Google search engine
ಮನೆCOOKING WITH KITCHEN TIPSಚಿಲ್ಲಿ ಪನ್ನೀರ್ ಮಾಡುವ ವಿಧಾನ

ಚಿಲ್ಲಿ ಪನ್ನೀರ್ ಮಾಡುವ ವಿಧಾನ

 

ಚಿಲ್ಲಿ ಪನ್ನೀರ್ ಮಾಡುವ ಬೇಕಾಗುವ ಸಾಮಗ್ರಿ

 

ಪನ್ನೀರ್‌ 250 ಗ್ರಾಂ

2 ಚಮಚ ಟೊಮೆಟೊ ಕೆಚಪ್‌
1 ಚಮಚ ಸೋಯಾ ಸಾಸ್‌

1 ದೊಡ್ಡ ಈರುಳ್ಳಿ

1 ದೊಡ್ಡ ಕ್ಯಾಪ್ಸಿಕಂ

3 ಹಸಿ ಮೆಣಸಿನಕಾಯಿ
ಅರ್ಧ ಇಂಚಿನಷ್ಟು ದೊಡ್ಡದಿರುವ ಶುಂಠಿ

1 ಚಮಚ ಚಿಲ್ಲಿ ಸಾಸ್‌

1 ಚಮಚ ವಿನೆಗರ್‌

ಸ್ವಲ್ಪ ಕೊತ್ತಂಬರಿ ಸೊಪ್ಪು

ಅರ್ಧ ಕಪ್‌ ಎಣ್ಣೆ

ರುಚಿಗೆ ತಕ್ಕ ಉಪ್ಪು

ಚಿಲ್ಲಿ ಪನ್ನೀರ್ ಮಾಡುವ ವಿಧಾನ

 

ಪನ್ನೀರ್‌ ಕತ್ತರಿಸಿ. ಈರುಳ್ಳಿ ಹಾಗೂ ಕ್ಯಾಪ್ಸಿಕಂ ಅನ್ನು ಉದ್ದುದ್ದವಾಗಿ ತೆಳುವಾಗಿ ಕತ್ತರಿಸಿ

ಬೆಳ್ಳುಳ್ಳಿ ಹಾಗೂ ಶುಂಠಿಯನ್ನು ಚಿಕ್ಕದಾಗಿ ಕತ್ತರಿಸಿ. ಹಸಿ ಮೆಣಸಿನಕಾಯಿಯನ್ನು ಉದ್ದುದ್ದವಾಗಿ ಕತ್ತರಿಸಿ

ಈಗ ಪ್ಯಾನ್‌ ಅನ್ನು ಬಿಸಿ ಮಾಡಿ, ಎಣ್ಣೆ ಹಾಕಿ. ಎಣ್ಣೆ ಬಿಸಿಯಾದಾಗ ಪನ್ನೀರ್‌ ಕ್ಯೂಬ್‌ ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ ಒಂದು ತಟ್ಟೆಯಲ್ಲಿ ಹಾಕಿಡಿ. ಈಗ ಅದೇ ಪ್ಯಾನ್‌ಗೆ 1 ಚಮಚ ಎಣ್ಣೆ ಹಾಕಿ ಶುಂಠಿ, ಬೆಳ್ಳುಳ್ಳಿ ಹಾಕಿ 2 ನಿಮಿಷ ಫ್ರೈ ಮಾಡಿ, ಈರುಳ್ಳಿ ಹಾಗೂ ಕ್ಯಾಪ್ಸಿಕಂ, ಹಸಿ ಮೆಣಸಿನಕಾಯಿ ಹಾಕಿ ಈರುಳ್ಳಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ. ಹೀಗೆ ಫ್ರೈ ಮಾಡುವಾಗ ರುಚಿಗೆ ತಕ್ಕ ಉಪ್ಪು ಸೇರಿಸಿ ಈಗ ಫ್ರೈ ಆದ ಮಿಶ್ರಣಕ್ಕೆ ವಿನೆಗರ್, ಸೋಯಾ ಸಾಸ್, ಚಿಲ್ಲಿ ಸಾಸ್‌, ಟೊಮೆಟೊ ಕೆಚಪ್‌ ಹಾಕಿ ಮಿಕ್ಸ್ ಮಾಡಿದರೆ ಕ್ಯಾಪ್ಸಿಕಂ ಚಿಲ್ಲಿ ರೆಡಿ. ಈಗ ರೆಡಿಯಾದ ಪನ್ನೀರ್‌ ಚಿಲ್ಲಿಯನ್ನು ಕೊತ್ತಂಬಿ ಸೊಪ್ಪಿನಿಂದ ಅಲಂಕರಿಸಿದರೆ ಚಿಲ್ಲಿ ಪನ್ನೀರ್‌ ರೆಡಿ

 

 

 

 

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!