Google search engine
ಮನೆUncategorizedಬಸವ ಉತ್ಸವ ಸಮಿತಿ ವತಿಯಿಂದ ಸಂಭ್ರಮದ ಬಸವ ಯಾತ್ರೆ ಹಮ್ಮಿಕೊಳ್ಳಲಾಗಿತ್ತು

ಬಸವ ಉತ್ಸವ ಸಮಿತಿ ವತಿಯಿಂದ ಸಂಭ್ರಮದ ಬಸವ ಯಾತ್ರೆ ಹಮ್ಮಿಕೊಳ್ಳಲಾಗಿತ್ತು

ಯಾದಗಿರಿ ನಗರದಲ್ಲಿ  ಅದ್ದೂರಿಯಾಗಿ ಜಗಜ್ಯೋತಿ ಬಸವೇಶ್ವರ ಮೂರ್ತಿಯ ಮೆರವಣಿಗೆ ನಡೆಸಲಾಯಿತು.ಬಸವ ಉತ್ಸವ ಸಮಿತಿ ವತಿಯಿಂದ ಸಂಭ್ರಮದ ಬಸವ ಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಯಾದಗಿರಿಯ ಬಸವೇಶ್ವರ ವೃತ್ತದಲ್ಲಿ  ಬಸವೇಶ್ವರ ಮೂರ್ತಿಗೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು.ಬಸವೇಶ್ವರ ವೃತ್ತದಿಂದ  ಮೆರವಣಿಗೆ ಆರಂಭಗೊಂಡು ಮೈಲಾಪುರ ಅಗಿಸಿ ಚಕ್ರಕಟ್ಟ, ಗಾಂಧಿ ವೃತ ಅಮೃತೇಶ್ವರ ದೇವಸ್ಥಾನದವರೆಗೆ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು.

ಮೆರವಣಿಗೆಯಲ್ಲಿ‌ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರ, ಮಾಜಿ ಶಾಸಕ ವೆಂಕಟರೆಡ್ಡಿ ಮುದ್ನಾಳ,ಯುವ ಮುಖಂಡರಾದ ಮಹೇಶರೆಡ್ಡಿ ಮುದ್ನಾಳ, ಸನ್ನಿಗೌಡ ತುನ್ನೂರ,

ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ಬಸವಾಭಿಮಾನಿಗಳು ಭಾಗವಹಿಸಿದ್ದರು‌.

ಮೆರಣಿಗೆಯಲ್ಲಿ ವಾದ್ಯಮೇಳ ಹಾಗೂ ಡಿಜೆ ಸೌಂಡ್ಗೆ ಬಸವಾಭಿಮಾನಿಗಳು ಕುಣಿದು ಕುಪ್ಪಳಿಸಿದರು.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!