ಕಾಂಗ್ರೆಸ್ ಯುವ ಮುಖಂಡ ಸದ್ದಾಂ ಕೆ ಆಲಗೂರ ಜಮೀರ್ ಅಹ್ಮದ್ ಖಾನ್ ಅವರು ಬರಿ ಮುಸ್ಲಿಂ ಸಮಾಜಕ್ಕೆ ಸೀಮಿತ ಅಲ್ಲದೇ, ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಕೂಡ ಸ್ಪಂದಿಸುವ ವ್ಯಕ್ತಿತ್ವವುಳ್ಳ ಗುಣದವರು. ರಾಜ್ಯಾದ್ಯಂತ ಅವರದೇ ಆದ ಒಂದು ಅಭಿಮಾನಿ ಬಳಗ ಹೊಂದಿರುವ ಒಬ್ಬ ವ್ಯಕ್ತಿ. ಅವರ ಹುಟ್ಟುಹಬ್ಬ ಸಿಂದಗಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಅವರ ಅಭಿಮಾನಿ ಬಳಗ ವತಿಯಿಂದ ಸರಳವಾಗಿ ಬಡ ರೋಗಿಗಳಿಗೆ ಹಣ್ಣು ಹಂಪಲು, ಹಾಗೂ ದಿನಸಿ ಸಾಮಗ್ರಿಗಳ ಕಿಟ್ ವಿತರಣೆ ಮಾಡುವ ಮೂಲಕ ಆಚರಣೆ ಮಾಡಲಾಯಿತು ಎಂದರು