ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ನಡೆದ ಇಂಗ್ಲಿಷ್ ವಿಭಾಗದಲ್ಲಿ ಚಿನ್ನದ ಪದಕಕ್ಕೆ ಆಯ್ಕೆಯಾಗಿದ್ದಾಗಿ ಹೇಳಿ ವಿದ್ಯಾರ್ಥಿನಿಯೊಬ್ಬರಿಗೆ ಪತ್ರ ಕಳುಹಿಸಿದ್ದ ವಿಶ್ವವಿದ್ಯಾಲಯವು ಆ ವಿದ್ಯಾರ್ಥಿನಿ ಬದಲು ಬೇರೆಯವರಿಗೆ ಪದಕ ನೀಡಿ ಯಡವಟ್ಟು ಮಾಡಿಕೊಂಡಿದ್ದರಿಂದ ವೇದಿಕೆಯಲ್ಲಿದ್ದ ಗಣ್ಯರು ಮುಜುಗರ ಅನುಭವಿಸುವಂತಾಯಿತು. ವಿಶ್ವವಿದ್ಯಾಲಯ ಕಳುಹಿಸಿದ್ದ ಪತ್ರವನ್ನು ಹಿಡಿದುಕೊಂಡು ಬಂದಿದ್ದ ಬೀದರ್ ಜಿಲ್ಲೆ ಭಾಲ್ಕಿಯ ಸಿ. ಬಿ. ವಿಜ್ಞಾನ, ಕಲಾ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿನಿ ರೋಷನಿಗೆ ತಪ್ಪಿದೆ