ಕೋಲಿ ಸಮಾಜ ಎಸ್ಟಿಗೆ ಸೇರಿಸಲು ರಾಜ್ಯ ಕೇಂದ್ರ ಸರ್ಕಾರಗಳ ನಿರ್ಲಕ್ಷ್ಯ: ಉಮೇಶ ಮುದ್ನಾಳ ಆರೋಪ
ಯಾದಗಿರಿ: ನಿಜಶರಣ ಅಂಬಿಗರ ಚೌಡಯ್ಯನವರ ನಾಮಫಲಕ ಲೋಕಾರ್ಪಣೆಗೊಳಿಸಿದ ಉಮೇಶ ಕೆ ಮುದ್ನಾಳ
ಯಾದಗಿರಿ: ಜಿಲ್ಲೆಯ ಗುರುಮಠಕಲ್ ತಾಲ್ಲೂಕಿನ ಸೈದಾಪೂರ ಹೋಬಳಿಯಲಿ ಬರುವ ಅಜಲಾಪುರ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ನಾಮಫಲಕ ಲೋಕಾರ್ಪಣೆ ಗೊಳಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ. ಮುದ್ನಾಳ, ಸಮಾಜ ಬಾಂಧವರು ನಿಜಅಂಬಿಗರ ಚೌಡಯ್ಯನವರ ತತ್ವಾದರ್ಶ ಪ್ರತಿಯೊಬ್ಬರು ಪಾಲಿಸಬೇಕು ಎಂದು ಕರೆ ನೀಡಿದರು.
ಕೋಲಿ ಸಮಾಜ ರಾಜಕೀಯ, ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರಣ ಏಕೆಂದರೆ, ಟೋಕ್ರಿ ಕೋಲಿ ಬಿಟ್ಟುಹೊದ ಪರ್ಯಾಯ ಪದಗಳಾದ ಕೋಲಿ ಕಬ್ಬಲಿಗ, ಅಂಬಿಗ, ಬೆಸ್ತ ಸೇರಿದಂತೆ ಅನೇಕ ಪದಗಳನ್ನು ಪರಿಶಿಷ್ಟ ಪಂಗಡದಲ್ಲಿ ಸೇರಿಸಲು ವಿಠಲ್ ಹೇರೂರು ಅವರು ಸಾಕಷ್ಟು ವರ್ಷಗಳ ಹೋರಾಟ ಮಾಡಿದರೂ ಸಹ ಸೇರ್ಪಡ ಮಾಡದ ರಾಜಕಾರಣಿಗಳು ಅನ್ಯಾಯ ಮಾಡಿದ್ದಾರೆ.
ಚುನಾವಣೆ ಬಂದಾಗ ಮಾತ್ರ ಕೋಲಿ ಸಮಾಜ ಪರಿಶಿಷ್ಟ ಪಂಗಡಕ್ಕೆ ಸೇರಿಸುವುದಾಗಿ ಇಲ್ಲಸಲ್ಲದ ಸುಳ್ಲು ಹೇಳುತ್ತಾ ಮತ ಪಡೆಯುತ್ತಾ ಬಂದಿದ್ದು ಆ [ಪಕ್ಷಗಳಲ್ಲಿರುವ ನಮ್ಮ ಮುಖಂಡರಿAದ ಹೇಳಿಕೆ ಕೊಡಿಸುತ್ತಾ ಮರಳು ಮಾಡುತ್ತಾ ಬಂದಿದ್ದಾರೆ. ಆದ್ದರಿಂದ ಸಮಾಜಿಕರು ಜಾಗೃತರಾಗಬೇಕು, ರಾಜಕಾರಣಿಗಳು ಬಂದಾಗ ಪ್ರತಿಯೊಬ್ಬರು ಪ್ರಶ್ನೆ ಕೇಳುವಂತಾಗಬೇಕು ಅಂದಾಗ ಮಾತ್ರ ಸಮಾಜವನ್ನು ಗುರ್ತಿಸುತ್ತಾರೆ ಹೀಗಾಗಿ ಜಾಗೃತರಾಗಿ ಎಂದು ಕರೆ ನೀಡಿದರು.
ಇದಕ್ಕೂ ಮುನ್ನ ಪ್ರಮುಖ ರಸ್ತೆಗಳ್ಲಲಿ ಅಂಬಿಗರ ಚೌಡಯ್ಯನವರ ಭಾವಚಿತ್ರವನ್ನು ಛತ್ರಿ ಚಾಮರಗಳೊಂದಿಗೆ ಮೆರವಣಿಗೆ ಮಾಡಲಾಯಿತು.





