ಸಡಗರ ಸಂಭ್ರಮದಿಂದ ನಾಗರಪಂಚಮಿ ಹಬ್ಬ ಆಚರಣೆ ಮಾಡಲಾಗುತ್ತಿದೆ.ನಾಗರ ಪಂಚಮಿ ಹಬ್ಬದ ನಿಮಿತ್ಯವಾಗಿ ಮಹಿಳೆಯರು ಯಾದಗಿರಿ ನಗರದ ವಿವಿಧ ದೇವಸ್ಥಾನಗಳಿಗೆ ತೆರಳಿ ನಾಗಪ್ಪನ ಮೂರ್ತಿಗೆ ಹಾಲನೆರೆದರು.ನಾಗಪ್ಪನ ಮೂರ್ತಿಗಳಿಗೆ ನೈವೇದ್ಯ ಅರ್ಪಿಸಿದರು.ಲಕ್ಷ್ಮೀನಗರದ ಲಕ್ಷ್ಮಿ ದೇವಸ್ಥಾನದಲ್ಲಿ ಮಹಿಳೆಯರು ಆಗಮಿಸಿ ನಾಗಪ್ಪನ ಮೂರ್ತಿಗೆ ಹಾಲನೆರೆದು ದೇವರ ಕೃಪೆಗೆ ಪಾತ್ರರಾದರು.