Home Uncategorized ಮೀರಿಯಾನ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ದೇವರಾಜ್ ಅರಸು ಹಾಗು ನಾರಾಯಣ ಗುರುಗಳ ಜಯಂತಿ ಕಡೆಗಣನೆ

ಮೀರಿಯಾನ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ದೇವರಾಜ್ ಅರಸು ಹಾಗು ನಾರಾಯಣ ಗುರುಗಳ ಜಯಂತಿ ಕಡೆಗಣನೆ

0

ಮಿರಿಯಾಣ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರಕಾರಿ ಶಾಲೆಗಳಲ್ಲಿ ಮತ್ತು ಪುಸ್ತಕಾಲಯಗಳಲ್ಲಿ , ಕಿಷ್ಟಪುರದ ಶಾಲೆ ಮತ್ತು ಅಂಗನವಾಡಿಗಳಲ್ಲಿ ಮಾಜಿ ಮುಖ್ಯ ಮಂತ್ರಿಗಳು ಡಿ ದೇವರಾಜ ಅರಸು, ಧರ್ಮಗುರು ಶ್ರೀ ನಾರಾಯಣ ಗುರುಗಳ ಜಯಂತಿ ಮಾಡದೇ ಸಮಾಜಕ್ಕೆ ಕಡೆಗಣಿಸಲಾಗಿದೆ ಎಂದು ಆರ್ಯ ಈಡಿಗ ಸಮಾಜದ ಮುಖಂಡ ನರೇಶ್ ಗೌಡ ಹಾಗೂ ಗ್ರಾಂ ಪಂ ಸದಸ್ಯರು ಇಮ್ರಾನ್ ಖಾನ್ ಮಿರಿಯಾಣ ಅಗ್ರಹಿಸಿದ್ದಾರೆ.

ತಹಸೀಲ್ದಾರ್ ಸಭಾಂಗಣದಲ್ಲಿ ಕರೆಯಲಾಗಿದ್ದ ಪೂರ್ವ ಭಾವಿ ಸಭೆಯಲ್ಲಿ ತಾಲೂಕ ದಂಡಧಿಕಾರಿಗಳು ತಾಲೂಕ ಮಟ್ಟದ ಎಲ್ಲಾ ಅಧಿಕಾರಿಗಳಿಗೆ (ಶಾಲೆ, ಪಂಚಾಯತ್, ಅಂಗವಾಡಿಗಳಲ್ಲಿ, ಪ್ರಾಥಮಿಕ ಅರೋಗ್ಯ ಕೇಂದ್ರಗಳಲ್ಲಿ ಇನ್ನಿತರ ಇಲಾಖೆಗಳಲ್ಲಿ ) ಬೆಳಿಗ್ಗೆ ಕೇಂದ್ರ ಸ್ಥಾನಗಳಲ್ಲಿ ದೇವರಾಜ ಅರಸು ಹಾಗೂ ನಾರಾಯಣ ಗುರುಗಳ ಪೂಜೆ ಮಾಡುವುದರ ಮೂಲಕ ಪಟ್ಟಣದ ದೇವರಾಜ ಅರಸು ಭವನಕ್ಕೆ ಬರಬೇಕು ಇಲ್ಲವಾದಲ್ಲಿ ಕ್ರಮ ಕೈಗೊಳ್ಳಲಾಗುವು ಎಂದು ಅಧಿಕಾರಿಗಳಿಗೆ ಖಡಕ್ ಆಗಿ ತಿಳಿಸಿದ್ದರು.

ದಂಡಧಿಕಾರಿಗಳ ಮಾತಿಗೂ ಕ್ಯಾರೇ ಎನ್ನದ ಅಧಿಕಾರಿಗಳು ಹೂವಿನತೋಟ ಶಾಲೆಯಲ್ಲಿ ಇದಕ್ಕೂ ಮೀರಿ ಪೂಜೆಗೆ  ಸ್ಟಾತಂತ್ರ ದೀನೋತ್ಸವಕ್ಕೆ ಬಳಸಿದಂತಹ ಹೂವಿನ ಹಾರವನ್ನು ಗುರುಗಳ ಪೂಜೆಗೆ ಬಳಸಿದ್ದಾರೆ ಹಾಗೂ ಯಾವುದೇ ರೀತಿಯ ಪೂಜಾ ಸಾಮಗ್ರಿಗಳನ್ನು ಬಳಸದೆ ಕಾಟಾಚಾರಕ್ಕೆ ಪೋಟೋ ಇಟ್ಟು ಪೂಜಾ ಮಾಡಲಾಗಿದೆ ಎಂದರು. ಶಿಕ್ಷಕರಿಗೆ ಇದರ ಬಗ್ಗೆ ಮಾಹಿತಿ ಕೇಳಿದ್ರೆ ನಮಗೆ ಇನ್ನು ಮಾಹಿತಿ ಬಂದಿಲ್ಲ ಎನ್ನುವ ಮಾತುಗಳನ್ನು ಅಡ್ತ ಇದ್ದಾರೆ,ಸಂಬಂಧಪಟ್ಟ ಅಧಿಕಾರಿಗಳಾದ BEO, CDPO ಅವರಿಗೆ ಇದರ ಬಗ್ಗೆ ಮಾಹಿತಿ ಕೇಳಿದರೆ ಎಲ್ಲಾ ಅಂಗನವಾಡಿ ಮತ್ತು ಶಾಲೆಗಳಿಗೆ ಮಾಹಿತಿ ನೀಡಲಾಗಿದೆ ಎಂದು ಕಾಟಾಚಾರಕ್ಕೆ ಹೇಳಿದ್ದಾರೆ ಇದರ ಮೂಲಕ ರಾಜ್ಯದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜು ಅರಸುಮತ್ತು ಬ್ರಹ್ಮ ಶ್ರೀ ನಾರಾಯಣ ಗುರುಗಳಿಗೆ ಅವಮಾನ ಮಾಡಲು ಹೊರಟಿದ್ದಾರೆ ಎಂದು ಸಮಾಜದ ಮುಖಂಡರು ಗ್ರಾಮಸ್ತರು ಅಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here

error: Content is protected !!