ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಚಟ್ನಳ್ಳಿ ಗ್ರಾಮದ ನಿವಾಸಿಗಳ ಗೋಳು ಕೇಳೋರ್ ಯಾರು ?
ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಚಟ್ನಳ್ಳಿ ಗ್ರಾಮದ ನಿವಾಸಿಗಳ ಗೋಳು ಕೇಳೋರ್ ಯಾರು ?
ಯಾದಗಿರಿ ಶಹಾಪುರ ತಾಲೂಕಿನ ಯಾದಗಿರಿ ಸಮೀಪ ಚಟ್ನಳ್ಳಿ ಗ್ರಾಮದಲ್ಲಿ ಮೂಲಸೌಕರ್ಯಗಳು ಮರೀಚಿಕೆಯಾಗಿದ್ದು, ಮುಖ್ಯ ರಸ್ತೆಗಳು ಕೆಸರು ಗದ್ದೆಗಳಾಗಿ ಮಾರ್ಪಟ್ಟಿವೆ
ಈ ಗ್ರಾಮದಲ್ಲಿ ಚರಂಡಿ, ಸಿಸಿ ರಸ್ತೆ ಸೇರಿದಂತೆ ಇತರೆ ಸೌಲಭ್ಯಗಳಿಲ್ಲ. ಸುಮಾರ ವರ್ಷಗಳಿಂದ ರಸ್ತೆಗಳಲ್ಲಿ ಚರಂಡಿ ನೀರು ಹರಿದುಬರುತ್ತಿದ್ದು, ಸಂಚಾರಕ್ಕೆ ತೀವ್ರ ಸಮಸ್ಯೆಯಾಗಿದೆ ಈ ಬಗ್ಗೆ ಸಂಬAದಪಟ್ಟ ಅಧಿಕಾರಿಗಳಿಗೆ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ. ಚರಂಡಿ ನೀರಿನಿಂದ ಸೊಳ್ಳೆಗಳು ಉತ್ಪತ್ತಿಯಾಗುತಿದ್ದು, ಗ್ರಾಮಸ್ಥರು ಸಾಂಕ್ರಾಮಿಕ ರೋಗ ಹರಡುವು ಭೀತಿಯಲ್ಲಿ ಬದುಕು ಪರಸ್ಥಿತಿ ನಿರ್ಮಾಣವಾಗಿವೆ ತಕ್ಷಣ ಚರಂಡಿ ಸ್ವಚ್ಛಗೊಳಿಸಿ ತಗ್ಗು ಗುಂಡಿಗಳನ್ನು ಮರಮನಿಂದ ಮುಚ್ಚಿ ಕಲುಷಿತ ನೀರು ನಿಲ್ಲದಂತೆ ಮಾಡಬೇಕು ಬ್ಲಿಚಿಂಗ್ ಪೌಡರ ಸಿಂಪರಣೆ ಮಾಡಿ ಫಾಗಿಂಗ್ ಮಾಡುವು ಮುಖಾಂತರ ಸೊಳ್ಳೆಗಳ ನಿಯಂತ್ರಣ ಮಾಡಿ ಸಾರ್ವಜನಿಕರಿಗೆ ಯಾವುದೇ ರೋಗಗಳು ಬರದಂತೆ ಸ್ವಚ್ಛತೆ ಕಾಪಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ ಇದಲ್ಲದೆ ಮುಂದಿನ ದಿನಗಳಲ್ಲಿ ಎಲ್ಲಾ ಕಡೆ ಸಿಸಿರಸ್ತೆ ಚರಂಡಿ ನಿರ್ಮಾಣ ಮಾಡಿ ಗ್ರಾಮದ ಅಭಿವೃದ್ಧಿಗೆ ಮುಂದಾಗಬೇಕೆAದು ಒತ್ತಾಯಿಸಿದ್ದಾರೆ





