Google search engine
ಮನೆUncategorizedಐಟಿಐ ವಿದ್ಯಾರ್ಥಿಗಳಿಂದ ನಿರೀಕ್ಷೆಗೂ ಮೀರಿದ ಕೌಶಲ್ಯ ಪ್ರದರ್ಶನ, 100 ಪ್ರಾಜೆಕ್ಟ್ಗಳ ಪ್ರದರ್ಶನ

ಐಟಿಐ ವಿದ್ಯಾರ್ಥಿಗಳಿಂದ ನಿರೀಕ್ಷೆಗೂ ಮೀರಿದ ಕೌಶಲ್ಯ ಪ್ರದರ್ಶನ, 100 ಪ್ರಾಜೆಕ್ಟ್ಗಳ ಪ್ರದರ್ಶನ

ಐಟಿಐ ವಿದ್ಯಾರ್ಥಿಗಳಿಂದ ನಿರೀಕ್ಷೆಗೂ ಮೀರಿದ ಕೌಶಲ್ಯ ಪ್ರದರ್ಶನ, 100 ಪ್ರಾಜೆಕ್ಟ್ಗಳ ಪ್ರದರ್ಶನ ಕಲಬುರಗಿ, ಏಪ್ರಿಲ್.18.(ಕರ್ನಾಟಕ ವಾರ್ತೆ) ಗ್ರಾಮೀಣ ಭಾಗದ ವಿದ್ಯಾರ್ಥಿಗಳು ನಿರೀಕ್ಷೆಗೂ ಮೀರಿದ ಕೌಶಲ್ಯ ಪ್ರದರ್ಶಿಸಿದ್ದಾರೆ. ಭವಿಷ್ಯದಲ್ಲಿ ಐಟಿಐ ಪಾಸಾದ ಅಭ್ಯರ್ಥಿಗಳಿಗೆ ಜೆಸ್ಕಾಂನಲ್ಲಿ ಅಪ್ರೆಂಟಿಶಿಪ್ ತರಬೇತಿ ಹಾಗೂ ಲೈನ್ಮನ್ ಹುದ್ದೆಗಳಲ್ಲಿ ಆದ್ಯತೆ ನೀಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಗುಲಬರ್ಗಾ ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತ ಅಧ್ಯಕ್ಷ ಪ್ರವೀಣ ಪಾಟೀಲ ಹರವಾಳ ಹೇಳಿದರು ನಗರದಲ್ಲಿ ಶನಿವಾರ ಸರ್ಕಾರಿ ಕೈಗಾರಿಕಾ ತರಬೇತಿ(ಪುರುಷ)ಸಂಸ್ಥೆಯಲ್ಲಿ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಹಾಗೂ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಪುರುಷ) ಕಲಬುರಗಿ ನೋಡಲ್ ಜಿಲ್ಲೆಯ ಸರಕಾರಿ ಮತ್ತು ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳ ಸಂಯೋಜನೆಯಲ್ಲಿ ತಾಂತ್ರಿಕ ಕೌಶಲ್ಯ ಸ್ಪರ್ಧೆ/ಪ್ರದರ್ಶನ 2026 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಅಲ್ಲದೆ, ಸಂಸ್ಥೆಯ ಉನ್ನತೀಕರಣಕ್ಕೆ ಅಗತ್ಯವಿರುವ ಅನುದಾನಕ್ಕಾಗಿ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುವುದಾಗಿ ತಿಳಿಸಿದರು ಖ್ಯಾತ ಉದ್ದಿಮಿ ಅರುಣಕುಮಾರ ಲೋಯಾ ಅವರು ಮಾತನಾಡಿ, ತರಬೇತಿದಾರರು ಕೇವಲ ನೌಕರಿಗಾಗಿ ಕಾಯದೆ, ತಾವೇ ಉದ್ಯಮ ಸ್ಥಾಪಿಸಿ ಇತರರಿಗೆ ಉದ್ಯೋಗದಾತರಾಗಬೇಕು ಎಂದು ಹೇಳಿದರು ದಾವಣಗೆರೆ ಐ.ಟಿ.ಓ.ಟಿ ಜಂಟಿ ನಿರ್ದೇಶಕ ರವೀಂದ್ರನಾಥ ಎಸ್. ಬಾಳ್ಳಿ ಅವರು ಮಾತನಾಡಿ ತರಬೇತಿದಾರರ ಹಿತದೃಷ್ಟಿಯಿಂದ ಕೈಗಾರಿಕೆಗಳ ಜೊತೆ ಒಪ್ಪಂದ ಮಾಡಿಕೊಳ್ಳುವ ಅಗತ್ಯತೆಯನ್ನು ಪ್ರತಿಪಾದಿಸಿದರು ಜಿಲ್ಲೆಯ ವಿವಿಧ ಸರ್ಕಾರಿ ಹಾಗೂ ಅನುದಾನಿತ ಐಟಿಐ ಸಂಸ್ಥೆಗಳ ಸುಮಾರು 1000 ತರಬೇತಿದಾರರು ಈ ಬೃಹತ್ ಪ್ರದರ್ಶನದಲ್ಲಿ ಪಾಲ್ಗೊಂಡು ತಮ್ಮ ತಾಂತ್ರಿಕ ನೈಪುಣ್ಯತೆಯನ್ನು ಪ್ರದರ್ಶಿಸಿದರು ಈ ಪ್ರದರ್ಶನದಲ್ಲಿ ಒಟ್ಟು 100 ತಾಂತ್ರಿಕ ಪ್ರಾಜೆಕ್ಟ್ಗಳನ್ನು ಪ್ರದರ್ಶಿಸಲಾಯಿತು. ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದಿಂದ 32, ಉತ್ಪಾದನಾ ವಿಭಾಗದಿಂದ 28, ಆಟೋಮೋಟಿವ್ನಿಂದ 19 ಸೇರಿದಂತೆ ಕನ್ಸ್ಟ್ರಕ್ಷನ್, ಐಟಿ ಹಾಗೂ ಇತರ ವಿಭಾಗಗಳ ಮಾದರಿಗಳು ಜನರ ಗಮನ ಸೆಳೆದವು. ಲಭ್ಯವಿರುವ ಕಡಿಮೆ ಸಂಪನ್ಮೂಲಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ತಯಾರಿಸಿದ ಈ ಪ್ರಾಜೆಕ್ಟ್ಗಳು ಅವರ ಪ್ರಾಯೋಗಿಕ ಜ್ಞಾನಕ್ಕೆ ಕನ್ನಡಿ ಹಿಡಿದಿದ್ದವು ಸಂಸ್ಥೆಯ ಪ್ರಾಚಾರ್ಯರಾದ ಮುರಲಿಧರ ರತ್ನಗಿರಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಉಪನಿರ್ದೇಶಕಿ ಡಾ. ರುಬಿನಾ ಪರ್ವೀನ್, ಶಕೀಲ ಅನ್ಸಾರಿ ಸೇರಿದಂತೆ ವಿವಿಧ ಐಟಿಐಗಳ ಪ್ರಾಚಾರ್ಯರು, ಬೋಧಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!