Home Uncategorized ಕಲಬುರಗಿಯಲ್ಲಿ ಸಂತ ಶ್ರೀ ಆಸಾರಾಮಜೀ ಬಾಪು ಆಶ್ರಮ ಕಲಬುರಗಿ ಯ ಮಾತೆಯರಿಂದ ಕಲಬುರಗಿ ಸೆಂಟ್ರಲ್ ಜೈಲ್ ನಲ್ಲಿ ನಿನ್ನೆ ರಕ್ಷಾಬಂಧನ ಕಾರ್ಯಕ್ರಮವನ್ನು ಆಚರಿಸಲಾಯಿತು

ಕಲಬುರಗಿಯಲ್ಲಿ ಸಂತ ಶ್ರೀ ಆಸಾರಾಮಜೀ ಬಾಪು ಆಶ್ರಮ ಕಲಬುರಗಿ ಯ ಮಾತೆಯರಿಂದ ಕಲಬುರಗಿ ಸೆಂಟ್ರಲ್ ಜೈಲ್ ನಲ್ಲಿ ನಿನ್ನೆ ರಕ್ಷಾಬಂಧನ ಕಾರ್ಯಕ್ರಮವನ್ನು ಆಚರಿಸಲಾಯಿತು

0

ಕಲಬುರಗಿಯಲ್ಲಿ ಸಂತ ಶ್ರೀ ಆಸಾರಾಮಜೀ ಬಾಪು ಆಶ್ರಮ ಕಲಬುರಗಿ ಯ ಮಾತೆಯರಿಂದ ಕಲಬುರಗಿ ಸೆಂಟ್ರಲ್ ಜೈಲ್ ನಲ್ಲಿ ನಿನ್ನೆ ರಕ್ಷಾಬಂಧನ ಕಾರ್ಯಕ್ರಮವನ್ನು ಆಚರಿಸಲಾಯಿತು.
ಬಾಪುಜಿ ಯವರ ಮಾರ್ಗದರ್ಶನ ದಂತೆ ಜೈಲಿನ ಖೈದಿಗಳಿಗೆ ಮತ್ತು ಅಲ್ಲಿನ ಸುರಕ್ಷಾ ಸಿಬ್ಬಂದಿಗಳಿಗೆ ರಕ್ಷೆಯನ್ನು ಕಟ್ಟಿ ಸಿಹಿ ತಿನ್ನಿಸುವ ಮೂಳಕ ಆಚರಿಸಿದರು.
ತದನಂತರ ಪೂಜ್ಯ ಬಾಪೂಜಿ ಯಾವರ ಸತ್ಸಂಗ ಪ್ರವಚನ ವನ್ನೂ ಕೇಳಿಸಲಾಯಿತು, ಸತ್ಸಂಗದ ಸಾಹಿತ್ಯ ಪುಸ್ತಕಗಳ ವಿತರಣೆ ಮಾಡಲಾಯಿತು.
ಪೂಜ್ಯ ಗುರುದೇವರು ಹೇಳುವಂತೆ, ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ತಪ್ಪುಗಳು ಆಗುತ್ತವೆ, ಅದರಿಂದ ಹೊರಬಂದು ಕಲ್ಯಾಣ ಮಾರ್ಗದಲ್ಲಿ ನಡೆಯುವ ಅವಕಾಶವನ್ನು ಭಗವಂತನೇ ತೋರಿಸುತ್ತಾನೆ. ತಮ್ಮ ಜೀವನದಲ್ಲಿ ನಡೆದಿರುವ ತಪ್ಪುಗಳನ್ನು ತಿದ್ದಿಕೊಂಡು, ದೇವರ ನಾಮಸ್ಮರಣೆ, ಕೀರ್ತನೆ, ಜಪ ಇತ್ಯಾದಿಗಳಿಂದ ಜೀವನವನ್ನು ಉತ್ತಮ ರೀತಿಯಿಂದ ಮುನ್ನಡೆಸಿ, ಖೈದಿಗಳ ಜೀವನದಲ್ಲಿ ಪರಮಾತ್ಮ ನ ಪ್ರಕಾಶ ಸಿಗುವಂತಾಗಲಿ ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ವನ್ನು ಏರ್ಪಡಿಸಲಾಗಿತ್ತು. ಎಲ್ಲ ಖೈದಿಗಳು ಕಾರ್ಯಕ್ರಮದಲ್ಲಿ ಉತ್ಸುಕತೆ ಇಂದ ಪಾಲ್ಗೊಂಡ ಭಜನೆ ಕೀರ್ತನೆ ಮಾಡಿದರು.
ಇಂತಹ ಅರ್ಥಪೂರ್ಣ ಕಾರ್ಯಕ್ರಮವನ್ನು ಏರ್ಪಡಿಸಿದ್ದಕ್ಕಾಗಿ ಆಶ್ರಮ ಸಮಿತಿಯ ಅಧ್ಯಕ್ಷ ರಾದ Sಙಪಾಟೀಲ್ ಅವರು ಮಾತೆಯರಿಗೆ ಅಭಿನಂದನೆ ಸಲ್ಲಿಸಿದರು. ಮುಂದೆಯೂ ಈ ತರಹದ ಅರ್ಥಪೂರ್ಣ ಕಾರ್ಯಕ್ರಮಗಳು ಆಗಲಿ ಎಂದು ತಿಳಿಸಿದರು

LEAVE A REPLY

Please enter your comment!
Please enter your name here

error: Content is protected !!