ಶಿವಶರಣರ ನಡೆನುಡಿಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕೊತ್ತಲಬಸವೇಶ್ವರ ದೇವಾಲಯದ ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು ಸೇಡಂ 12 ನೇ ಶತಮಾನದ ಪ್ರತಿಯೊಬ್ಬರ ಶಿವಶರಣರ ನಡೆನುಡಿಗಳು ನಮ್ಮ ಜೀವನದಲ್ಲಿ ಇಂದಿನ ಯುವ ಪೀಳಿಗೆ ಅಳವಡಿಸಿಕೊಳ್ಳಬೇಕೆಂದು ಕೊತ್ತಲಬಸವೇಶ್ವರ ದೇವಾಲಯದ ಪೀಠಾಧಿಪತಿ ಶ್ರೀ ಸದಾಶಿವ ಸ್ವಾಮಿಜಿ ಹೇಳಿದರು ನಿಜಶರಣ ಅಂಬಿಗರ ಚೌಡಯ್ಯ ಸೇವಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪಲ್ಲಕ್ಕಿ ಮಹೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಗಾಟಿಸಿ ಮಾತನಾಡಿ ದಿವಂಗತ ವಿಠ್ಠಲ್ ಹೇರೂರ ಅವರು ತಮ್ಮ ಜೀವಿತ ಅವಧಿಯಲ್ಲಿ ಕೋಲಿ ಸಮಾಜವನ್ನು ಜನಜಾಗೃತಿ ಗೊಳಿಸಿ ಅಂಬಿಗರ ಚೌಡಯ್ಯನವರು ನಮ್ಮ ಗುರು ಎಂದು ಪರಿಚಿಯಿಸಿ ಸರಕಾರದಿಂದಲೇ ಜಯಂತಿ ಆಚರಿಸಲು ಹೋರಾಟ ಮಾಡಿದರು ಅವರ ತತ್ವ ಆದರ್ಶಗಳು ತಾವೆಲ್ಲರೂ ಪಾಲಿಸಬೇಕೆಂದು ಹೇಳಿದರು. ಹಾಲಪಯ್ಯ ವಿರಕ್ತ ಮಠದ ಪಂಚಾಕ್ಷರಿ ಸ್ವಾಮೀಜಿ ಮಾತನಾಡಿ 12 ನೇ ಶತಮಾನದಲ್ಲಿ ಬಸವಣ್ಣನವರ ಜೊತೆಗೆ ಇದ್ದು ಅವರ ದಿಟ್ಟವಾದ ನುಡಿಗಳು ನೇರವಾದ ವಚನಗಳಿಂದ ಇಡೀ ಸಮಾಜವನ್ನು ತಿದ್ದಿದಕ್ಕಾಗಿ ಅಣ್ಣ ಬಸವಣ್ಣನವರೆ ಅಂಬಿಗರ ಚೌಡಯ್ಯನವರಿಗೆ ಶರಣರಲ್ಲಿಯೇ ನೀನು ನಿಜಶರಣ ಎಂದು ಬಿರುದು ನೀಡಿದರು 12 ಶತಮಾನದಲ್ಲಿ ಹೇಳಿದ ವಚನಗಳು ಈಗ ಅದು ಸತ್ಯವಾಗಿ ಅನ್ನಿಸುತ್ತಿದೆ ಎಂದರು. ಡಾ ಬಾಗ್ಯಶ್ರೀ , ಪಲ್ಲವಿ ಗುತ್ತೇದಾರ, ಡಾ ಶ್ರೀನಿವಾಸ ಮೊಕದಮ್ ನಿಜಶರಣ ಅಂಬಿಗರ ಚೌಡಯ್ಯ ಅದ್ಯಕ್ಷ ಮಾತನಾಡಿದರು ರಾಜ್ಯ ಮಟ್ಟದ ವಿಜಯ ರತ್ನ ಪ್ರಶಸ್ತಿ ಪಡೆದ ಕೋಲಿ ಸಮಾಜದ ಮಹಿಳಾ ಘಟಕ ಅದ್ಯಕ್ಷೆ ಜ್ಯೋತಿ ಮಾರ್ಲಾ ಅವರಿಗೆ ಸತ್ಕರಿಸಲಸಯಿತು
ಶಿವಶರಣರ ನಡೆನುಡಿಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು
ಶಿವಶರಣರ ನಡೆನುಡಿಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು
RELATED ARTICLES
Recent Comments
ಮೇಲೆ Hello world!





