. ಮುಡಾ ಹಗರಣದ ವಿಚಾರವಾಗಿ ರಾಜ್ಯಪಾಲರು ಪ್ರಾಸಿಕ್ಯೂಷನ್’ಗೆ ಸಿಎಂ ಅವರ ಮೇಲೆ ಅನುಮತಿ ಕೊಟ್ಟಿದ್ದು, ಸಿಧ್ದರಾಮಯ್ಯನವರು ಆದಷ್ಟು ಬೇಗ ರಾಜಿನಾಮೆ ಕೊಡಬೇಕು ಎಂದು ಜೆಡಿಎಸ್ ನಾಯಕ ಬಾಲರಾಜ್ ಗುತ್ತೇದಾರ್ ಅವರು ಹೇಳಿದ್ದಾರೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಹಗರಣ ನಡೆದಿದೆ ಎನ್ನುವ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧದ ತನಿಖೆಗೆ ರಾಜ್ಯಪಾಲರು ಅನುಮತಿ ನೀಡಿರುವ ವಿಚಾರವಾಗಿ ಕಲಬುರಗಿ ನಗರದಲ್ಲಿ ಮಾತನಾಡಿದ ಅವರು ಸಿದ್ದರಾಮಯ್ಯನವರು ಮುಡಾ ಹಗರಣದ ವಿಚಾರವಾಗಿ ಸಂಪೂರ್ಣವಾಗಿ ವಿಫಲರಾಗಿದ್ದು, ಸಿದ್ದರಾಮಯ್ಯನವರು ಎಂದರೆ ಜನರಲ್ಲಿ ಒಳ್ಳೆಯ ವಿಚಾರಗಳಿದ್ದವು ಆದರೆ ಇತ್ತೀಚೆಗೆ ನಡೆದ ಮುಡಾ ಹಗರಣದಲ್ಲಿ ಸಿಧ್ದರಾಮಯ್ಯನವರು ಭಾಗಿಯಾಗಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ, ಸಿಎಂ ಎಂಬ ದೊಡ್ಡ ಪದವಿಯಲ್ಲಿರುವ ಸಿದ್ದರಾಮಯ್ಯನವರು ನೈತಿಕತೆ ಹೊಣೆ ಹೊತ್ತು ರಾಜಿನಾಮೆ ನೀಡಬೇಕು. ಯಾವುದೇ ರೀತಿಯಿಂದ ಮುಂದುವರಿಯದೇ ತನಿಖೆಯಾದಮೇಲೆ ಪುನಃ ಅವರು ಪಕ್ಷದಿಂದ ಅಧಿಕಾರ ಬರಲಿ ಎಂದಿದ್ದಾರೆ





