Home Uncategorized ಅಂತರಾಷ್ಟ್ರೀಯ ಕ್ರೀಡಾಪಟುಗೆ ಭವ್ಯ ಮೆರವಣಿಗೆ

ಅಂತರಾಷ್ಟ್ರೀಯ ಕ್ರೀಡಾಪಟುಗೆ ಭವ್ಯ ಮೆರವಣಿಗೆ

0
ಅಂತರಾಷ್ಟ್ರೀಯ ಕ್ರೀಡಾಪಟುಗೆ ಭವ್ಯ ಮೆರವಣಿಗೆ

ಅಂತರಾಷ್ಟ್ರೀಯ ಕ್ರೀಡಾಪಟುಗೆ ಭವ್ಯ ಮೆರವಣಿಗೆ ಕ್ರ ಎಸೆತದಲ್ಲಿ ಚಿನ್ನದ ಪದಕ ಗೆದ್ದ ಅಂತರಾಷ್ಟ್ರೀಯ ಕ್ರೀಡಾಪಟುಗೆ ಯಾದಗಿರಿಯಲ್ಲಿ ಭವ್ಯ ಮೆರವಣಿಗೆ ಮಾಡಿ ಸನ್ಮಾನಿಸಿ ಗೌರವಿಸಲಾಯಿತು. ನವೆಂಬರ್ 21 ರಂದು ಥೈಲ್ಯಾಂಡ್ ನಲ್ಲಿ ಪ್ಯಾರಾ ಒಲಂಪಿಕ್ ಕಮಿಟಿಯಿಂದ ಡಿಸ್ಕಸ್ ಥ್ರೋ ಕ್ರೀಡಾ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಯಾದಗಿರಿ ತಾಲೂಕಿನ ಅಲ್ಲಿಪುರ ದೊಡ್ಡ ತಾಂಡಾದ ಗ್ರಾಮೀಣ ಪ್ರತಿಭೆ ಕುಮಾರ್ ರಾಠೋಡ ಥೈಲ್ಯಾಂಡ್ ನಲ್ಲಿ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿ ಚಕ್ರ ಎಸೆತದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದರು.ತಾಂಡಾದ ಬಡ ಕ್ರೀಡಾಪಟು ಅಂತರಾಷ್ಟ್ರೀಯ ಮಟ್ಟದಲ್ಲಿ ಗೊಲ್ಡ್ ಮೇಡಲ್ ಪದಕ ಗಿಟ್ಟಿಸಿಕೊಂಡಿದಕ್ಕೆ,ಇಂದು ಯಾದಗಿರಿಗೆ ಆಗಮಿಸಿದ ಕ್ರೀಡಾ ಸಾಧಕನಿಗೆ ಗ್ರಾಮಸ್ಥರಿಂದ ಭವ್ಯ ಮೆರವಣಿಗೆ ಮಾಡಲಾಯಿತು. ಯಾದಗಿರಿ ರೈಲ್ವೆ ನಿಲ್ದಾಣದಿಂದ ನಗರದ ಸುಭಾಷ್ ವೃತ್ತದ ವರಗೆ ಮೆರವಣಿಗೆ ಮಾಡಲಾಯಿತು.ಬಂಜಾರ ಕಲಾತಂಡಗಳ ನೃತ್ಯದೊಂದಿಗೆ ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು. ಕ್ರೀಡಾ ಸಾಧಕನಿಗೆ ಸನ್ಮಾನಿಸಿ ಗೌರವಿಸಲಾಯಿತು

LEAVE A REPLY

Please enter your comment!
Please enter your name here

error: Content is protected !!