Home COOKING WITH KITCHEN TIPS ಎಗ್ ಬಿರಿಯಾನಿ ಮಾಡುವ ವಿಧಾನ

ಎಗ್ ಬಿರಿಯಾನಿ ಮಾಡುವ ವಿಧಾನ

0
ಎಗ್ ಬಿರಿಯಾನಿ ಮಾಡುವ ವಿಧಾನ

ಎಗ್ ಬಿರಿಯಾನಿ ಮಾಡುವ ವಿಧಾನ

 

 

ಎಗ್ ಬಿರಿಯಾನಿ ಬೇಕಾಗುವ ಪದಾರ್ಥಗಳು

 

.ಮೊಟ್ಟೆ- ಬೇಯಿಸಿದ್ದು 6

.ಸೋನಾ ಮಸೂರಿ ಅಕ್ಕಿ- ಅರ್ಧ ಕೆಜಿ

  • 3.ಏಲಕ್ಕಿ-5-6
  • ಚಕ್ಕೆ, ಲವಂಗ- ಸ್ವಲ್ಪ
  • ಶುಂಠಿ, ಬಳ್ಳುಳ್ಳಿ ಪೇಸ್ಟ್- 1 ಚಮಚ
  • ಟೊಮೆಟೋ- 2 (ಸಣ್ಣಗೆ ಕತ್ತರಿಸಿದ್ದು)
  • ಹಸಿಮೆಣಸಿನ ಕಾಯಿ- ಉದ್ದಕ್ಕೆ ಕತ್ತರಿಸಿದ್ದು 6
  • ಈರುಳ್ಳಿ 2 (ಸಣ್ಣಗೆ ಕತ್ತರಿಸಿದ್ದು)
  • ಕೊಬ್ಬಂಬರಿ ಸೊಪ್ಪು
  • ದನಿಯಾ ಪುಡಿ- 1 ಚಮಚ
  • ಮೊಸರು ಅಥವಾ ತೆಂಗಿನ ಹಾಲು – ಅರ್ಧಬಟ್ಟಲು
  • ದನಿಯಾ ಪುಡಿ- 1 ಚಮಚ
  • ಬಿರಿಯಾನಿ ಮಸಾಲೆ ಪುಡಿ- ಅರ್ಧ ಚಮಚ
  • ಖಾರದ ಪುಡಿ- 1 ಚಮಚ
  • ಅರಿಶಿಣದ ಪುಡಿ- ಅರ್ಧ ಚಮಚ
  • ಎಣ್ಣೆ- ಸ್ವಲ್ಪ
  • ತುಪ್ಪ- ಎರಡು ಚಮಚ
  • ಉಪ್ಪು- ರುಚಿಗೆ ತಕ್ಕಷ್ಟು

ಮೊದಲಿಗೆ ಒಲೆಯ ಮೇಲೆ ಕುಕ್ಕರ್ ಇಟ್ಟು ಅದಕ್ಕೆ ತುಪ್ಪ ಹಾಗೂ ಎಣ್ಣೆಯನ್ನು ಹಾಕಿ ಕಾಯಿಸಿಕೊಳ್ಳಿ ನಂತರ ಇದಕ್ಕೆ ಚಕ್ಕೆ, ಲವಂಗ, ಪಲಾವ್ ಎಲೆ, ಏಲಕ್ಕಿ, ಕಲ್ಲು ಹೂ ಹಾಕಿ ಕೆಂಪಗೆ ಮಾಡಿಕೊಳ್ಳಿ.

ನಂತರ ಈರುಳ್ಳಿ ಹಾಗೂ ಹಸಿಮೆಣಸಿನ ಕಾಯಿ ಹಾಕಿ ಕೆಂಪಗೆ ಹುರಿದುಕೊಳ್ಳಿ. ಬಳಿಕ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಕೊತ್ತಂಬರಿ ಸೊಪ್ಪು ಹಾಗೂ ಟೊಮೆಟೋವನ್ನು ಹಾಕಿ ಕೆಂಪಗೆ ಹುರಿದುಕೊಳ್ಳಿ.

ನಂತರ ಖಾರದ ಪುಡಿ, ಅರಿಶಿಣ, ದನಿಯಾ ಪುಡಿ ಹಾಗೂ ಬಿರಿಯಾನಿ ಮಸಾಲಾ ಪುಡಿ ಹಾಕಿ ಮಿಶ್ರಣ ಮಾಡಿಕೊಳ್ಳಿ. ಬಳಿಕ ಮೊಸಲು ಅಥವಾ ತೆಂಗಿನ ಹಾಲು ಹಾಕಿ 5-10 ನಿಮಿಷ ಕುದಿಸಿ. ಅಳತೆಗೆ ತಕ್ಕಷ್ಟು ನೀರು ಹಾಗೂ ನೆನೆಸಿಟ್ಟುಕೊಂಡ ಅಕ್ಕಿಯನ್ನು ಹಾಕಿ ಕುಕ್ಕರ್ ಮುಚ್ಚಳ ಮುಚ್ಚಿ 2-3 ಕೂಗು ಕೂಗಿಸಿಕೊಂಡು, ಬೇಯಿಸಿದ ಮೊಟ್ಟೆಗಳನ್ನು ಮಿಶ್ರಣ ಮಾಡಿದರೆ, ರುಚಿಕರವಾದ ಎಗ್ ಬಿರಿಯಾನಿ ಸವಿಯಲು ಸಿದ್ಧ

 

 

 

 

 

 

LEAVE A REPLY

Please enter your comment!
Please enter your name here

error: Content is protected !!