Google search engine
ಮನೆUncategorizedಠಾಣೆವರೆಗೆ ರಸ್ತೆಯಲ್ಲಿ ಪಾದಚಾರಿಗಳ ಪರದಾಟ, ಅಕ್ರಮ ಡಬ್ಬಿ ಅಂಗಡಿಗಳ ಅಟ್ಟಹಾಸ ಅಧಿಕಾರಿಗಳ ದಿವ್ಯ ನಿರ್ಲಕ್ಷ

ಠಾಣೆವರೆಗೆ ರಸ್ತೆಯಲ್ಲಿ ಪಾದಚಾರಿಗಳ ಪರದಾಟ, ಅಕ್ರಮ ಡಬ್ಬಿ ಅಂಗಡಿಗಳ ಅಟ್ಟಹಾಸ ಅಧಿಕಾರಿಗಳ ದಿವ್ಯ ನಿರ್ಲಕ್ಷ

ಠಾಣೆವರೆಗೆ ರಸ್ತೆಯಲ್ಲಿ ಪಾದಚಾರಿಗಳ ಪರದಾಟ, ಅಕ್ರಮ ಡಬ್ಬಿ ಅಂಗಡಿಗಳ ಅಟ್ಟಹಾಸ ಅಧಿಕಾರಿಗಳ ದಿವ್ಯ ನಿರ್ಲಕ್ಷö್ಯವಹಿಸಿದ್ದು, ಗ್ರಾಮ ಪಂಚಾಯತ್ ಕಚೇರಿಗೆ ಜಾಲಿ ಮುಳ್ಳು ಕಂಟಿ ಹಚ್ಚಿ ಪ್ರತಿಭಟನೆ ನಡೆಸಲಾಗುವುದು ಎಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ ಮುದ್ನಾಳ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಅಗಸಿಯಿಂದ ಗ್ರಾಮ ಪಂಚಾಯತಿ ವರೆಗೆ ಸಂಚಾರ ಮಾಡಿ ಭೇಟಿ ನೀಡಿ ಹೇಳಿಕೆ ನೀಡಿರುವ ಅವರು ವಡಗೇರಾ ತಾಲೂಕು ಆಗಿ ೬ ವರ್ಷ ಗತಿಸಿದರೂ ಯಾವುದೇ ಒಂದು ಅಭಿವೃದ್ಧಿ ಕಂಡಿಲ್ಲ, ಆದರೆ ತಾಲೂಕು ರಚನೆ ಮುಂಚೆ ಯಾವುದೇ ಅಕ್ರಮ ಡಬ್ಬಿಗಳು ರಸ್ತೆ ಮೇಲೆ ಇರಲಿಲ್ಲ, ಆಗ ಸುಗಮ ಸಂಚಾರವಿತ್ತು, ತಾಲೂಕು ಘೋಷಣೆ ಆಗುತ್ತಿದ್ದಂತೆ ಅಕ್ರಮ ಡಬ್ಬಿಗಳು ತಲೆಎತ್ತಿ ನಿಂತಿದ್ದು, ಆ ಸ್ಥಳಗಳು ಬಹುತೇಕ ಗ್ರಾಮ ಪಂಚಾಯತಿಗೆ ಸೇರಿದ್ದರೂ ಅಕ್ರಮ ಡಬ್ಬಿಗಳ ಬಾಡಿಗೆ ಮಾತ್ರ ಖಾಸಗಿ ವ್ಯಕ್ತಗಳ ಪಾಲಾಗುತ್ತಿದೆ, ಈ ಅಕ್ರಮ ಡಬ್ಬಿಗಳಿಗೆ ಜೆಸ್ಕಾಂ ಇಲಾಖೆ ಅಧಿಕಾರಿಗಳು ಯಾವ ಆಧಾರದ ಮೇಲೆ ವಿದ್ಯುತ್ ಸಂಪರ್ಕ ನೀಡಿದ್ದಾರೆ ಎಂದು ಆಕ್ರೋಶವ್ಯಕ್ತಪಡಿಸಿದರು.

ತಾಲೂಕು ಆಗಿ ೬ ವರ್ಷ ಗತಿಸಿದರೂ ಕೂಡ ಆಟೋ ಮತ್ತು ಟ್ಯಾಕ್ರಿ ನಿಲ್ದಾಣ, ಮಹಿಳಾ ಮತ್ತು ಪುರುಷ ಶೌಚಾಲಯ, ತರಕಾರಿ ಮಾರುಕಟ್ಟೆ, ರಸ್ತೆಯ ಡಿವೈಡರ್‌ನಲ್ಲಿ ಬೀದಿ ದೀಪಗಳಿಲ್ಲದೇ ಸಾರ್ವಜನಿಕರು ಮತ್ತು ವಾಹನ ಸವಾರರು ಕತ್ತಲಲ್ಲಿ ಸಂಚಾರ ಮಾಡಬೇಕಿದೆ.  ಇದರ ಜೊತೆಗೆ ಇನ್ನೀತರ ಮೂಲಸೌಲಭ್ಯಗಳು ಇಲ್ಲ, ಚರಂಡಿ ನಿರ್ಮಿಸದಿರುವುದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಜನ ಜಾನುವಾರುಗಳು ತತ್ತರಿಸುವ ವಾತಾವರಣ ನಿರ್ಮಾಣವಾಗಿದೆ ಎಂದು ಅಸಮಾಧಾನವ್ಯಕ್ತಪಡಿಸಿದರು.

ರಸ್ತೆಯ ಎಡಬಲ ಬದಿಗಳಲ್ಲಿ ಅಕ್ರಮ ಡಬ್ಬಿಗಳು ತಲೆ ಎತ್ತಿವೆ. ಇವಕ್ಕೆ ಯಾರು ಪರವಾನಿಗೆ ನೀಡಿದರು? ಎಂಬುದನ್ನು ಜಿಲ್ಲಾಡಳಿತ ಹಾಗೂ ಗ್ರಾಮ ಪಂಚಾಯತಿ ತುರ್ತಾಗಿ ಎರಡ್ಮೂರು ದಿನಗಳಲ್ಲಿ ಉತ್ತರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಈ ಕುರಿತು ಜೆಸ್ಕಾಂ ಮತ್ತು ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ದೂರವಾಣಿ ಮುಖಾಂತರ ಗಮನಕ್ಕೆ ತಂದ ಮೇಲೆಯೂ ವಿದ್ಯುತ್ ಸಂಪರ್ಕ ಹಾಗೂ ಡಬ್ಬಿಗಳ ಇಟ್ಟುಕೊಳ್ಳಲು ಅನುಮತಿ ಕೊಟ್ಟಿದ್ದಾರೆ. ಇವುಗಳು ಹಾಕಿದ್ದರಿಂದ ಕಚೇರಿಗಳ ನಾಮಫಲಕಗಳು ಸಹ ಕಾಣದಂತೆ ಡಬ್ಬಂಗಡಿಗಳು ತಲೆ ಎತ್ತಿವೆ.

ಇದಲ್ಲದೇ ಈ ಡಬ್ಬಿಗಳಲ್ಲಿರುವವರು ಕಸ ಕಡ್ಡಿಯನ್ನು ಗುಡಿಸಿ ತಮ್ಮ ಕೆಳಗೆ ಇರುವ ಚರಂಡಿಗೆ ತುಂಬುತ್ತಿದ್ದಾರೆ. ಮೊದಲೇ ಪಂಚಾಯಿತಿಯಲ್ಲಿ ಪೌರಕಾರ್ಮಿಕರ ಕೊರತೆ ಇದೆ. ಡಬ್ಬಿಗಳನ್ನು ಇಟ್ಟುಕೊಂಡಿದ್ದರಿAದ ಚರಂಡಿ ಬ್ಲಾಕ್ ಆಗಿವೆ. ಇದೇ ರಸ್ತೆಯಲ್ಲಿ ಅಧಿಕಾರಿಗಳು ಸಂಚರಿಸುತ್ತಿದ್ದರೂ ಕಣ್ಣಿಗೆ ಕಾಣುತ್ತಿಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.

ತುರ್ತಾಗಿ ನಾಯಿಕೊಡೆಗಳಂತೆ ತೆಲೆ ಎತ್ತಿರುವ ಡಬ್ಬಿಗಳನ್ನು ತೆರವು ಮಾಡಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ತಡೆಯಬೇಕು, ಮುಗ್ದ ಜನರಿಗೆ ಆಗುತ್ತಿರುವ ತೊಂದರೆಯನ್ನು ತಡೆಯಬೇಕೆಂದು ಆಗ್ರಹಿಸಿದ್ದಾರೆ.

ವಡಗೇರಾ ಪಟ್ಟಣಕ್ಕೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ದೀಢೀರ್ ಭೇಟಿ ಸ್ಥಳ ಪರಿಶೀಲನೆ ಮಾಡಿ ಅಗತ್ಯ ಕ್ರಮಕೈಗೊಂಡು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಇಲ್ಲವಾದಲ್ಲಿ ಗ್ರಾಮ ಪಂಚಾಯತಿ ಕಚೇರಿಗೆ ಜಾಲಿ ಕಂಠಿ ಮುಳ್ಳುಗಳನ್ನು ಬಡಿದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!