ಕಲಬುರಗಿ ನಗರದ ಪತ್ರಿಕಾ ಭವನದಲ್ಲಿ ಇಂದು ಕರ್ನಾಟಕ ಈಶಾನ್ಯ ಪದವೀಧರ ಮತಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುನೀಲಕುಮಾರ ವಂಟಿ ಅವರ ನೇತೃತ್ವದಲ್ಲಿ ಸುದ್ದಿಗೋಷ್ಟಿ ನಡೆಸಲಾಯಿತು. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸುನೀಲಕುಮಾರ ಅವರು ಸಾಮಾನ್ಯವಾಗಿ ವಿಧಾನ ವಿಧಾನ ಪರಿಷತ್ ಚುಣಾವಣೆ ನಡೆದಾಗ ಸ್ವತಂತ್ರ ಅಭ್ಯರ್ಥಿಗಳನ್ನೊಳಗೊಂಡಂತೆ ಯಾವ ಪಕ್ಷಕ್ಕೂ ಚುಣಾವಣಾ ಚಿಹ್ನೆಗಳನ್ನು ನೀಡುವುದಿಲ್ಲ ಹಾಗೂ ನಿಯಮದಂತೆ ಚಿಹ್ನೆ ಇರುವುದಿಲ್ಲ. ಆದರೂ ರಾಜಕೀಯ ಪಕ್ಷಗಳು ತಮ್ಮ ಬೆಂಬಲಿತ ಅಭ್ಯರ್ಥಿಗಳ ಪರ ಚುಣಾವಣಾ ಪ್ರಚಾರ ಮಾಡುವುದು ವಾಡಿಕೆಯಾಗಿದೆ. ನಮ್ಮ ಈ ಭಾಗ ಹಿಂದುಳಿದಿರುವುದು ಎಲ್ಲರಿಗೂ ತಿಳಿದ ವಿಚಾರ. ಆದರೆ ತಮ್ಮ ಕಾರ್ಯಕರ್ತರ ಮೂಲಕ ಈ ಚುಣಾವಣೆಯನ್ನು ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಳ್ಳುತ್ತಿವೆ ಎಂದರು.





