Home Uncategorized ಗೊಬ್ಬುರ ಗ್ರಾಮದಲ್ಲಿ ಮೂಲಭೂತ ಸೌ ಕರ್ಯಗಳಿಲ್ಲ ಅಧಿಕಾರಿಗಳ ನಿರ್ಲಕ್ಷವೇ ಕಾರಣ ಗ್ರಾಮದ ಜನರ ಆಕ್ರೊಶ

ಗೊಬ್ಬುರ ಗ್ರಾಮದಲ್ಲಿ ಮೂಲಭೂತ ಸೌ ಕರ್ಯಗಳಿಲ್ಲ ಅಧಿಕಾರಿಗಳ ನಿರ್ಲಕ್ಷವೇ ಕಾರಣ ಗ್ರಾಮದ ಜನರ ಆಕ್ರೊಶ

0
ಗೊಬ್ಬುರ ಗ್ರಾಮದಲ್ಲಿ ಮೂಲಭೂತ ಸೌ ಕರ್ಯಗಳಿಲ್ಲ  ಅಧಿಕಾರಿಗಳ ನಿರ್ಲಕ್ಷವೇ ಕಾರಣ  ಗ್ರಾಮದ ಜನರ  ಆಕ್ರೊಶ

ಗೊಬ್ಬುರ ಬಿ ಗ್ರಾಮದ ಜನರು ಹಲವಾರು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದು, ಇದಕ್ಕೆ  ಸ್ಥಳೀಯ ಅಧಿಕಾರಿಗಳ ನಿರ್ಲಕ್ಷವೇ ಕಾರಣ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತು ಒಂದು ವರದಿ ಇಲ್ಲಿದೆ.

ಹೌದು ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಗೊಬ್ಬುರ (ಬಿ) ಗ್ರಾಮದಲ್ಲಿನ ಶಿವಾಜಿನಗರ ಏರಿಯಾದ ಜನರು ಹಲವು ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ನೀರಿನ ಸಮಸ್ಯೆ, ಶೌಚಾಲಯದ ಸಮಸ್ಯೆ, ಚರಂಡಿ ನೀರಿನ ಸಮಸ್ಯೆಗಳು ಇಲ್ಲಿ ಎದ್ದು ಕಾಣುತ್ತಿವೆ. ಆದರೆ ಇಲ್ಲಿನ ಪಿಡಿಓ ಆಗಲಿ, ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಲಿ ಜನರ ಸಮಸ್ಯೆ ಕೇಳುವುದು ದೂರದ ಮಾತು ಎಂಬಂತಾಗಿದೆ. ಹಾಗೆಯೇ ಇಲ್ಲಿನ ಮನೆಗಳಿಗೆ ಕಳೆದ ಮೂರ್ನಾಲ್ಕು ದಿನಗಳಿಂದ ಕರೆಂಟ್ ಬಂದಿರುವುದಿಲ್ಲ. ಆದರೆ ಇದಕ್ಕೆ ಸಂಬಧಪಟ್ಟ ಅಧಿಕಾರಿಗಳನ್ನು ಕೇಳಿದರೆ ಸರಿಯಾಗಿ ಸ್ಪಂದಿಸುತ್ತಿಲ್ಲ. ನಮ್ಮ ಸಮಸ್ಯೆಗಳನ್ನು ಯಾರಿಗೆ ಹೇಳುವುದು, ಎಲೆಕ್ಷನ್ ಬಂತು ಅಂದ್ರೆ ಸಾಕು ಕೈಕಾಲು ಹಿಡಿಯುತ್ತಾ ಬರ್ತಾರೆ. ಎಲೆಕ್ಷನ್ ಮುಗೀತು ಅಂದ್ರೆ ಸಾಕು ಈ ಕಡೆ ತಲೆ ಕೂಡ ಹಾಕಲ್ಲ ಎನ್ನುತ್ತಾರೆ ಇಲ್ಲಿಯ ಗ್ರಾಮಸ್ಥರು. ಹಾಗಾಗಿ ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಗ್ರಾಮಸ್ಥರ ಅಳಲನ್ನು ಆಲಿಸುತ್ತಾರಾ ಎಂದು ಕಾದು ನೋಡಬೇಕಿದೆ.

LEAVE A REPLY

Please enter your comment!
Please enter your name here

error: Content is protected !!