗಿ ನಡೆದವು. ಸಂಪ್ರದಾಯದಂತೆ ನಾಡಗೌಡರ ಮನೆಯಿಂದ ಆರುತಿ, ನಂದಿಕೋಲು ಮೆರವಣಿಗೆಯ ಮೂಲಕ ಆಗಮಿಸಿದ ನಂತರ ಪ್ರಭುವಿಗೆ ವಿಶೇಷ ಪೂಜಾದಿಗಳು ಮಧ್ಯಾಹ್ನದ ಸಮಯದಲ್ಲಿ ನಡೆದವು.