Google search engine
ಮನೆUncategorizedಜೇವರ್ಗಿ ಬಾಲಕಿಯರ ಮೊರಾರ್ಜಿ ದೇಸಾಯಿ ವಸತಿ ನಿಲಯದಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ

ಜೇವರ್ಗಿ ಬಾಲಕಿಯರ ಮೊರಾರ್ಜಿ ದೇಸಾಯಿ ವಸತಿ ನಿಲಯದಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ

ಜೇವರ್ಗಿ ಬಾಲಕಿಯರ ಮೊರಾರ್ಜಿ ದೇಸಾಯಿ ವಸತಿ ನಿಲಯದಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಕೊಟ್ಟ ಪ್ರಭು ಮಾಡಗಿ ಎಂಬ ಶಿಕ್ಷಕನಿಗೆ ಹಾಗೂ ಇವರಿಗೆ ರಕ್ಷಣೆ ಕೊಟ್ಟಿರುವ ಪ್ರಿನ್ಸಿಪಾಲರಾದ ಶಿವಪುತ್ರಪ್ಪಾ ಇವರಿಬ್ಬರಿಗೂ ಪೋಸ್ಕೋ ಕಾಯ್ದೆಯಡಿಯಲ್ಲಿ ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು

ಕಲಬುರಗಿ ನಗರದ ಜಿಲ್ಲಾಧಿಕಾರಿಗಳ ಕಛೇರಿ ಎದುರಿಗೆ ಪ್ರತಿಭಟನೆ ನಡೆಸಿದ ಪ್ರತಿಭನಾಕಾರರು ಜೇವರ್ಗಿ ಪಟ್ಟಣದಲ್ಲಿರುವ ಬಾಲಕಿಯರ ಮೊರಾರ್ಜಿ ದೇಸಾಯಿ ವಸತಿ ನಿಲಯದಲ್ಲಿ ದೈಹಿಕ ಶಿಕ್ಷಕನಾದ ಪ್ರಭು ಮಾಡಗಿ ಎಂಬಾತನು ವಸತಿ ಶಾಲೆಯ ವಿದ್ಯಾರ್ಥಿನಿಯರಿಗೆ ಹಲವಾರು ದಿನಗಳಿಂದ ಲೈಂಗಿಕ ಕಿರುಕುಳ ಕೊಡುತ್ತಿರುವುದರಿಂದ ಬೇಸತ್ತ ವಿದ್ಯಾರ್ಥಿನಿಯರು ಅಲ್ಲಿರುವ ಮಹಿಳಾ ಶಿಕ್ಷಕಿಯರಿಗೆ ಹೇಳಿ ಅಲ್ಲಿನ ಪ್ರಿನ್ಸಿಪಾಲರಾದ ಶಿವಪುತ್ರಪ್ಪನವರಿಗೆ ದೂರು ಸಲ್ಲಿಸಿದ್ರೂ ಯಾವುದೇ ಕ್ರಮ ಜರುಗಿಸದೇ ಆ ಪ್ರಕರಣಕ್ಕೆ ಕುಮ್ಮಕ್ಕು ನೀಡಿದ್ದಲ್ಲದೇ, ಪ್ರಿನ್ಸಿಪಾಲರು ಕೂಡ ತಮ್ಮ ಕ್ವಾಟರ್ಸಿಗೆ ವಿದ್ಯಾರ್ಥಿನಿಯರನ್ನು ಕರೆದುಕೊಂಡು ಹೋಗಿ ಕಸ ಗುಡಿಸಲು, ತಟ್ಟೆಗಳನ್ನು ತೊಳೆಯಲು ರಾಜಾರೋಷವಾಗಿ ಹಚ್ಚುತ್ತಾರೆ  ಹಾಗಾಗಿ ಪೋಸ್ಕೋ ಕಾಯ್ದೆಯಡಿಯಲ್ಲಿ ಕಠಿಣ ಶಿಕ್ಷೆಗೆ ಒಳಪಡಿಸಿ ಶಿಕ್ಷೆ ಕೊಡಿಸಬೇಕೆಂದು ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರ ಗುತ್ತಿಗೆ ನೌಕರರ ಸಂಘ ಜಿಲ್ಲಾ ಸಮಿತಿಯಿಂದ ಒತ್ತಾಯಿಸಲಾಯಿತು.

ಪ್ರತಿಭಟನೆಯಲ್ಲಿ ರಾಜ್ಯಾಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ, ಕಾರ್ಯದರ್ಶಿ ಕಾಶಿನಾಥ ಬಂಡಿ, ಉಪಾದ್ಯಕ್ಷ ಮೇಘರಾಜ ಕಠಾರೆ, ಮಲ್ಲಮ್ಮ ಕೋಡ್ಲಿ, ಪರಶುರಾಮ ಹಡಗಲಿ, ನಾಗರತ್ನ ಮದನಕರ್ ಸೇರಿದಂತೆ ಹಲವರು ಭಾಗವಹಿಸಿದ್ದರು

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!