ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದ ಹಸಿರು ಸಂಪದ ಬಳಗದ ಏಳನೆಯ ವಾರ್ಷೀಕೋತ್ಸವ, ವಿಶ್ವ ಪರಿಸರ ದಿನಾಚರಣೆ ಹಾಗೂ “ಪರಿಸರ ಪ್ರೇಮಿ” ಪ್ರಶಸ್ತಿ ಪ್ರದಾನ..
ಪರಿಸರ ಸಂರಕ್ಷಣೆ ಇಂದಿನ ಮೊದಲ ಆದ್ಯತೆಯಾಗಿದ್ದು ಅದರ ರಕ್ಷಣೆಗೆ ಪಟ್ಟಣದಲ್ಲಿನ ಹಸಿರು ಸಂಪದ ಬಳಗ ಕ್ರಿಯಾತ್ಮಕವಾಗಿ ಕಾರ್ಯ ನಿರ್ವಹಿಸುತ್ತಿದೆ. ಇಲ್ಲಿ ವಿವಿಧ ವೃತ್ತಿಯವರೆಲ್ಲ ಸೇರಿ ಪಟ್ಟಣದ ಹಸಿರು ಸಂಪದ ಬಳಗ, ಪುರಸಭೆ ತಾಳಿಕೋಟೆ ಹಾಗೂ ಪ್ರಾದೇಶಿಕ ಅರಣ್ಯ ಇಲಾಖೆಗಳ (ಕೆ.ಬಿ.ಜೆ.ಎನ್.ಎಲ್.) ಸಹಯೋಗದಲ್ಲಿ ಆಯೋಜಿಸಿದ್ದ. ಹಸಿರು ಸಂಪದ ಬಳಗದ ಏಳನೆಯ ವಾರ್ಷೀಕೋತ್ಸವ, ವಿಶ್ವ ಪರಿಸರ ದಿನಾಚರಣೆ ಹಾಗೂ “ಪರಿಸರಪ್ರೇಮಿ” ಪ್ರಶಸ್ತಿ ಪ್ರದಾನ ಸಮಾರಂಭವನ್ನು ಲಕ್ಷ್ಮಿ ಕ್ಲಾಸ್ ಸ್ಟೋರ್ ಮನೆ ಆವರಣದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮನ್ನು ಶ್ರೀ ಶಿವಶರಣೆ ಹೇಮರಡ್ಡಿ ಮಲ್ಲಮ್ಮನವರ ದೇವಸ್ಥಾನದಲ್ಲಿ ಸಸಿಗಳನ್ನು ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು..
ಹಸಿರೆ ಉಸಿರು ಎನ್ನುವ ಹವ್ಯಾಸ ಹೊತ್ತವರು ಈ ಬಳಗದಲ್ಲಿದ್ದೀರಿ ಹಸಿರಿನ ಹಣತೆ ಹಚ್ಚುವವರು ಈ ಬಳಗದಲ್ಲಿದ್ದೀರಿ. ಇಂತಹ ಕಾರ್ಯಗಳು ಎಲ್ಲೆಡೆ ಶ್ಲಾಗನೀಯವಾಗುತ್ತವೆ, ಮಾದರಿಯಾಗುತ್ತವೆ, ಪ್ರೇರಣೆಯಾಗುತ್ತವೆ. ನಮ್ಮ ಭೂಮಿಯನ್ನು ಉಳಿಸುವ ಕಾರ್ಯವನ್ನು ತಾಳಿಕೋಟೆ ಪಟ್ಟಣದ ಹಸಿರು ಸಂಪದ ಬಳಗದ ಮಾಡುತ್ತಿರುವ ಕಾರ್ಯಕ್ಕೆ ಮುದ್ದೇಬಿಹಾಳ ಸಾಮಾಜಿಕ ವಲಯದ ಆರ್.ಎಫ್.ಓ, ಎಸ್ ಜಿ ಸಂಗಾಲಕ ಅವರು ಮೆಚ್ಚುಗೆ ವ್ಯಕ್ತ ಪಡಿಸಿದರು.
“ಪರಿಸರ ಪ್ರೇಮಿ” ಪ್ರಶಸ್ತಿ ಪುರಸ್ಕೃತರು- ಸಾರ್ವಜನಿಕ ವಲಯದಿಂದ ಮುಕ್ತಿಧಾಮದ ನಿರ್ವಹಣೆಗಾಗಿ ಸಂಜು ಕದಮ್
ಅರಣ್ಯ ಇಲಾಖೆಯಿಂದ ವಾಚರ್ ಮಲ್ಲಿಕಾರ್ಜುನ ಇಬ್ರಾಹಿಂಪುರ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು…
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ
ತಾ.ಪಂ.ಇ ಓ. ಬಿ ಆರ್ ಬಿರಾದಾರ, ಹಸಿರು ಸಂಪದ ಬಳಗದ ಅಧ್ಯಕ್ಷರಾದ ಡಾ: ವಿ ಎಸ್ ಕಾರ್ಚಿ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಾರದ ಆರ್ ಎಸ್ ದೇಶಪಾಂಡೆ, ಕೆ.ಬಿ.ಜೆ.ಎನ್.ಎಲ್. ಅರಣ್ಯ ಇಲಾಖೆ ಆಲಮಟ್ಟಿ ಬಿ ಐ ಬಿರಾದಾರ, ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುರೇಶ್ ಹೊಸಮನಿ ಎಸ್ ಎಸ್ ವಿ ಟಿವಿ ನ್ಯೂಸ್ ತಾಳಿಕೋಟೆ,
ಈ ಸಂದರ್ಭದಲ್ಲಿ : ಮಹೇಶ್ ಬೇಮಳಗಿ, ಸುಭಾಷ್ ಪಾಟೀಲ್, ಶರಣು ಸ್ವಂತ್, ಶ್ರೀನಿವಾಸ್ ಬಡಿಗೇರ್,ಶಿವಲಿಂಗಯ್ಯ ಶಾಸ್ತ್ರಿ,ರುದ್ರಮುನಿ ರಾಮತೀರ್ಥ, ರಾಜು ದಬ್ಬಾ,ಮಾಣಿಕ್ ಗುಲಗುಂಜಿ, ರಾಜು ಮಳಖೆಡ್, ನಾಗೇಶ್, ಸಿದ್ದು ಸ್ವಾಮಿ ಸೇರಿದಂತೆ ಅನೇಕರು ಇದ್ದರು.





