ಗೃಹ ಲಕ್ಷ್ಮಿ ಹಣದಿಂದ ಹೋಳಿಗೆ ಮಾಡಿ ಊರಿಗೆ ಊಟ ಹಾಕಿದ ಅಜ್ಜಿಯ ವಿಚಾರ
ಹೆಬ್ಬಾಳ್ಕರ ಹಾಡಿ ಹೊಗಳಿದ ಅಜ್ಜಿ ಅಕ್ಕಾತಾಯಿ ಲಂಗೋಟಿ
ಗೃಹ ಲಕ್ಷ್ಮಿ ಹಣ ಬಾರದ ಹಿನ್ನಲೆ ಗ್ರಾಮದ ಲಕ್ಷ್ಮಿ ದೇವರಿಗೆ ಹರಕೆ ಹೊತ್ತಿದ್ದೆ
ಅದೆ ಪ್ರಕಾರ ಹಣ ಬಂದ ತಕ್ಷಣ ಗ್ರಾಮಸ್ಥರು ಸೇರಿಕೊಂಡು ಹೋಳಿಗೆ ಊಟ ಮಾಡಿದ್ವಿ
ನಾನು ನನ್ನ ಜೋತೆಗೆ ಇದ್ದ ಗೆಳತಿಯರು ಸಹ ಸಹಾಯ ಮಾಡಿದ್ದಾರೆ
ಎಲ್ಲರೂ ಸ್ವಲ್ಪ ಸ್ವಲ್ಪ ಹಣ ಹಾಕಿ ಹೋಳಿಗೆ ಊಟ ಮಾಡಿದ್ದೇವೆ
ನಾವು ಮಾಡಿದ ಕಾರ್ಯಕ್ಕೆ ಸಚಿವೆ ಹೆಬ್ಬಾಳ್ಕರ ಸೀರೆ ಕೊಟ್ಟು ಸತ್ಕಾರ ಮಾಡಿದ್ದಾರೆ
ಅವರನ್ನ ಒಮ್ಮೆ ಭೇಟಿ ಮಾಡುವ ಆಸೆಯಾಗಿದೆ
ನಮ್ಮ ಜೀವನಕ್ಕೆ ಆಸರೆಯಾಗಿರುವ ಸಿದ್ದರಾಮಯ್ಯ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ ಅವರು ಒಳ್ಳೆಯಯಾದಗಲಿ
ಗ್ರಾಮದ ಲಕ್ಷ್ಮಿ ದೇವರ ಬಳಿ ಇಬ್ಬರಿಗೊಸ್ಕರ ಬೇಡಿಕೊಂಡಿದ್ದೇನೆ ಎಂದ ಅಕ್ಕಾತಾಯಿ
ಬೆಳಗಾವಿ ಜಿಲ್ಲೆಯ ಸುಟ್ಟಟ್ಟಿ ಗ್ರಾಮದಲ್ಲಿ ಅಕ್ಕಾತಾಯಿ ಲಂಗೋಟಿ ಹೇಳಿಕೆ
ಎರಡು ದಿನಗಳ ಹಿಂದೆ ಅಕ್ಕಾತಾಯಿ ಸೇರಿದಂತೆ ಗ್ರಾಮದ ಮಹಿಳೆಯರು ಹೋಳಿಗೆ ಊಟ ಮಾಡಿಸಿದ್ದರು
ಅಜ್ಜಿಯ ಕಾರ್ಯಕ್ಕೆ ಸ್ವತಃ ಹೆಬ್ಬಾಳ್ಕರ ಕರೆ ಪ್ರಶಂಸೆ ವ್ಯಕ್ತ ಪಡಿಸಿದ್ದರು





