Home Uncategorized ಮಧ್ಯಂತರ ಜಾಮೀನು ಪಡೆದ್ರೂ ಆರ್.ಡಿ ಪಾಟೀಲ್ಗೆ ತಪ್ಪದ ಸಂಕಷ್ಟ: ಮತ್ತೊಂದು FIR

ಮಧ್ಯಂತರ ಜಾಮೀನು ಪಡೆದ್ರೂ ಆರ್.ಡಿ ಪಾಟೀಲ್ಗೆ ತಪ್ಪದ ಸಂಕಷ್ಟ: ಮತ್ತೊಂದು FIR

0
ಮಧ್ಯಂತರ ಜಾಮೀನು ಪಡೆದ್ರೂ ಆರ್.ಡಿ ಪಾಟೀಲ್ಗೆ ತಪ್ಪದ ಸಂಕಷ್ಟ: ಮತ್ತೊಂದು FIR

ಮಧ್ಯಂತರ ಜಾಮೀನು ಪಡೆದ್ರೂ ಆರ್.ಡಿ ಪಾಟೀಲ್ಗೆ ತಪ್ಪದ ಸಂಕಷ್ಟ: ಮತ್ತೊಂದು FIR ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಪ್ರಕರಣದ ಪ್ರಮುಖ ಆರೋಪಿ ಆರ್.ಡಿ.ಪಾಟೀಲ್ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲಾಗಿದೆ. ಜೈಲು ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. 3 ವಾರಗಳ ಮಧ್ಯಂತರ ಜಾಮೀನು ಪಡೆದು ನ.21ರಂದು ಜೈಲಿನಿಂದ ಆರ್.ಡಿ.ಪಾಟೀಲ್ ಬಿಡುಗಡೆಯಾಗಿದ್ದ. ಅದೇ ದಿನ ಕ್ಷುಲ್ಲಕ ಕಾರಣಕ್ಕೆ ಜೈಲು ಸಿಬ್ಬಂದಿ ಮೇಲೆ ಆತ ಹಲ್ಲೆ ನಡೆಸಿರುವ ಬಗ್ಗೆ ಕಲಬುರಗಿಯ ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆಇನ್ನು, ತನ್ನ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಿ ಆರ್.ಡಿ.ಪಾಟೀಲ್ನಿಂದಲೂ ಪ್ರತಿ ದೂರು ದಾಖಲಾಗಿದ್ದು, ಜೈಲು ಸಿಬ್ಬಂದಿ ಶಿವಕುಮಾರ್ ವಿರುದ್ಧ ಎಫ್ಐಆರ್ ಆಗಿದೆ. ಕಲಬುರಗಿಯ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿ ದಾಖಲಾಗಿದ್ದ ತನಗೆ ಸುಪ್ರೀಂಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಹೀಗಿದ್ದರೂ ನೀನು ಹೇಗೆ ಜಾಮೀನು ಪಡೆದುಕೊಂಡೆ ಎಂದು ಜೈಲು ಸಿಬ್ಬಂದಿ ಶಿವಕುಮಾರ್ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಜಾಮೀನು ಸಿಕ್ಕರೂ ನಿನ್ನ ಹೊರ ಹೋಗಲು ಬಿಡುವುದಿಲ್ಲ ಎಂದು ಅವರು ನನ್ನನ್ನು ತಳ್ಳಿದ್ದು, ಈ ವೇಳೆ ನನ್ನ ಎಡ ಕಿವಿಯಿಂದ ರಕ್ತಸ್ರಾವವಾಗಿದೆ. ಬೆನ್ನಿನ ಗಾಯದಿಂದ ಬಳಲುತ್ತಿದ್ದ ತನಗೆ ವೈದ್ಯಕೀಯ ಚಿಕಿತ್ಸೆಯ ಅವಶ್ಯಕತೆ ಇತ್ತು. ಹೀಗಾಗಿ ಬಿಡುಗಡೆಯಾದ ಬಳಿಕ ತಾನು ಚಿಕಿತ್ಸೆ ಪಡೆದಿದ್ದು, ಆ ದಾಖಲೆಗಳೇ ನನ್ನ ಮೇಲಿನ ಹಲ್ಲೆ ಸಾಬೀತುಪಡಿಸಲಿವೆ ಎಂದು ದೂರಿನಲ್ಲಿ ಆರ್.ಡಿ. ಪಾಟೀಲ್ ತಿಳಿಸಿದ್ದಾರೆ

LEAVE A REPLY

Please enter your comment!
Please enter your name here

error: Content is protected !!