Home Uncategorized ಜೇವರ್ಗಿ ಜೆಡಿಎಸ್ ಪಕ್ಷದ ಮುಖಂಡರ ಸುಳ್ಳು ಆರೋಪಗಳಿಗೆ ಭಾರತೀಯ ಪಕ್ಷ ಜೇವರ್ಗಿ ಮಂಡಲದ ವತಿಯಿಂದ ಪತ್ರಿಕಾ ಗೋಷ್ಠಿ

ಜೇವರ್ಗಿ ಜೆಡಿಎಸ್ ಪಕ್ಷದ ಮುಖಂಡರ ಸುಳ್ಳು ಆರೋಪಗಳಿಗೆ ಭಾರತೀಯ ಪಕ್ಷ ಜೇವರ್ಗಿ ಮಂಡಲದ ವತಿಯಿಂದ ಪತ್ರಿಕಾ ಗೋಷ್ಠಿ

0
ಜೇವರ್ಗಿ ಜೆಡಿಎಸ್ ಪಕ್ಷದ ಮುಖಂಡರ ಸುಳ್ಳು ಆರೋಪಗಳಿಗೆ ಭಾರತೀಯ ಪಕ್ಷ ಜೇವರ್ಗಿ ಮಂಡಲದ ವತಿಯಿಂದ ಪತ್ರಿಕಾ ಗೋಷ್ಠಿ

ಜೇವರ್ಗಿ ಜೆಡಿಎಸ್ ಪಕ್ಷದ ಮುಖಂಡರ ಸುಳ್ಳು ಆರೋಪಗಳಿಗೆ ಭಾರತೀಯ ಪಕ್ಷ ಜೇವರ್ಗಿ ಮಂಡಲದ ವತಿಯಿಂದ ಜೆಡಿಎಸ್ ನಾಯಕರ ನಡೆ ಖಂಡಿಸಿ ಇಂದು ನಗರದಲ್ಲಿ ಪತ್ರಿಕಾ ಗೋಷ್ಠಿ ಮೃತ್ರಿ ಧರ್ಮದ ಬಗ್ಗೆ ಮಾತನಾಡುವ ತಾವು ಲೋಕಸಭಾ ಚುನಾವಣೆಯಲ್ಲಿ ಮಾಡಿದ್ದಾದರೂ ಏನು ಎಂಬುದು ತಾಲೂಕಿನ ಜನತೆ ನೋಡಿದೆ 2) ಜೇವರ್ಗಿ ಪುರಸಭೆ ವಿಚಾರದಲ್ಲಿ ಬಿ.ಜೆ.ಪಿ. ಪಕ್ಷದ ಪುರ ಸಭೆ ಸದಸ್ಯರನ್ನು ಹೈಜಾಕ ಮಾಡಿದಾಗ ನಿಮಗೆ ಮೈತ್ರಿ ಧರ್ಮ ನೆನಪಾಗಲಿಲ್ಲವೇ? 3) ಈ ಹಿಂದೆ ನಡೆದ ಪುರಸಭೆ ಪಿ.ಎಲ್.ಡಿ. ಬ್ಯಾಂಕ ಚುನಾವಣೆಯಲ್ಲಿ ಕಾಂಗ್ರೇಸನೊಂದಿಗೆ ಅಗೋಚರ ಹೊಂದಾಣಿಕೆಯಾಗಿ ಚುನಾವಣೆ ಎದುರಿಸುವಾಗ ಮೈತ್ರಿ ಧರ್ಮ ನೆನಪಾಗಲಿಲ್ಲವೇ? ಡಿ.ಸಿ.ಸಿ. ಬ್ಯಾಂಕ ಕಲಬುರಗಿ ಮತ್ತು ಯಾದಗಿರಿ ನಿರ್ದೇಶಕರ ಸ್ಥಾನ ಚುನಾವಣೆಯಲ್ಲಿ ಜೆ.ಡಿ.ಎಸ್. ಪಕ್ಷದ ಮುಖಂಡರಾದ ಹಾಗೂ ಮಾಜಿ ಶಾಸಕರಾದ ದೊಡ್ಡಪ್ಪಗೌಡ ಪಾಟೀಲ ನರಿಬೋಳರವರ ಸಹೋದರ ಬಸವರಾಜ ಪಾಟೀಲ ನರಿಬೋಳರವರು ಚುನಾವಣೆಗೆ ಸ್ಪರ್ಧಿಸುವಾಗ ಮಾತ್ರ ಮೈತ್ರಿ ಧರ್ಮ ನೆನಪಾಯಿತೇ? ತಮಗೆ ಯಾಕೆ ಕಾರ್ಯಕರ್ತರ ಚುನಾವಣೆ ಸಂದರ್ಭದಲ್ಲಿ ಮೈತ್ರಿ ಧರ್ಮ ನೆನಪು ಮಾಡಿಕೊಳ್ಳಲಿಲ್ಲ ಎಂಬುದು ಜನತೆಗೆ ತಿಳಿಸಿ. ಡಿ.ಸಿ.ಸಿ. ಬ್ಯಾಂಕ ನಿರ್ದೇಶಕರ ಚುನಾವಣೆಯಲ್ಲಿ ಜಯ ಸಾಧಿಸಿದ ನಂತರ ನಿರ್ದೇಶಕರಾದ ಬಸವರಾಜ ಪಾಟೀಲ್ ನರಿಬೋಳರವರು ಮಾದ್ಯಮದ ಎದುರು ಹೇಳಿಕೆ ನೀಡುವ ಸಂದರ್ಭದಲ್ಲಿ ಬಿ.ಜೆ.ಪಿ ಪಕ್ಷದಿಂದ ಮೈತ್ರಿ ಧರ್ಮದ ಉಲ್ಲಂಘನೆಯಾಗಿದೆ ಎಂದು ಹೇಳಿಕೆ ನೀಡುವುದು ಅಷ್ಟೇ ಅಲ್ಲದೆ ಉದ್ದೇಶಪೂರ್ವಕವಾಗಿ ತಾಲೂಕಿನ ಜೇವರ್ಗಿ ಮತ್ತು ಯಡ್ರಾಮಿ ಜನತೆಗೆ ದಿಕ್ಕು ತಪ್ಪಿಸಲು ಬಿ.ಜೆ.ಪಿ ಪಕ್ಷವು ಕಾಂಗ್ರೇಸ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ ಎಂಬ ಆಧಾರರಹಿತ ಹಸಿ ಸುಳ್ಳನ್ನ ತಾವು ಹೇಳಿರುದನ್ನು ಜೇವರ್ಗಿ ಬಿ.ಜೆ.ಪಿ. ಕಟು ಶಬ್ದಗಳಿಂದ ಖಂಡಿಸುತ್ತದೆ

LEAVE A REPLY

Please enter your comment!
Please enter your name here

error: Content is protected !!